ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ: ಹೊಸ ವರ್ಷದಲ್ಲಿ ಈ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ..

|
Google Oneindia Kannada News

ಹೊಸ ವರ್ಷಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಇದೆ. ಈ ನಡುವೆ ಮುಂದಿನ ವರ್ಷ ಆಗುವ ಬದಲಾವಣೆಗಳನ್ನು ನೀವು ತಿಳಿಯುವುದು ಮುಖ್ಯ. ಹೌದು ಮುಂದಿನ ವರ್ಷದಿಂದ ದೇಶದಲ್ಲಿ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ. ಪ್ರಮುಖವಾಗಿ ಡೆಬಿಟ್‌ ಕಾರ್ಡ್, ಕ್ರೆಡಿಟ್‌ ಕಾರ್ಡ್‌ನಲ್ಲಿ ಬದಲಾವಣೆ ಆಗಲಿದೆ.

ಪಿಎಫ್‌, ಡೆಬಿಟ್‌ ಕಾರ್ಡ್, ಕ್ರೆಡಿಟ್‌ ಕಾರ್ಡ್ ಮೊದಲಾದವುಗಳ ನಿಮಯಗಳು ಬದಲಾವಣೆ ಆಗಲಿದೆ. ಡೆಬಿಟ್‌ ಕಾರ್ಡ್, ಕ್ರೆಡಿಟ್‌ ಕಾರ್ಡ್‌ ಮೂಲಕ ಆನ್‌ಲೈನ್‌ ವಹಿವಾಟು ಇನ್ನು ಮುಂದೆ ಸರಳ ಹಾಗೂ ಸುರಕ್ಷಿತಗೊಳ್ಳಲಿದೆ. ಟೋಕನೈಜೇಶನ್‌ ಎಂಬ ಹೊಸ ವ್ಯವಸ್ಥೆಯು ಬರಲಿದೆ. ಜಿಎಸ್‌ಟಿ ನಿಮಯವು ಕಠಿಣವಾಗಲಿದೆ.

ಗಮನಿಸಿ: ಹೊಸ ವರ್ಷದಲ್ಲಿ ಎಟಿಎಂ ವಿತ್‌ಡ್ರಾ ಶುಲ್ಕ ದುಬಾರಿಗಮನಿಸಿ: ಹೊಸ ವರ್ಷದಲ್ಲಿ ಎಟಿಎಂ ವಿತ್‌ಡ್ರಾ ಶುಲ್ಕ ದುಬಾರಿ

ಹಾಗಾದರೆ ಈ ಹೊಸ ವರ್ಷದ ಮೊದಲ ದಿನದಿಂದಲೇ ಯಾವೆಲ್ಲಾ ಬದಲಾವಣೆಗಳು ಆಗಲಿದೆ?, ಯಾವೆಲ್ಲಾ ಹಣಕಾಸು ವ್ಯವಹಾರದಲ್ಲಿ ಬದಲಾವಣೆ ಆಗಲಿದೆ? ಎಂಬುವುದನ್ನು ತಿಳಿಯಲು ಮುಂದೆ ಓದಿ...

ಡೆಬಿಟ್‌-ಕ್ರೆಡಿಟ್‌ ಕಾರ್ಡ್‌ ಮೂಲಕ ಆನ್‌ಲೈನ್‌ ವಹಿವಾಟು ಸುರಕ್ಷಿತ!

ಡೆಬಿಟ್‌-ಕ್ರೆಡಿಟ್‌ ಕಾರ್ಡ್‌ ಮೂಲಕ ಆನ್‌ಲೈನ್‌ ವಹಿವಾಟು ಸುರಕ್ಷಿತ!

ಇನ್ನು ಮುಂದೆ ನೀವು ಡಿಜಿಟಲ್‌ ವೇದಿಕೆಯಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವ ವೇಳೆ ನಿಮ್ಮ 16 ಅಂಕಿಗಳ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ನ ಕೊನೆಯ ದಿನಾಂಕ (expiration date) ಅನ್ನು ನೀಡಬೇಕಾಗಿ‌ಲ್ಲ. ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾದ ಆದೇಶದ ಪ್ರಕಾರ ನೀವು ಈಗ ತ್ವರಿತವಾಗಿ, ಸಂಪರ್ಕರಹಿತ ಪಾವತಿಯನ್ನು ಟೋಕನೈಜೇಶನ್‌ (Tokenization) ಮೂಲಕ ಮಾಡಬಹುದು. ಅದು ಹೊಸ ವರ್ಷದ ಆರಂಭದಿಂದ ಜಾರಿಗೆ ಬರಲಿದೆ. ಟೋಕನೈಜೇಶನ್‌ ಮಾಡಿಕೊಳ್ಳುವ ಕೊನೆಯ ದಿನಾಂಕವನ್ನು ಕೂಡಾ ವಿಸ್ತರಣೆ ಮಾಡಲಾಗಿದೆ. ಟೋಕನೈಜೇಶನ್‌ ಎಂಬುವುದು ಹೊಸ ಪಾವತಿ ವಿಧಾನವಾಗಿದೆ. ಕಾರ್ಡ್ ಮಾಹಿತಿಯನ್ನು ಟೋಕನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ತಂತ್ರವೇ ಟೋಕನೈಜೇಶನ್‌ ಆಗಿದೆ. ಹಾಗೆಯೇ ಈ ವಿಧಾನವು ಗ್ರಾಹಕರ ಯಾವುದೇ ವೈಯಕ್ತಿಕ ಮಾಹಿತಿ ಸೋರಿಕೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ನೀಡುತ್ತದೆ.

ಜಿಎಸ್‌ಟಿ ನಿಯಮ ಇನ್ನೂ ಕಠಿಣ

ಜಿಎಸ್‌ಟಿ ನಿಯಮ ಇನ್ನೂ ಕಠಿಣ

ಹೊಸ ವರ್ಷದಲ್ಲಿ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ನಿಯಮದಲ್ಲಿ ಕೆಲ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಜಿಎಸ್‌ಟಿ ಬಿಲ್ಲಿಂಗ್‌ನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಯಲು ಕೆಲ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹೊಸ ಬದಲಾವಣೆಯು 2022ರ ಜನವರಿ 1 ರಿಂದ ಜಾರಿಗೆ ಬರಲಿದೆ. ಜಿಎಸ್‌ಟಿಯಲ್ಲಿ ಕೆಲ ಬದಲಾವಣೆಗಳನ್ನು 2021ರ ಹಣಕಾಸು ಕಾಯ್ದೆಯಡಿ ಮಾಡಲಾಗಿದ್ದು, ಇದು ಪರೋಕ್ಷ ತೆರಿಗೆ (Indirect Tax) ಪಾವತಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.

ಹೊಸ ವರ್ಷದಲ್ಲಿ ಎಟಿಎಂ ವಿತ್‌ಡ್ರಾ ಶುಲ್ಕ ದುಬಾರಿ

ಹೊಸ ವರ್ಷದಲ್ಲಿ ಎಟಿಎಂ ವಿತ್‌ಡ್ರಾ ಶುಲ್ಕ ದುಬಾರಿ

ಮುಂದಿನ ವರ್ಷದಿಂದ ನೀವು ಎಟಿಎಂನಿಂದ ಹಣವನ್ನು ವಿತ್‌ಡ್ರಾ ಮಾಡುವುದು ದುಬಾರಿ ಆಗಲಿದೆ. ಆರ್‌ಬಿಐನ ಹೊಸ ಮಾರ್ಗಸೂಚಿ ಪ್ರಕಾರ ಹೊಸ ವರ್ಷದ ಆರಂಭದಿಂದ ನೀವು ಆ ಎಟಿಎಂನಿಂದ ವಿತ್‌ಡ್ರಾ ಮಾಡಲು ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಎಟಿಎಂ ನಲ್ಲಿ ನಾವು ಹಣವನ್ನು ವಿತ್‌ಡ್ರಾ ಮಾಡುವುದಕ್ಕೆ ಮಿತಿ ಇದೆ. ನಾವು ಆ ಮಿತಿಯನ್ನು ಮೀರಿ ಹೆಚ್ಚು ಬಾರಿ ವಿತ್‌ ಡ್ರಾ ಮಾಡಿದರೆ ಅದಕ್ಕೆ ಇನ್ನು ಮುಂದೆ 21 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಈ ಹಿಂದೆ ಮಿತಿ ಮೀರಿ ಮಾಡಿದ ವಹಿವಾಟಿಗೆ ರೂಪಾಯಿ 20 ಶುಲ್ಕವು ಪಾವತಿ ಮಾಡಬೇಕಾಗಿತ್ತು. ಡೆಬಿಟ್‌ ಕಾರ್ಡ್ ಅನ್ನು ಬಳಕೆ ಮಾಡುವ ಗ್ರಾಹಕರು ತಮ್ಮದೇ ಬ್ಯಾಂಕ್‌ನ ಎಟಿಎಂನಿಂದ ತಿಂಗಳಿಗೆ ಐದು ಬಾರಿ ಉಚಿತವಾಗಿ ಎಟಿಎಂ ವಹಿವಾಟು ನಡೆಸಬಹುದು. ಹಾಗೆಯೇ ಬೇರೆ ಬ್ಯಾಂಕ್‌ಗಳ ಎಟಿಎಂನಲ್ಲಿ ಮೆಟ್ರೋ ನಗರದಲ್ಲಿ ಮೂರು ಬಾರಿ ಹಾಗೂ ಮೆಟ್ರೋಯೇತರ ನಗರದಲ್ಲಿ ಐದು ಬಾರಿ ಎಟಿಎಂ ವಹಿವಾಟು ನಡೆಸಬಹುದು.

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆ ಬಡ್ಡಿದರ ಬದಲಾವಣೆ

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆ ಬಡ್ಡಿದರ ಬದಲಾವಣೆ

ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವು ಬದಲಾವಣೆ ಆಗುವ ಸಾಧ್ಯತೆಗಳ ಬಗ್ಗೆ ವರದಿ ಆಗಿದೆ. ಅಂಚೆ ಕಚೇರಿಯ ಬಡ್ಡಿದರವು ದೀರ್ಘ ಕಾಲದಿಂದ ಬದಲಾವಣೆ ಆಗದೆ ಸ್ಥಿರವಾಗಿದೆ. ಈ ನಿಟ್ಟಿನಲ್ಲಿ ಈ ಅಂಚೆ ಕಚೇರಿ ಉಳಿತಾಯ ಖಾತೆಯ ಬಡ್ಡಿದರವನ್ನು ಬದಲಾವಣೆ ಮಾಡಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನು ಅಂಚೆ ಕಚೇರಿಯ ಯೋಜನೆಗಳ ಪೈಕಿ ಸುಕನ್ಯಾ ಸಮೃದ್ಧಿ ಯೋಜನೆ ಹೆಚ್ಚಿ ಬಡ್ಡಿದರವನ್ನು ಹೊಂದಿದೆ. ಇದರ ಬಡ್ಡಿದರ ಶೇಕಡ 7.6% ಆಗಿದೆ.

ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಮೇಲೆ ಶುಲ್ಕ

ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಮೇಲೆ ಶುಲ್ಕ

ಮಿತಗಿಂತ ಅಧಿಕವಾಗಿ ಹಣವನ್ನು ಡೆಪಾಸಿಟ್‌ ಮಾಡಿದರೆ ಇನ್ನು ಮುಂದೆ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿ ಶುಲ್ಕವನ್ನು ವಿಧಿಸಲಾಗುತ್ತದೆ. ಕೆಲವು ಬ್ಯಾಂಕುಗಳಲ್ಲಿ ಹೊಸ ವರ್ಷದಿಂದ ಹಣ ಡೆಪಾಸಿಟ್‌ ಮಾಡುವುದು ಉಚಿತವಾಗಿಲ್ಲ. ಆರ್‌ಬಿಐ ನಿಮಯದ ಪ್ರಕಾರ ಉಳಿತಾಯ ಖಾತೆಗೆ ಒಂದು ಲಕ್ಷಕ್ಕಿಂತ ಅಧಿಕ ಡೆಪಾಸಿಟ್‌ ಮಾಡುವಂತಿಲ್ಲ. ಈ ಮಿತಿಯನ್ನು ಮೀರಿದರೆ ಬ್ಯಾಂಕ್‌ನಲ್ಲಿ ಡೆಪಾಸಿಟ್‌ ಮೇಲೆ ಶುಲ್ಕ ವಿಧಿಸಲಾಗುತ್ತದೆ.

ಹೊಸ ವರ್ಷದಲ್ಲಿ ಎಲ್‌ಪಿಜಿ ಗ್ಯಾಸ್‌ ದರ ಪರಿಷ್ಕರಣೆ ಸಾಧ್ಯತೆ

ಹೊಸ ವರ್ಷದಲ್ಲಿ ಎಲ್‌ಪಿಜಿ ಗ್ಯಾಸ್‌ ದರ ಪರಿಷ್ಕರಣೆ ಸಾಧ್ಯತೆ

ಕಳೆದ ತಿಂಗಳು ಆರಂಭ ಆಗುವುದಕ್ಕೂ ಮುನ್ನ ಗ್ಯಾಸ್‌ ದರವು ಇನ್ನಷ್ಟು ಏರಿಕೆ ಆಗುವ ಸಾಧ್ಯತೆಗಳ ವರದಿ ಆಗಿದ್ದವು. ಆದರೆ ಡೊಮೆಸ್ಟಿಕ್‌ ಅಡುಗೆ ಅನಿಲಗಳ ಬೆಲೆಯು ಅಧಿಕವಾಗಿಲ್ಲ. ಆದರೆ ಕಮರ್ಷಿಯಲ್‌ ಸಿಲಿಂಡರ್‌ಗಳ ಬೆಲೆಯು ಹೆಚ್ಚಾಗಿದೆ. ಮುಂದಿನ ವರ್ಷ ಆರಂಭದಲ್ಲಿಯೇ ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಇಪಿಎಫ್‌ನಲ್ಲಿ ಬದಲಾವಣೆ ಇದೆ ಗಮನಿಸಿ

ಇಪಿಎಫ್‌ನಲ್ಲಿ ಬದಲಾವಣೆ ಇದೆ ಗಮನಿಸಿ

ಪ್ರಸ್ತುತ ಭವಿಷ್ಯ ನಿಧಿ (PF) ಖಾತೆದಾರರು ತಮ್ಮ ಖಾತೆಗಳಿಗೆ ನಾಮಿನಿಯನ್ನು ಸೇರಿಸುವ ಅಗತ್ಯ ಆಗಿದೆ. ನಿಮ್ಮ ಪಿಎಫ್‌ ಖಾತೆಗೆ ನಾಮಿನಿಗಳನ್ನು ಸೇರಿಸಲು ಕೊನೆಯ ದಿನಾಂಕವು ಡಿಸೆಂಬರ್ 31, 2021 ಆಗಿದ್ದು ಅದಕ್ಕೂ ಮುನ್ನವೇ ನೀವು ಪಿಎಫ್‌ ಖಾತೆಗೆ ನಾಮಿನಿಯನ್ನು ಸೇರ್ಪಡೆ ಮಾಡಬೇಕಾಗಿದೆ. ಭವಿಷ್ಯ ನಿಧಿಗೆ ನಾಮಿನಿಯನ್ನು ಸೇರಿಸಿದ ಖಾತೆದಾರರಿಗೆ ಮುಂದಿನ ಪ್ರಕ್ರಿಯೆಯು ಸರಳವಾಗಲಿದೆ. (ಒನ್‌ಇಂಡಿಯಾ ಸುದ್ದಿ)

English summary
7 Financial Changes To Come Into Effect From January 1, 2022, Here's Details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X