ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರ್ಸನಲ್ ಲೋನ್ ಕಡಿಮೆ ಬಡ್ಡಿ ದರದಲ್ಲಿ ಪಡೆಯಲು ಇಲ್ಲಿವೆ 7 ಟಿಪ್ಸ್

Google Oneindia Kannada News

ವೈಯಕ್ತಿಕ ಸಾಲ ಎಂಬುದು ಅನ್ ಸೆಕ್ಯೂರ್ಡ್ ಆದಂಥದ್ದು. ಅದೇ ಕಾರಣಕ್ಕೆ ಉಳಿದ ಸಾಲಗಳ ಬಡ್ಡಿ ದರಕ್ಕಿಂತ ವೈಯಕ್ತಿಕ ಸಾಲದ ಬಡ್ಡಿ ದರ ಹೆಚ್ಚಾಗಿರುತ್ತದೆ. ವೈಯಕ್ತಿಕ ಸಾಲದ ಬಡ್ಡಿ ದರವು ಯಾರು ಸಾಲ ಪಡೆಯುತ್ತಾರೋ ಅವರ ಸಾಲ ಪಡೆಯುವ ಅರ್ಹತಾ ಮಾನದಂಡದ ಮೇಲೆ ಅವಲಂಬಿತ ಆಗಿರುತ್ತದೆ.

ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ನೀವು ಪಡೆಯುವ ಸಾಲದ ವೆಚ್ಚದ ಮೇಲೆ ನಿರ್ಧಾರ ಆಗುತ್ತದೆ. ಆದ್ದರಿಂದ ವೈಯಕ್ತಿಕ ಸಾಲ ಪಡೆಯುವಾಗ ನಿಮ್ಮ್ ಬಡ್ಡಿ ದರದ ಮೇಲೆ ಪ್ರಭಾವ ಬೀರುವಂಥ ಪ್ರಮುಖ ಅಂಶಗಳು ಯಾವುವು ಎಂದು ತಿಳಿದುಕೊಳ್ಳಲೇಬೇಕು. ಎಲ್ಲಕ್ಕೂ ಮುಖ್ಯವಾಗಿ CIBIL ಸ್ಕೋರ್ ನ ಪಾತ್ರ ಆತ್ಯಂತ ಪ್ರಮುಖವಾಗುತ್ತದೆ.

ಉತ್ತಮ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಲು ಹಲವು ಮಾರ್ಗಗಳಿವೆ. ಆ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು ಇದನ್ನು ಓದಿ.

7 tips to get a personal loan at a lower interest rate

ಉತ್ತಮ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಲು ಸುಲಭ ಸಲಹೆ

1 ನಿಮ್ಮ CIBIL ಸ್ಕೋರ್ ಉತ್ತಮ ಪಡಿಸಿಕೊಳ್ಳಿ
ಸಾಲ ನೀಡುವವರ ಮೇಲೆ ಸಾಲ ಪಡೆಯುವವರು ಮೊದಲಿಗೆ ಒಳ್ಳೆ ಅಭಿಪ್ರಾಯ ಮೂಡಿಸಬಹುದಾದದ್ದು CIBIL ಸ್ಕೋರ್ ಮೂಲಕ. ಅತ್ಯುತ್ತಮವಾದ CIBIL ಸ್ಕೋರ್ ಇದ್ದರೆ ಕಡಿಮೆ ಬಡ್ಡಿ ದರದ ಅನುಕೂಲ ದೊರೆಯುತ್ತದೆ. ನಿಮ್ಮ CIBIL ಸ್ಕೋರ್ ಉತ್ತಮವಾಗಿದ್ದರೆ ಸಾಲವು ಕಡಿಮೆ ಬಡ್ಡಿ ದರದಲ್ಲಿ ದೊರೆಯುತ್ತದೆ. CIBIL ಸ್ಕೋರ್ ಕೆಟ್ಟದಾಗಿದ್ದರೆ ಸಾಲ ನೀಡುವವರು ಖಂಡಿತಾ ಕಡಿಮೆ ಬಡ್ಡಿದರದ ಸಾಲ ನೀಡಲ್ಲ. ಕ್ರೆಡಿಟ್ ಕಾರ್ಡ್ ಗಳ ಬಿಲ್ ಗಳನ್ನು ಸರಿಯಾದ ಸಮಯಕ್ಕೆ ಪಾವತಿಸುವ ಮೂಲಕ ಹಾಗೂ ಸಾಲದ ಕಂತುಗಳನ್ನು ನಿಗದಿತವಾಗಿ ಪಾವತಿಸುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮ ಪಡಿಸಿಕೊಳ್ಳಬಹುದು.

2 EMI ಅವಧಿ ಹೆಚ್ಚಿಗೆ ಪಡೆದುಕೊಳ್ಳಿ
ಪ್ರತಿ ತಿಂಗಳ EMI ಕಟ್ಟುತ್ತೀರಲ್ಲಾ ಅದು ನಿಮ್ಮ ಬಡ್ಡಿ ದರಕ್ಕೆ ಅನುಗುಣವಾಗಿ ಇರುತ್ತದೆ. ಇಎಂಐ ಹೆಚ್ಚಾದಷ್ಟೂ ಬಡ್ಡಿ ದರ ಕಡಿಮೆ ಆಗುತ್ತದೆ. ಮತ್ತು ಅದಕ್ಕೆ ತದ್ವಿರುದ್ಧ. ಕಡಿಮೆ ಇಎಂಐಗೆ ಹೆಚ್ಚು ಬಡ್ಡಿ ವಿಧಿಸಲಾಗುತ್ತದೆ. ನಿಮ್ಮ ತಿಂಗಳ ಆದಾಯ ಉತ್ತಮವಾಗಿದ್ದರೆ ಇಎಂಐ ಹೆಚ್ಚು ಕಟ್ಟಿ. ಆಗ ನಿಮಗೆ ಉತ್ತಮವಾದ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.

3 ನಿಮ್ಮ ಚೌಕಾಶಿ ಕೌಶಲ ಉತ್ತಮ ಪಡಿಸಿಕೊಳ್ಳಿ
ಚೌಕಾಶಿ ಮಾಡುವ ಉತ್ತಮ ಸಾಮರ್ಥ್ಯ ಯಾವಾಗಲೂ ಸಹಾಯಕವಾಗಿ ಇರುತ್ತದೆ. ನಿಮಗೆ ಚೌಕಾಶಿ ಮಾಡುವ ಅದ್ಭುತವಾದ ಸಾಮರ್ಥ್ಯ ಇದ್ದರೆ ಆ ಮೂಲಕ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಬಹುದು. ಆದ್ದರಿಂದ ಈ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.

4 ಕಡಿಮೆ ಅವಧಿಯ ಸಾಲ ಮರುಪಾವತಿ ಆರಿಸಿಕೊಳ್ಳಿ
ಬ್ಯಾಂಕ್ ಗಳು ಹಾಗೂ ಆರ್ಥಿಕ ಸಂಸ್ಥೆಗಳು ಅಲ್ಪಾವಧಿಯ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುತ್ತವೆ. ಏಕೆಂದರೆ, ದೀರ್ಘಾವಧಿ ಸಾಲ ನೀಡುವಾಗ ಅಪಾಯದ ಸಾಧ್ಯತೆ ಹೆಚ್ಚು. ನೀವು ವೈಯಕ್ತಿಕ ಸಾಲ ಆನ್ ಲೈನ್ ನಲ್ಲಿ ಅಪ್ಲೈ ಮಾಡುತ್ತಿದ್ದರೆ ಅಲ್ಪಾವಧಿಯಲ್ಲಿ ಮರು ಪಾವತಿಸುವ ಕಡಿಮೆ ಬಡ್ಡಿ ದರವನ್ನು ಆರಿಸಿಕೊಳ್ಳಿ. ಆದರೆ ಆ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ತಿಂಗಳ ಕಂತು ಮತ್ತು ಸಾಲದ ಮೊತ್ತವನ್ನು ಗಮನದಲ್ಲಿ ಇಟ್ಟುಕೊಳ್ಳಿ.

5 ಬದಲಾಗುವ ಬಡ್ಡಿ ದರ ನಿಮ್ಮ ಆದ್ಯತೆ ಆಗಿರಲಿ
ಮಾರುಕಟ್ಟೆಯ ಬದಲಾವಣೆಗೆ ಅನುಗುಣವಾಗಿ ಏರಿಳಿತವನ್ನು ಕಾಣುವ ಬಡ್ಡಿ ದರವನ್ನು 'ಫ್ಲೋಟಿಂಗ್ ಇಂಟರೆಸ್ಟ್' (ಬದಲಾಗುವ ಬಡ್ಡಿ ದರ) ಎನ್ನಲಾಗುತ್ತದೆ. ನಿಗದಿತ ಬಡ್ಡಿ ದರ (ಫಿಕ್ಸೆಡ್ ಇಂಟರೆಸ್ಟ್ ರೇಟ್) ಆದರೆ ನಿಮ್ಮ ಸಾಲ ತೀರುವ ತನಕ ಅದೇ ದರ ಇರುತ್ತದೆ. ಈ ರೀತಿಯ ನಿಗದಿತ ಬಡ್ಡಿ ದರವು ಬದಲಾಗುವ ಬಡ್ಡಿ ದರಕ್ಕಿಂತ ಸ್ವಲ್ಪ ಹೆಚ್ಚಿರುತ್ತದೆ. ಅಲ್ಪಾವಧಿಯ ವೈಯಕ್ತಿಕ ಸಾಲಕ್ಕೆ ಫ್ಲೋಟಿಂಗ್ ಇಂಟರೆಸ್ಟ್ ಆರಿಸಿಕೊಳ್ಳಿ. ಏಕೆಂದರೆ ನೀವು ಸಾಲ ಮರುಪಾವತಿ ಮಾಡಿದಂತೆಲ್ಲ ಸಮಯಕ್ಕೆ ತಕ್ಕಂತೆ ಬಡ್ಡಿ ದರವೂ ಬದಲಾಗುತ್ತದೆ.

6 ಆನ್ ಲೈನ್ ನಲ್ಲಿ ಹುಡುಕಾಡಿ
ನೀವು ಆನ್ ಲೈನ್ ನಲ್ಲಿ ಸರ್ಚ್ ಮಾಡಿ ನೋಡಿ: ವೈಯಕ್ತಿಕ ಸಾಲದ ಬಡ್ಡಿದರ ಇಳಿಸುವುದು ಹೇಗೆ. ಸಾಲ ನೀಡುವ ಹಲವು ಸಂಸ್ಥೆಗಳು ಆನ್ ಲೈನ್ ಪೋರ್ಟಲ್ ಗಳಲ್ಲಿ ಅತ್ಯುತ್ತಮ ಬಡ್ಡಿ ದರದ ಕೊಡುಗೆಗಳನ್ನು ನೀಡುತ್ತವೆ.

7 ಸಾಲದ ಒಟ್ಟಾರೆ ವೆಚ್ಚವನ್ನು ಲೆಕ್ಕ ಹಾಕಿ
ಪಡೆದ ಸಾಲದ ಒಟ್ಟಾರೆ ವೆಚ್ಚ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕುವುದು ಸಹ ಬಹಳ ಮುಖ್ಯ. ಬರೀ ಕಡಿಮೆ ಬಡ್ಡಿ ದರದಿಂದ ಅನುಕೂಲ ಆಗುವುದಿಲ್ಲ. ಪ್ರೊಸೆಸಿಂಗ್ ಶುಲ್ಕ, ತಡವಾದ ಪಾವತಿಗೆ ವಿಧಿಸುವ ದಂಡ, ಮುಂಚಿತವಾಗಿಯೇ ಪಾವತಿ ಮಾಡಿದರೆ ಅದಕ್ಕೆ ವಿಧಿಸುವ ಶುಲ್ಕ ತುಂಬ ಹೆಚ್ಚಾಗಿದ್ದರೆ ಸಾಲ ತೆಗೆದುಕೊಳ್ಳುವ ಮುನ್ನವೇ ಒಂದಕ್ಕೆ ಎರಡು ಬಾರಿ ಯೋಚನೆ ಮಾಡಿ.

ಇದೀಗ ನೀವು ಅತ್ಯುತ್ತಮ ಬಡ್ಡಿ ದರಕ್ಕೆ ವೈಯಕ್ತಿಕ ಸಾಲ ಪಡೆಯುವುದು ಹೇಗೆ ಎಂಬ ಸಲಹೆಯನ್ನು ಪಡೆದಿರಿ. ನೀವು ವೈಯಕ್ತಿಕ ಸಾಲ ಪಡೆಯುವಾಗ ಇವುಗಳನ್ನು ಬಳಸಬಹುದು.

ಲೇಖಕರ ಪರಿಚಯ
ನಿಶಾಂತ್ ಅತ್ಯುತ್ಸಾಹವಾಗಿ ಆರ್ಥಿಕ ವಿಷಯಗಳ ಬಗ್ಗೆ ಬರೆಯುವ ಬ್ಲಾಗರ್ ಮತ್ತು ಆರ್ಥಿಕ ಸಲಹೆಗಾರರೂ ಹೌದು. ಕಳೆದ ಆರು ವರ್ಷಗಳಿಂದ ಆರ್ಥಿಕ ಸಲಹೆಗಾರರಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಸೊಗಸಾದ ಪರಿಹಾರ ಅವರ ಬಳಿ ಇದೆ. ಅವರು ತಮ್ಮ ಆರ್ಥಿಕ ಸಲಹೆ, ಟ್ರಿಕ್ಸ್ ಗಳನ್ನು Loantrivia.com ನಲ್ಲಿ ಷೇರ್ ಮಾಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X