• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್ 2020: ಸುಳ್ಳಾದ ಸಂಬಳ ಏರಿಕೆ ನಿರೀಕ್ಷೆ, ಡಿಎ ಹೆಚ್ಚಳ ಎಷ್ಟು?

By ವಿಕಾಸ್ ನಂಜಪ್ಪ
|

ನವದೆಹಲಿ, ಜನವರಿ 09: 2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಈ ನಡುವೆ ಸರ್ಕಾರಿ ನೌಕರರು ಏನೇನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಲಭ್ಯ ಮಾಹಿತಿ ಪ್ರಕಾರ, ಸಂಬಳ ಏರಿಕೆ ಕುರಿತಂತೆ ಈ ಬಾರಿ ಬಜೆಟ್ ನಲ್ಲಿ ಯಾವುದೇ ಘೋಷಣೆ ನಿರೀಕ್ಷಿಸುವಂತಿಲ್ಲ. ಬದಲಿಗೆ ಶುಭ ಸುದ್ದಿಯೊಂದು ಸಿಗಲಿದೆ.

   BJP declares receiving donations over Rs 700 crore in FY 2018-19 | Oneindia Kannada

   7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರಿ ನೌಕರರಿಗೆ 18,000 ರು ಕನಿಷ್ಠ ವೇತನ ಪ್ರತಿ ತಿಂಗಳಿಗೆ ಸಿಗಲಿದೆ. ವೇತನ ಸಂಹಿತೆಯ ಕರಡು ಪ್ರತಿಯಂತೆ ಉದ್ಯೋಗಿಗಳು ದಿನಕ್ಕೆ 9 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೇತನವನ್ನು ನಿರ್ಧರಿಸಲು ಮೂರು ಭೌಗೋಳಿಕ ವರ್ಗೀಕರಣಗಳನ್ನು ಸೂಚಿಸಲಾಗಿತ್ತು. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಇನ್ನೂ ಯಾವುದೇ ಸೂಚನೆ ಇಲ್ಲಿ ತನಕ ಬಂದಿಲ್ಲ. ಈ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಸಾಧ್ಯತೆಯಿದೆ.

   ರಾಷ್ಟ್ರೀಯ ಕನಿಷ್ಠ ವೇತನ (National minimum floor wage) ಬದಲಾವಣೆಗೆ ಸೂಚಿಸಿರುವ ಸಲಹಾ ಮಂಡಳಿಯ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರಿ ನೌಕರರ ಸಂಬಳ ಶೇ28ರಷ್ಟು ಏರಿಕೆಯಾಗಲಿದೆ. ಇದನ್ನು ರಾಜ್ಯ ಸರ್ಕಾರಿ ನೌಕರರಿಗೂ ಹಂತ ಹಂತವಾಗಿ ಜಾರಿಗೊಳಿಸಲು ಸೂಚಿಸಲಾಗಿದೆ.

   7ನೇ ವೇತನ ಆಯೋಗದ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ, ಭತ್ಯೆ, ಕೆಲಸದ ಅವಧಿ, ರಜಾ ದಿನ ನಿಗದಿ ಮಾಡುವಂತೆ ಬೇಡಿಕೆ ಇದ್ದೆ ಇದೆ.

   ಶೇ 4 ರಷ್ಟು ಡಿಎ ಹೆಚ್ಚಳ ನಿರೀಕ್ಷೆಯಿದೆ

   ಶೇ 4 ರಷ್ಟು ಡಿಎ ಹೆಚ್ಚಳ ನಿರೀಕ್ಷೆಯಿದೆ

   ಕೇಂದ್ರ ಸರ್ಕಾರ ತುಟ್ಟಿ ಭತ್ಯೆ(ಡಿಎ) ಹಾಗೂ ತುಟ್ಟಿ ಪರಿಹಾರ (ಡಿಆರ್) ಗಳನ್ನು ಜುಲೈ 01,2018ರಿಂದ ಅನ್ವಯವಾಗುವಂತೆ ಶೇ.2ರಷ್ಟು ಹೆಚ್ಚಳ ಮಾಡಲಾಗಿತ್ತು. ಶೇ3ರಷ್ಟು ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆ ಹೊಂದಿದ್ದ ನೌಕರರಿಗೆ ಈಗ ಶೇ 5ರಷ್ಟು ತುಟ್ಟಿಭತ್ಯೆ ಸಿಗಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಅನುತ್ಪಾದನಾ ಮಿಲಿತ ಬೋನಸ್(Non Product linked) ನೀಡಲಾಗಿದೆ. ಜನವರಿ 2020 ರಿಂದ ಜೂನ್ 2020 ರ ಅವಧಿಗೆ ಶೇ 4 ರಷ್ಟು ಡಿಎ ಹೆಚ್ಚಳ ನಿರೀಕ್ಷೆಯಿದೆ.

   ಗ್ರಾಹಕ ದರ ಸೂಚಿ ಆಧಾರ ಮೇಲೆ ನಿಗದಿ

   ಗ್ರಾಹಕ ದರ ಸೂಚಿ ಆಧಾರ ಮೇಲೆ ನಿಗದಿ

   ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ. ಈ ಏರಿಕೆಯ ಅನುಕೂಲವನ್ನು 48.41 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.03 ಲಕ್ಷದಷ್ಟಿರುವ ಪಿಂಚಣಿದಾರರು ಪಡೆಯಲಿದ್ದಾರೆ. ಡಿಸೆಂಬರ್ ತಿಂಗಳಿನ ಗ್ರಾಹಕ ದರ ಸೂಚಿ (consumer price index) ಶೇ5 ರಷ್ಟಾದರೆ, ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿತ್ತು. ಆದರೆ, ಇದೆಲ್ಲವನ್ನು ಮೀರಿ ಮುಂದಿನ ಅವಧಿ ಜನವರಿ 2020ಕ್ಕೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗುತ್ತದೆ.

   ಸಂಬಳ ಏರಿಕೆ ನಿರೀಕ್ಷೆ

   ಸಂಬಳ ಏರಿಕೆ ನಿರೀಕ್ಷೆ

   ಕೇಂದ್ರದ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯು ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಂತೆ, ಜುಲೈ 2018ರ ಪ್ರಕಾರ ಕನಿಷ್ಠ ವೇತನ 375 ರೂ., ಕನಿಷ್ಠ ಮಾಸಿಕ ವೇತನ 9,750 ರೂ ಹಾಗೂ ನಗರ ಮೂಲದ ಕಾರ್ಮಿಕರಿಗೆ 1,430 ರೂ. ವಸತಿ ಭತ್ಯೆಯನ್ನು ನೀಡಬೇಕೆಂದು ಸೂಚಿಸಲಾಗಿದೆ. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಯಾವುದೇ ಸೂಚನೆ ಇಲ್ಲ. ಕೇಂದ್ರ ಸರ್ಕಾರಿ ನೌಕರರಿಗೆ ಸಾರಿಗೆ ಭತ್ಯೆ (Travel Allowance) ಕೂಡಾ ನೀಡಲಾಗುತ್ತಿದೆ. ಟಿಎ ಮೌಲ್ಯ ಸೇರಿಸಿದ ಬಳಿಕ ಸಂಬಳ 810 ರು ನಿಂದ 4,320ರುಗೇರಲಿದೆ. ಒಟ್ಟಾರೆ 720 ರು ನಿಂದ 10,000 ರು ತನಕ ಸಂಬಳ ಏರಿಕೆ ನಿರೀಕ್ಷೆಯಿದೆ.

   ಕನಿಷ್ಟ ವೇತನ ಹೆಚ್ಚಳ ಬೇಡಿಕೆ ಈಡೇರಿಲ್ಲ

   ಕನಿಷ್ಟ ವೇತನ ಹೆಚ್ಚಳ ಬೇಡಿಕೆ ಈಡೇರಿಲ್ಲ

   ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆ ಇನ್ನೂ ಈಡೇರಿಲ್ಲ. ಕನಿಷ್ಠ ವೇತನ 21 ಸಾವಿರ ರು ನಿಂದ 26 ಸಾವಿರ ರು ತನಕ ಏರಿಕೆ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದ್ದರೂ ಈ ಬಾರಿ ಬಜೆಟ್ ನಲ್ಲಿ ಘೋಷಣೆಯಾಗುವುದಿಲ್ಲ.

   ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

   English summary
   Ahead of the Union Budget there is talk that there would be some good news relating to the 7th Pay Commission.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X