ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 5ಜಿ ಹರಾಜು ಗೆಲ್ಲುವುದಕ್ಕೆ ಅಂಬಾನಿ V/s ಅದಾನಿ ಪೈಪೋಟಿ ಶುರು

|
Google Oneindia Kannada News

ನವದೆಹಲಿ, ಜುಲೈ 26: ಭಾರತದ ಐದನೇ ತಲೆಮಾರಿನ ಏರ್‌ವೇವ್‌ಗಾಗಿ ಉದ್ಯಮಿಗಳ ನಡುವೆ ಪೈಪೋಟಿ ಶುರುವಾಗಿದೆ. ಡಿಜಿಟಲ್ ಯುಗದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವುದಕ್ಕೆ ದೇಶದ ಕೋಟ್ಯಧಿಪತಿಗಳು ಎನಿಸಿರುವ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. 5ಜಿ ಹಕ್ಕುಗಳನ್ನು ಪಡೆದುಕೊಳ್ಳಲು 14 ಬಿಲಿಯನ್‌ಗಳಷ್ಟು ಬಿಡ್ ಮಾಡುವ ನಿರೀಕ್ಷೆ ಎದ್ದು ಕಾಣುತ್ತಿದೆ.

ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅತಿ ಹೆಚ್ಚು ಪೂರ್ವ-ಹರಾಜು ಠೇವಣಿ ಪಾವತಿಸಿದೆ. ಮಂಗಳವಾರ ಪ್ರಾರಂಭವಾಗುವ ಮಾರಾಟದಲ್ಲಿ ಅತ್ಯಂತ ಆಕ್ರಮಣಕಾರಿ ಬಿಡ್‌ದಾರರಾಗುವ ಸಾಧ್ಯತೆಯಿದೆ. ಇದಕ್ಕೆ ಪ್ರತಿಸ್ಪರ್ಧಿ ಆಗಿ ಅದಾನಿ ಡಾಟಾ ನೆಟ್‌ವರ್ಕ್ಸ್ ಲಿಮಿಟೆಡ್ ಪ್ರವೇಶ ಮಾಡಿರುವುದು ಆಶ್ಚರ್ಯವನ್ನು ಹುಟ್ಟಿಸಿದೆ. ಹೀಗಾಗಿ ಎರಡು ಪ್ರಭಾವಿ ಸಂಸ್ಥೆಗಳ ನಡುವಿನ ಪೈಪೋಟಿಯನ್ನು ಅಚ್ಚರಿಯ ಕಣ್ಣುಗಳಿಂದ ನೋಡಲಾಗುತ್ತಿದೆ.

ಮಂಗಳವಾರ 5G ಸ್ಪೆಕ್ಟ್ರಮ್ ಹರಾಜು ಪ್ರಾರಂಭಮಂಗಳವಾರ 5G ಸ್ಪೆಕ್ಟ್ರಮ್ ಹರಾಜು ಪ್ರಾರಂಭ

ಬಿಲಿಯನೇರ್ ಸುನಿಲ್ ಮಿತ್ತಲ್ ನೇತೃತ್ವದ ವೈರ್‌ಲೆಸ್ ಆಪರೇಟರ್‌ಗಳಾದ ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಕುಮಾರ್ ಮಂಗಲಂ ಬಿರ್ಲಾ ತಂಡವು ಮಂಗಳವಾರದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಪ್ರಮುಖ ಬಿಡ್‌ದಾರರಾಗಿದ್ದಾರೆ. ಸ್ಥಳೀಯ ರೇಟಿಂಗ್ ಕಂಪನಿ ICRA ಲಿಮಿಟೆಡ್‌ನ ಜೂನ್ ಅಂದಾಜಿನ ಪ್ರಕಾರ, ತರಂಗಾಂತರ ಮಾರಾಟವು 1.1 ಟ್ರಿಲಿಯನ್ ರೂಪಾಯಿ ಅನ್ನು ($14 ಶತಕೋಟಿ) ಸಂಗ್ರಹಿಸಬಹುದು. ಈ ಕುರಿತು ಪ್ರಮುಖ ಮಾಹಿತಿಯನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

5G spectrum auction begins. Reliance Jio, Adani In Race For $14 Billion 5G Auction Today

ಅಂಬಾನಿಯನ್ನೇ ಹಿಂದಿಕ್ಕಿದ ಅದಾನಿ:

2022ರಲ್ಲಿ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ ಸಾಮ್ರಾಜ್ಯವು ಮತ್ತೊಂದು ಹೆಜ್ಜೆ ಮುಂದಿಡುವುದಕ್ಕೆ ಸಿದ್ಧವಾಗಿದೆ. ಆದರೆ ಪ್ರಸ್ತುತ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಉದ್ದೇಶವೇ ಬೇರೆಯಾಗಿದೆ ಎಂದು ಅದಾನಿ ಸಂಸ್ಥೆ ಹೇಳಿಕೊಂಡಿದೆ. "ಖಾಸಗಿ ನೆಟ್‌ವರ್ಕ್ ಪರಿಹಾರಗಳ" ಬಗ್ಗೆ ಆಸಕ್ತಿ ಹೊಂದಿರುವ ಅದಾನಿ ಸಂಸ್ಥೆಯ ಉದ್ದೇಶ ಕೇವಲ ತಮ್ಮ ಸಂಸ್ಥೆಯ ನಿಯಂತ್ರಣದಲ್ಲಿರುವ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಸೈಬರ್‌ ಸುರಕ್ಷತೆ ಹೆಚ್ಚಿಸುವುದೇ ಆಗಿದೆ. ಇದರ ವಿನಃ ಅಂಬಾನಿ ಪ್ರಾಬಲ್ಯ ಹೊಂದಿರುವ ಗ್ರಾಹಕರ ಮೊಬೈಲ್ ಸೇವೆಗೆ ಪ್ರವೇಶಿಸುವ ಗುರಿಯನ್ನು ಹೊಂದಿಲ್ಲ ಎಂದು ಅದಾನಿ ಸಂಸ್ಥೆ ಹೇಳಿಕೊಂಡಿದೆ.

5G spectrum auction begins. Reliance Jio, Adani In Race For $14 Billion 5G Auction Today

ಹರಾಜು ಪ್ರಕ್ರಿಯೆ ಯಾವಾಗ?:

5ಜಿ ತರಂಗಾಂತರ ಹರಾಜು ಪ್ರಕ್ರಿಯೆಯು ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದಲೇ ಪ್ರಾರಂಭವಾಗಿದ್ದು, ಸಂಜೆ 6 ಗಂಟೆವರೆಗೂ ನಡೆಯಲಿದೆ. ಟೆಲಿಕಾಂ ಇಲಾಖೆ (DoT) ಮೂಲಗಳ ಪ್ರಕಾರ, ಹರಾಜಿನ ಉದ್ದವು ರೇಡಿಯೊವೇವ್‌ಗಳ ನಿಜವಾದ ಬೇಡಿಕೆ ಮತ್ತು ವೈಯಕ್ತಿಕ ಬಿಡ್‌ದಾರರು ಬಳಸುವ ತಂತ್ರಗಳ ಮೇಲೆ ಅವಲಂಬಿತವಾಗಿರುತ್ತದೆ. ಮುಂಬರುವ 5G ಸೇವೆಗಳು ಹೊಸ ಯುಗದ ವ್ಯವಹಾರಗಳನ್ನು ರಚಿಸುವ ಸಾಮರ್ಥ್ಯ ಹೊಂದಿವೆ. ಉದ್ಯಮಗಳಿಗೆ ಹೆಚ್ಚುವರಿ ಆದಾಯವನ್ನು ಗಳಿಸುವುದರ ಜೊತೆಗೆ ಹೊಸ ಬಳಕೆ, ತಂತ್ರಜ್ಞಾನ ಮತ್ತು ಉದ್ಯೋಗವನ್ನು ಒದಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಲಿದೆ.

English summary
India's 5G auction kicks off today : Reliance Jio, Adani Group, Bharti Airtel, and Vodafone Idea are the four major participants in the auction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X