ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

34 ರು ನಿಂದ ಶುರು ಏರ್ಟೆಲ್ ಸ್ಮಾರ್ಟ್ ರೀಚಾರ್ಜ್ ಯೋಜನೆ

|
Google Oneindia Kannada News

ಬೆಂಗಳೂರು, ನವೆಂಬರ್ 27: ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಐದು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಸ್ಮಾರ್ಟ್ ರೀಚಾರ್ಜ್ ಕೆಟಗರಿಯ ಯೋಜನೆ ಮೂಲಕ ಜಿಯೋ ಹಾಗೂ ವೋಡಾಫೋನ್ ಗೆ ಪೈಪೋಟಿ ನೀಡಲಿದೆ.

ಸ್ಮಾರ್ಟ್ ರೀಚಾರ್ಜ್ ನಡಿಯಲ್ಲಿ ಈ ಪ್ಲಾನ್ ಅಡಿ 34 ರೂಪಾಯಿ, 64 ರೂಪಾಯಿ, 94 ರೂಪಾಯಿ ಹಾಗೂ 144 ಮತ್ತು 244 ರೂಪಾಯಿ ರೀಚಾರ್ಜ್ ಗಳ ವ್ಯಾಲಿಡಿಟಿ 84 ದಿನಗಳ ತನಕ ಇರಲಿದೆ.

ಹೊಸ ಗ್ರಾಹಕರನ್ನು ಸೆಳೆಯಲು ಏರ್ ಟೆಲ್ ನಿಂದ 5 ಯೋಜನೆಹೊಸ ಗ್ರಾಹಕರನ್ನು ಸೆಳೆಯಲು ಏರ್ ಟೆಲ್ ನಿಂದ 5 ಯೋಜನೆ

ಈ ಮುಂಚೆ ಸೆಪ್ಟೆಂಬರ್ ತಿಂಗಳಿನಲ್ಲಿ ಜಾರಿಗೆ ಬಂದಿದ್ದ ಸ್ಮಾರ್ಟ್ ರೀಚಾರ್ಜ್ ಯೋಜನೆ ಇದಾಗಿದ್ದು, 84 ದಿನಗಳ ವ್ಯಾಲಿಡಿಟಿಯನ್ನು ಹಾಗೆ ಮುಂದುವರೆಸಲಾಗಿದೆ.

ಏರ್ಟೆಲ್ ನಿಂದ 6 ಹೊಸ ಕಡಿಮೆ ದರದ ಪ್ರೀಪೇಯ್ಡ್ ಯೋಜನೆಗಳುಏರ್ಟೆಲ್ ನಿಂದ 6 ಹೊಸ ಕಡಿಮೆ ದರದ ಪ್ರೀಪೇಯ್ಡ್ ಯೋಜನೆಗಳು

ಇದಲ್ಲದೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ 199, 399, 448 ಹಾಗೂ 509 ರೀಚಾರ್ಜ್ ಪ್ಯಾಕ್ ಗಳನ್ನು ಏರ್ ಟೆಲ್ ಹೊಂದಿದೆ. ಬಹುತೇಕ ಎಲ್ಲವೂ 28 ದಿನಗಳ ವ್ಯಾಲಿಡಿಟಿ ಹೊಂದಿವೆ. ಉಚಿತ ಅನಿಯಮಿತ ಕರೆ, ದಿನಕ್ಕೆ 100 ಎಸ್ಎಂಎಸ್ , ದಿನಕ್ಕೆ 1.48 ಜಿಬಿ ಡೇಟಾ ಸಿಗಲಿದೆ. 399 ರು, 448 ರು ಹಾಗೂ 509 ರು ಯೋಜನೆಯಲ್ಲಿ 70, 82 ಹಾಗೂ 90 ದಿನಗಳ ವ್ಯಾಲಿಡಿಟಿ ಸಿಗಲಿದೆ.

34 ರೂಪಾಯಿ ರೀಚಾರ್ಜ್ ಯೋಜನೆ

34 ರೂಪಾಯಿ ರೀಚಾರ್ಜ್ ಯೋಜನೆ

ಏರ್ಟೆಲ್ ನ ಐದು ಯೋಜನೆಗಳಲ್ಲಿ 34 ರೂಪಾಯಿ ಪ್ಲಾನ್ ಅತ್ಯಂತ ಅಗ್ಗವಾಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 100 ಎಂಬಿ ಡೇಟಾ ಹಾಗೂ 25.66 ಟಾಕ್ ಟೈಂ ಸಿಗಲಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಲಾಗಿವೆ. ಈ ಪ್ಲಾನ್ ನಲ್ಲಿ ಗ್ರಾಹಕರು ಸೆಕೆಂಡ್ ಗೆ 2.5 ಪೈಸೆ ದರದಲ್ಲಿ ಹೊರ ಹೋಗುವ ಕರೆ ಮಾಡಬಹುದಾಗಿದೆ.

25 ಹಾಗೂ 35 ರು ಯೋಜನೆ

25 ಹಾಗೂ 35 ರು ಯೋಜನೆ

ಏರ್ಟೆಲ್ ನ 25 ರೂಪಾಯಿ ಪ್ಲಾನ್ 18.69 ರೂಪಾಯಿಗಳ ಟಾಕ್ ಟೈಂ ನೀಡುತ್ತಿದೆ. ಇದರ ಜೊತೆ 10 ಎಂಬಿ ಡೇಟಾ ನೀಡುತ್ತಿದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನ ತನಕ ಇರಲಿದೆ. 35 ರೂಪಾಯಿ ಪ್ಲಾನ್: ಇದರ ವ್ಯಾಲಿಡಿಟಿ ಕೂಡಾ 28 ದಿನಗಳ ತನಕ ಇದ್ದು, 26.66 ರೂಪಾಯಿಗಳ ಟಾಕ್ ಟೈಂ ಸಿಗಲಿದೆ. 60 ಪೈಸೆ ಪ್ರತಿ ನಿಮಿಷದ ದರದಲ್ಲಿ ಗ್ರಾಹಕರು ಕರೆ ಮಾಡಬಹುದಾಗಿದೆ. ಇದಲ್ಲದೆ, ಬಳಕೆದಾರರಿಗೆ ಈ ಯೋಜನೆಯಲ್ಲಿ 100 ಎಂಬಿ ಡೇಟಾ ಪಡೆಯಲಿದ್ದಾರೆ.

ಏರ್ಟೆಲ್ ನ 64 ರೂಪಾಯಿ ಪ್ಲಾನ್

ಏರ್ಟೆಲ್ ನ 64 ರೂಪಾಯಿ ಪ್ಲಾನ್

ಏರ್ಟೆಲ್ ನ 64 ರೂಪಾಯಿ ಬಳಸಿ ರೀಚಾರ್ಜ್ ಮಾಡುವ ಗ್ರಾಹಕರಿಗೆ 200 ಎಂಬಿ ಡೇಟಾ ಹಾಗೂ 54 ರೂಪಾಯಿ ತನಕದ ಟಾಕ್ ಟೈಂ ಲಭ್ಯವಿದೆ. ಇದು ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

66 ಹಾಗೂ 95 ರು ಯೋಜನೆ

66 ಹಾಗೂ 95 ರು ಯೋಜನೆ

66 ರೂಪಾಯಿ ಪ್ಲಾನ್ : ಈ ಯೋಜನೆಯಲ್ಲಿ ಗ್ರಾಹಕರಿಗೆ 200 ಎಂಬಿ ಡೇಟಾ ಲಭ್ಯವಾಗಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಕೂಡಾ 60 ಪೈಸೆ ಪ್ರತಿ ನಿಮಿಷದಂತೆ ಕರೆ ಮಾಡಬಹುದಾಗಿದೆ. ಫುಲ್ ಟಾಕ್ ಟೈಂ ಸಿಗುವುದು ವಿಶೇಷ.

95 ರೂಪಾಯಿ ಪ್ಲಾನ್ : ಇದು ಕೂಡಾ 28 ದಿನಗಳ ಸಿಂಧುತ್ವ ಹೊಂದಿದೆ. 500 ಎಂಬಿ ಡೇಟಾ ಜೊತೆಗೆ 30 ಪೈಸೆ ಪ್ರತಿ ನಿಮಿಷದಂತೆ ಕರೆ ಸೌಲಭ್ಯ ಸಿಗಲಿದೆ.

144 ಹಾಗೂ 244 ರು ಯೋಜನೆಗಳು

144 ಹಾಗೂ 244 ರು ಯೋಜನೆಗಳು

144 ರೂಪಾಯಿ ಯೋಜನೆ 42 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ 1ಜಿಬಿ ಡೇಟಾ ಸಿಗಲಿದ್ದು, 144 ರೂಪಾಯಿ ಫುಲ್ ಟಾಕ್ ಟೈಂ ಸಿಗಲಿದೆ.

244 ರೂಪಾಯಿ ಯೋಜನೆ: ಇದರಲ್ಲಿ ಗ್ರಾಹಕರಿಗೆ 2 ಜಿಬಿ ಡೇಟಾ ಸಿಗಲಿದೆ. 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ನಲ್ಲಿ 244 ರೂಪಾಯಿ ಫುಲ್ ಟಾಕ್ ಟೈಂ ಸಿಗಲಿದೆ. ಹೊರ ಹೋಗುವ ಕರೆಗಳಿ 30 ಪೈಸೆ ಪ್ರತಿ ನಿಮಿಷದಂತೆ ಚಾರ್ಜ್ ಮಾಡಲಾಗುತ್ತದೆ.

145 ಹಾಗೂ 245 ರೂಪಾಯಿ ಪ್ಲಾನ್ ಯೋಜನೆ

145 ಹಾಗೂ 245 ರೂಪಾಯಿ ಪ್ಲಾನ್ ಯೋಜನೆ

ಇದರ ಜೊತೆ 145 ಹಾಗೂ 245 ರೂಪಾಯಿ ಪ್ಲಾನ್ ಕಂಪನಿ ಬಿಡುಗಡೆ ಮಾಡಿದೆ. 145 ರೂಪಾಯಿ ಪ್ಲಾನ್ ನಲ್ಲಿ 1 ಜಿಬಿ ಡೇಟಾ ಜೊತೆ 30 ಪೈಸೆ ಪ್ರತಿ ನಿಮಿಷದಂತೆ ಕರೆ ಸಿಗಲಿದೆ. 245 ರೂಪಾಯಿ ಪ್ಲಾನ್ ನಲ್ಲಿ 2 ಜಿಬಿ ಡೇಟಾ ಹಾಗೂ 30 ಪೈಸೆ ಪ್ರತಿ ನಿಮಿಷದಂತೆ ಕರೆ ಸೌಲಭ್ಯ ಸಿಗಲಿದೆ. ಇದರ ವ್ಯಾಲಿಡಿಟಿ 84 ದಿನಗಳಾಗಿವೆ.

English summary
India's second largest telecom provider Airtel has introduced five new prepaid plans under its 'Smart Recharge category. These include Rs 34, Rs 64, Rs 94, Rs 144 and Rs 244 that come with a maximum validity of 84 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X