ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2030ರ ವೇಳೆಗೆ 6ಜಿ ನೆಟ್ ವರ್ಕ್ ಲಭ್ಯ: ನೋಕಿಯಾ ಸಿಇಒ

|
Google Oneindia Kannada News

ನವದೆಹಲಿ ಮೇ 29: ವಿಶ್ವಾದ್ಯಂತ 5ಜಿ ನೆಟ್ ವರ್ಕ್ ಇನ್ನೂ ಲಭ್ಯವಿಲ್ಲದಿದ್ದರೂ, ಜಾಗತಿಕ ಸ್ಮಾರ್ಟ್ ಫೋನ್ ಬ್ರಾಂಡ್ ನೋಕಿಯಾದ ಸಿಇಒ ಪೆಕ್ಕಾ ಲುಂಡ್ಮಾರ್ಕ್ 2030ರ ವೇಳೆಗೆ 6ಜಿ ಮೊಬೈಲ್ ನೆಟ್ ವರ್ಕ್ ವಾಣಿಜ್ಯ ಬಳಕೆಗೆ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮಾತನಾಡಿದ ಪೆಕ್ಕಾ ಲುಂಡ್ಮಾರ್ಕ್, "2030ರ ಹೊತ್ತಿಗೆ ಖಂಡಿತವಾಗಿಯೂ ಇಂದು ನಮಗೆ ತಿಳಿದಿರುವಂತೆ ಸ್ಮಾರ್ಟ್ ಫೋನ್ ಹೆಚ್ಚು ಸಾಮಾನ್ಯ ಇಂಟರ್ ಫೇಸ್ ಆಗುವುದಿಲ್ಲ. ಇವುಗಳಲ್ಲಿ ಹೆಚ್ಚಿನವು ನಮ್ಮ ದೇಹದಲ್ಲಿ ನೇರವಾಗಿ ನಿರ್ಮಿಸಲ್ಪಡುತ್ತದೆ,'' ಎಂದರು.

Breaking: ಮದ್ರಾಸ್ ಐಐಟಿಯಲ್ಲಿ 5ಜಿ ಕರೆ ಪರೀಕ್ಷೆ ಯಶಸ್ವಿ Breaking: ಮದ್ರಾಸ್ ಐಐಟಿಯಲ್ಲಿ 5ಜಿ ಕರೆ ಪರೀಕ್ಷೆ ಯಶಸ್ವಿ

ಇದು ಹೇಗೆ ಮತ್ತು ಯಾವ ರೀತಿ ಎಂಬುದರ ಬಗ್ಗೆ ಪೆಕ್ಕಾ ಲುಂಡ್ಮಾರ್ಕ್ ಹೆಚ್ಚು ವಿವರಣೆ ನೀಡಲು ಹೋಗಲಿಲ್ಲ. ಆದರೆ "2030ರ ವೇಳೆಗೆ ಎಲ್ಲದರ ಡಿಜಿಟಲ್‌ ಅವಳಿ ಇರುತ್ತದೆ. ಹಾಗೂ ಇದಕ್ಕೆ ದೊಡ್ಡ ಕಂಪ್ಯೂಟೇಶನಲ್ ಸಂಪನ್ಮೂಲಗಳ ಅಗತ್ಯವಿರುತ್ತದೆ,'' ಎಂದು ಹೇಳಿದರು.

6G Mobile Networks Will Be Commercially Available by 2030

6ಜಿ ನೆಟ್ ವರ್ಕ್ ಮೇಲೆ ಹೂಡಿಕೆ; ಕಂಪನಿಗಳು ಈಗಾಗಲೇ 6ಜಿ ನೆಟ್ ವರ್ಕ್ ಮೇಲೆ ಹೆಚ್ಚಿನ ಹೂಡಿಕೆಯನ್ನು ಪ್ರಾರಂಭಿಸಿವೆ. ಕ್ವಾಲ್ಕಾಮ್, ಆಪಲ್, ಗೂಗಲ್, ಎಲ್ ಜಿ ಸೇರಿದಂತೆ ವಿಶ್ವದ ಕೆಲವು ಟೆಕ್ ದೈತ್ಯ ಕಂಪನಿಗಳು ಮುಂದಿನ ಪೀಳಿಗೆಯ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು, ಅಭಿವೃದ್ದಿಗೆ ಸಹಕಾರ ನೀಡಲು ಉತ್ಸುಕವಾಗಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

5ಜಿ ಯಾವಾಗ ಶುರು, ತರಂಗಾಂತರಗಳ ಹರಾಜು ಯಾವಾಗ? ಮೋದಿ ಹೇಳಿದ್ದಿಷ್ಟು5ಜಿ ಯಾವಾಗ ಶುರು, ತರಂಗಾಂತರಗಳ ಹರಾಜು ಯಾವಾಗ? ಮೋದಿ ಹೇಳಿದ್ದಿಷ್ಟು

5ಜಿ ಕರೆಯ ಪರೀಕ್ಷೆ ಯಶಸ್ವಿ: ಮದ್ರಾಸ್ ಐಐಟಿಯಲ್ಲಿ ನಡೆಸಿದ 5ಜಿ ಕರೆಯ ಪರೀಕ್ಷೆಯು ಯಶಸ್ವಿ ಆಗಿರುವ ಬಗ್ಗೆ ಇತ್ತೀಚಿಗೆ ಕೇಂದ್ರ ಟೆಲಿಕಾಂ ಸಚಿವಾಲಯ ಪ್ರಕಟಣೆ ಹೊರಡಿಸಿತ್ತು. ಅಲ್ಲದೇ ಮದ್ರಾಸ್ ಐಐಟಿಯಲ್ಲಿ 5ಜಿ ಕರೆಯನ್ನು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಯಶಸ್ವಿಯಾಗಿ ಪರೀಕ್ಷಿಸಿರುವ ಬಗ್ಗೆ ವಿಡಿಯೋ ಸಂದೇಶವೊಂದನ್ನು ಶೇರ್ ಮಾಡಿದ್ದರು.

6G Mobile Networks Will Be Commercially Available by 2030

"ಭಾರತದಲ್ಲಿ ಸಂಪೂರ್ಣ ಎಂಡ್ ಟು ಎಂಡ್ ನೆಟ್‌ವರ್ಕ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಅಭಿವೃದ್ಧಿಪಡಿಸಲಾಗಿದೆ. ಭಾರತದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 5G ಸ್ಟಾಕ್ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಸಿದ್ಧವಾಗಲಿದೆ,'' ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಆ ಮೂಲಕ ರಾಷ್ಟ್ರದ ವೆಚ್ಚಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಪರಿಹಾರ ಸೂಚಿಸಿದ್ದರು.

"ಆರ್ಥಿಕ ಅಭಿವೃದ್ಧಿಯಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತಿರುವ ಈ ಜಗತ್ತಿನಲ್ಲಿ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವುದು ಹೆಚ್ಚು ನಿರ್ಣಾಯಕವಾಗಿದೆ. ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸರಕಾರವು ತನ್ನ ಎಲ್ಲಾ ಪ್ರಯತ್ನಗಳನ್ನು ನಿರ್ದೇಶಿಸುತ್ತಿದೆ,'' ಎಂದು ಅವರು ಹೇಳಿದ್ದರು.

English summary
Global smartphone brand Nokia’s CEO Pekka Lundmark has claimed that 6G mobile networks will be commercially available by 2030.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X