ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಿಕ್ಕಟ್ಟು ಮುಗಿದರೂ ಡೆಲ್‌ ಕಂಪನಿಯ ಅರ್ಧದಷ್ಟು ನೌಕರರಿಗೆ ಮನೆಯಿಂದಲೇ ಕೆಲಸ

|
Google Oneindia Kannada News

ನವದೆಹಲಿ, ಆಗಸ್ಟ್‌ 14: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಕೊನೆಗೊಂಡ ಬಳಿಕವೂ ಡೆಲ್‌ ಟೆಕ್ನಾಲಜೀಸ್‌ನ ಶೇಕಡಾ 50ಕ್ಕೂ ಹೆಚ್ಚು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಕಂಪನಿಯ ಏಷ್ಯಾ ಪೆಸಿಫಿಕ್ ಮತ್ತು ಜಪಾನ್ ಅಧ್ಯಕ್ಷ ಅಮಿತ್ ಮಿಧಾ ಶುಕ್ರವಾರ ಹೇಳಿದ್ದಾರೆ.

ಭಾರತದ ಪರಿಸ್ಥಿತಿ ಜಾಗತಿಕ ಪ್ರವೃತ್ತಿಗಳಿಗೆ ಹೋಲುತ್ತದೆ ಮತ್ತು ಡೆಲ್ ಪ್ರತಿ ದೇಶಕ್ಕೆ ನಿರ್ದಿಷ್ಟವಾದ ನಿಯಮಗಳನ್ನು ಪಾಲಿಸುತ್ತದೆ. ಮಾರ್ಚ್ ಮಧ್ಯದಲ್ಲಿ, ಡೆಲ್‌ನ ಶೇಕಡಾ 90ರಷ್ಟು ಜಾಗತಿಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಭಾರತದಲ್ಲಿ, ಈ ಸಂಖ್ಯೆ ಶೇಕಡಾ 100ರ ಹತ್ತಿರದಲ್ಲಿದೆ.

ಡೇಟಾವನ್ನು ಸ್ವಯಂಚಾಲಿತವಾಗಿ ರಿಫ್ರೆಶ್ ಮಾಡಲಾಗುತ್ತದೆ ಮತ್ತು ದಿನಕ್ಕೆ ಹಲವು ಬಾರಿ ಪರಿಶೀಲಿಸಲಾಗುತ್ತದೆ. ಈ ಸಾಧನವು ಉದ್ಯೋಗಿಗಳಿಗೆ ಸುರಕ್ಷಿತವಾಗಿ ಸೈಟ್‌ಗೆ ಮರಳಲು ಸಹಾಯ ಮಾಡುವುದಲ್ಲದೆ, ಕಚೇರಿಗಳಲ್ಲಿ ಸುರಕ್ಷಿತವಾಗಿ ಉಳಿಯಲು ಮತ್ತು ಪ್ರಯಾಣ ಮತ್ತು ಘಟನೆಗಳ ಬಗ್ಗೆ ಇತರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಧ್ಯಕ್ಷ ಮಿಧಾ ಹೇಳಿದರು.

50 Percent Of Dell Employees To Work Remotely Even After Pandemic

ಇನ್ನೂ ದೂರಸ್ಥ ಕೆಲಸಗಳಿಂದ(ಮನೆಯಿಂದಲೇ ಕೆಲಸ) ತಮ್ಮ ಉದ್ಯೋಗಿಗಳ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ ಎಂದು ಡೆಲ್ ಹೇಳಿದೆ. ವಾಸ್ತವವಾಗಿ, ಉದ್ಯೋಗಿಗಳು ಹೊಂದಿಕೊಳ್ಳುವ ಕೆಲಸದ ವಿಧಾನದೊಂದಿಗೆ "ಹೆಚ್ಚು ಉತ್ಪಾದಕ" ಎಂದು ಮಿಧಾ ಹೇಳಿದರು.

English summary
More than 50% of employees at Dell Technologies will continue to work remotely even after the covid-19 pandemic ends, Amit Midha, president, Asia Pacific and Japan said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X