ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7th Pay Commission: ನವರಾತ್ರಿ ಹಬ್ಬಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಘೋಷಣೆ ಬಹುತೇಕ ಖಚಿತ

|
Google Oneindia Kannada News

ಕೇಂದ್ರ ಸರ್ಕಾರಿ ನೌಕರರ ಕಾಯುವಿಕೆ ಕೊನೆಯಾಗುವ ಸಮಯ ಸಮೀಪಿಸಿದೆ. ಕೇಂದ್ರ ಸರ್ಕಾರಿ ನೌಕರರು ಶೀಘ್ರದಲ್ಲೇ ತಮ್ಮ ತುಟ್ಟಿಭತ್ಯೆ (ಡಿಎ) ಪಡೆಯುವ ಸಾಧ್ಯತೆಯಿದೆ. ಡಿಎ ಫಂಡಿಂಗ್ ಈ ತಿಂಗಳು ಬರುವ ನಿರೀಕ್ಷೆಯಿದೆ. ಈ ತಿಂಗಳ ಅಂತ್ಯದಲ್ಲಿ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ. ಸೆಪ್ಟೆಂಬರ್ ತಿಂಗಳ ವೇತನಕ್ಕೆ ಹೆಚ್ಚುವರಿಯಾಗಿ ಡಿಎ ನೀಡಲಾಗುವುದು ಎಂದು ಹೇಳಲಾಗಿದೆ.

ಇತ್ತೀಚಿನ ಹಣದುಬ್ಬರ ಡೇಟಾವನ್ನು ಆಧರಿಸಿ ಈ ಅಂಕಿಅಂಶವನ್ನು ನಿರೀಕ್ಷಿಸಲಾಗಿದೆ. ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ (AICPI) 129 ಕ್ಕಿಂತ ಹೆಚ್ಚಿದೆ. ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ ಡೇಟಾದ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ ಮತ್ತು 2022 ರ ಜನವರಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಶೇಕಡ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಪಡೆದಿದ್ದರು. ಈಗ ಅದು ಶೇಕಡ 4ಕ್ಕೆ ಹೆಚ್ಚಾಗುತ್ತದೆ.

ನಿರೀಕ್ಷಿತ ಡಿಎ ಅಂಕಿಅಂಶವನ್ನು ಆಧರಿಸಿದ ಲೆಕ್ಕಾಚಾರಗಳ ಪ್ರಕಾರ, ರೂ. 31,550 ರ ಮೂಲ ವೇತನ ಹೊಂದಿರುವ ಉದ್ಯೋಗಿಗಳು ವಾರ್ಷಿಕವಾಗಿ ರೂ 15,144 ಹೆಚ್ಚಳವನ್ನು ಪಡೆಯುತ್ತಾರೆ. ಮತ್ತೊಂದೆಡೆ, ಗರಿಷ್ಠ 56,900 ರೂಗಳ ಮೂಲ ವೇತನವು ವಾರ್ಷಿಕವಾಗಿ ರೂ 27,312 ಹೆಚ್ಚಳವನ್ನು ಪಡೆಯುತ್ತದೆ ಎಂದು ವರದಿಯಾಗಿದೆ.

Fact Check: ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳ?Fact Check: ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳ?

 ನವರಾತ್ರಿ ವೇಳೆಗೆ ಡಿಎ ಹೆಚ್ಚಳ ಘೋಷಣೆ

ನವರಾತ್ರಿ ವೇಳೆಗೆ ಡಿಎ ಹೆಚ್ಚಳ ಘೋಷಣೆ

ಈ ಬಾರಿಯ ನವರಾತ್ರಿಯ ಹಬ್ಬದ ಕೊಡುಗೆಯಾಗಿ ಕೇಂದ್ರ ಸರ್ಕಾರದ ನೌಕರರು ಡಿಎ ಹೆಚ್ಚಳ ಉಡುಗೊರೆ ಸ್ವೀಕರಿಸುತ್ತಾರೆ. ನವರಾತ್ರಿಯ ಮೂರನೇ ದಿನ ಸೆಪ್ಟೆಂಬರ್ 28ರಂದು ಡಿಎ ಹೆಚ್ಚಳ ಘೋಷಣೆ ಮಾಡಲಾಗವುದು ಎಂದು ನಿರೀಕ್ಷಿಸಲಾಗಿದೆ. ಜುಲೈ 2022ರಿಂದ ಡಿಎ ನೀಡುವ ಸಾಧ್ಯತೆ ಇದೆ. ಡಿಎ ಹೆಚ್ಚಳ ಘೋಷಣೆಯಾದರೆ ಜುಲೈ 1, 2022 ರಂತೆ ಡಿಎ ಶೇಕಡ 38ರಷ್ಟು ಪಡೆಯಲಿದ್ದಾರೆ. ನೌಕರರು ಎರಡು ತಿಂಗಳ ಡಿಎ ಬಾಕಿಯನ್ನು ಸಹ ಪಡೆಯುತ್ತಾರೆ.

ಮುಂದಿನ ಸುತ್ತಿನ ಕ್ಯಾಬಿನೆಟ್ ಸಭೆಗಳ ನಂತರ ಘೋಷಣೆ ಮಾಡಬಹುದೆಂದು ಇತ್ತೀಚಿನ ವರದಿಗಳು ಖಚಿತಪಡಿಸಿವೆ.

ದಸರಾ ಹಬ್ಬಕ್ಕೆ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಕೊಡುಗೆ ನೀಡಲಿದೆಯಾ ಕೇಂದ್ರ ಸರ್ಕಾರ?ದಸರಾ ಹಬ್ಬಕ್ಕೆ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಕೊಡುಗೆ ನೀಡಲಿದೆಯಾ ಕೇಂದ್ರ ಸರ್ಕಾರ?

 ಶೇಕಡ 38ರಷ್ಟು ಡಿಎ ಮೊತ್ತ ಪಡೆಯುವುದು ಯಾವಾಗ

ಶೇಕಡ 38ರಷ್ಟು ಡಿಎ ಮೊತ್ತ ಪಡೆಯುವುದು ಯಾವಾಗ

ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇಕಡ 38 ಆಗಲಿದೆ. ಸೆಪ್ಟೆಂಬರ್ 2022 ರ ಸಂಬಳವು ಹೊಸ ತುಟ್ಟಿ ಭತ್ಯೆಯನ್ನು ಒಳಗೊಂಡಿರುತ್ತದೆ. ಕೇಂದ್ರ ನೌಕರರು ಜುಲೈ ಮತ್ತು ಆಗಸ್ಟ್‌ ಎರಡು ತಿಂಗಳ ಡಿಎ ಬಾಕಿಯನ್ನು ಪಡೆಯುತ್ತಾರೆ. ಡಿಎ ಹೆಚ್ಚಳವು ಜುಲೈ 1, 2022 ರಿಂದ ಜಾರಿ ಮಾಡಲಾಗುತ್ತಿದೆ.

ದಸರಾ ಹಬ್ಬದ ಸಂದರ್ಭದಲ್ಲಿ ಸರ್ಕಾರ ಸಂಬಳದ ಜೊತೆ ತುಟ್ಟಿಭತ್ಯೆಯನ್ನು ಪಾವತಿ ಮಾಡುವ ನಿರೀಕ್ಷೆ ಇದೆ. ರಜೆಯ ದಿನಗಳಲ್ಲಿ ಕೇಂದ್ರ ಸರ್ಕಾರದ ನೌಕರರು ದೊಡ್ಡ ಮೊತ್ತದ ಸಂಬಳವನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.

 18 ತಿಂಗಳ ಡಿಎ ಬಾಕಿ ಬಿಡುಗಡೆ ಯಾವಾಗ?

18 ತಿಂಗಳ ಡಿಎ ಬಾಕಿ ಬಿಡುಗಡೆ ಯಾವಾಗ?

18 ತಿಂಗಳ ಅವಧಿಯ ಡಿಎ ಬಾಕಿ ಬಿಡುಗಡೆ ಮಾಡಬೇಕೆಂಬ ಕೇಂದ್ರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಗೆ ಇನ್ನೂ ಕೇಂದ್ರ ಸರ್ಕಾರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಸರ್ಕಾರಿ ನೌಕರರು ತಮ್ಮ ಒತ್ತಾಯವನ್ನು ಮುಂದುವರೆಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಜನವರಿ 2020 ಮತ್ತು ಜೂನ್ 2021 ರ ನಡುವೆ ತುಟ್ಟಿಭತ್ಯೆ ಹೆಚ್ಚಳವನ್ನು ಸ್ಥಗಿತಗೊಳಿಸಲಾಗಿತ್ತು. ಅದೇ ಡಿಎ ಬಾಕಿಯನ್ನು ನೀಡುವಂತೆ ಕೇಂದ್ರ ಸರ್ಕಾರಿ ನೌಕರರು ಈಗ ಒತ್ತಾಯ ಮಾಡುತ್ತಿದ್ದಾರೆ.

 ಡಿಎ ಹೆಚ್ಚಳದ ಬಳಿಕ ವೇತನ ಎಷ್ಟಾಗಲಿದೆ ಪರೀಕ್ಷಿಸಿ

ಡಿಎ ಹೆಚ್ಚಳದ ಬಳಿಕ ವೇತನ ಎಷ್ಟಾಗಲಿದೆ ಪರೀಕ್ಷಿಸಿ

7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ(ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ. ಒಂದು ವೇಳೆ ನೌಕರನ ಮೂಲ ವೇತನ 56,900 ರುಪಾಯಿ ಆಗಿದ್ದರೆ ಪ್ರಸ್ತುತ ನೌಕರ 19,346 ರುಪಾಯಿ ತುಟ್ಟಿಭತ್ಯೆ ಪಡೆಯುತ್ತಿರುತ್ತಾರೆ. ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ 21,622 ರುಪಾಯಿ ಪಡೆಯಲಿದ್ದಾರೆ.

ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ವೇತನ 2,276 ರೂಪಾಯಿ ಹೆಚ್ಚಳವಾಗಲಿದೆ. ವಾರ್ಷಿಕವಾಗಿ ವೇತನ 27,312 ರೂಪಾಯಿ ಹೆಚ್ಚಳವಾಗಲಿದೆ. ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ.

English summary
The central government employees' wait is finally over because they will likely soon receive their Dearness Allowance (DA). This Navratri, the employees of the central government will receive a present. On September 28, the third day of Navratri, the announcement is anticipated to be made.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X