• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈಯಕ್ತಿಕ ಸಾಲ ಪಡೆಯಲು ಕಾರಣವಾಗುವ 5 ಪ್ರಮುಖ ವೆಚ್ಚಗಳು

|

ಖರ್ಚು-ವೆಚ್ಚಗಳು ಕೆಲವೊಮ್ಮೆ ನಮ್ಮ ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತವೆ. ಅನಿರೀಕ್ಷಿತವಾಗಿ ಎದುರಾಗುವ ಕೆಲವು ಸಮಸ್ಯೆಗಳು ಅಥವಾ ಕಾರಣಗಳು ಅಧಿಕ ಹಣವನ್ನು ವ್ಯಯಿಸುವಂತೆ ಮಾಡುತ್ತವೆ. ಆರ್ಥಿಕವಾಗಿ ನಮ್ಮ ಸ್ಥಿತಿಯು ಉತ್ತಮವಾಗಿಲ್ಲದೆ ಹೋದಾಗ ಅನಿವಾರ್ಯವಾಗಿ ವೈಯಕ್ತಿಕ ಸಾಲದ ಮೊರೆಯನ್ನು ಹೋಗಬೇಕಾಗುವುದು. ಕೆಲವೊಮ್ಮೆ ಆರ್ಥಿಕವಾಗಿ ಉತ್ತಮ ಅಥವಾ ಅನುಕೂಲಕರ ಸ್ಥಿತಿಯಲ್ಲಿ ಇರುವವರು ಸಹ ವೈಯಕ್ತಿಕ ಸಾಲದ ಮೊರೆ ಹೋಗಬೇಕಾಗುತ್ತದೆ. ಸಾಕಷ್ಟು ಹೂಡಿಕೆ ಹಾಗೂ ಯೋಜನೆಗಳನ್ನು ಒಳಗೊಂಡಿರುವ ವ್ಯಕ್ತಿಗಳಿಗೆ ಅನಿರೀಕ್ಷಿತವಾಗಿ ಎದುರಾಗುವ ಸಂದರ್ಭಗಳು ವೈಯಕ್ತಿಕ ಸಾಲಕ್ಕೆ ಮುಂದಾಗುವಂತೆ ಮಾಡುವುದು.

ಯಾವುದೇ ಮೇಲಾಧಾರ ಅಥವಾ ಪುರಾವೆಗಳನ್ನು ಒದಗಿಸುವ ಅಗತ್ಯವಿಲ್ಲದೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಅಂದರೆ ನೀವು ತೆಗೆದುಕೊಳ್ಳುವ ಸಾಲದ ಹಣಕ್ಕೆ ಯಾವುದೇ ಕಾರಣವನ್ನು ಬಹಿರಂಗ ಪಡಿಸುವ ಅಗತ್ಯ ಇರುವುದಿಲ್ಲ. ಹಾಗಾಗಿ ವೈಯಕ್ತಿಕ ಹಣದ ಸಾಲವನ್ನು ಸ್ವತಂತ್ರ ಬಳಕೆಗೆ ಹಾಗೂ ಸುಲಭವಾಗಿ ಪಡೆದುಕೊಳ್ಳಬಹುದಾದ ಸಾಲವಾಗಿದೆ. ಹಾಗಾಗಿ ಕೆಲವು ಪ್ರಮುಖ ಕಾರಣಗಳಿಗೆ ಸುಲಭವಾಗಿ ಈ ಸಾಲವನ್ನು ಪಡೆಯಬಹುದು.

ಸಾಲವನ್ನು ನಾವು ಅನಿವಾರ್ಯ ಸ್ಥಿತಿ ಎದುರಾದಾಗ ಅಥವಾ ತುರ್ತು ಪರಿಸ್ಥಿತಿ ಎದುರಾದಾಗ ಪಡೆದುಕೊಳ್ಳುತ್ತೇವೆ. ಸಾಮಾನ್ಯವಾಗಿ ಐದು ಪ್ರಮುಖ ಕಾರಣಗಳಿಗೆ ಸಾಲವನ್ನು ಪಡೆದುಕೊಳ್ಳುತ್ತಾರೆ. ಹಾಗಾದರೆ ಆ 5 ಕಾರಣಗಳು ಯಾವವು? ಅವುಗಳ ವಿವರಣೆಯನ್ನು ತಿಳಿಯಲು ಮುಂದಿರುವ ಮಾಹಿತಿಯನ್ನು ಪರಿಶೀಲಿಸಿ.

5 Expenses That You Can Finance With a Personal Loan

1. ವೈದ್ಯಕೀಯ ತುರ್ತುಸ್ಥಿತಿಗಾಗಿ ಪಾವತಿಸಲು:

ಅನಿರೀಕ್ಷಿತವಾಗಿ ಎದುರಾಗುವ ಅನಾರೋಗ್ಯ ಸಮಸ್ಯೆಗಳು ಆರೋಗ್ಯವನ್ನು ಹಾಳು ಮಾಡುತ್ತವೆ. ಜೊತೆಗೆ ಒಂದಿಷ್ಟು ಹಣವನ್ನು ವ್ಯಯಿಸಬೇಕಾಗುವುದು. ಅನಾರೋಗ್ಯ ಎದುರಾದಾಗ ಅದನ್ನು ಎದುರಿಸಲು ಸಾಕಷ್ಟು ವೈದ್ಯಕೀಯ ಆರೈಕೆಯ ಮೊರೆ ಹೋಗಬೇಕಾಗುವುದು. ರೋಗಗಳ ಜೊತೆಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿರುವುದಿಲ್ಲ. ಅಂತಹ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಅಥವಾ ಆರೈಕೆಗೆ ಬೇಕಾಗುವ ಹಣದ ವ್ಯವಸ್ಥೆಯನ್ನು ಮಾಡಬೇಕಾಗುವುದು. ಅಂತಹ ಸಮಯದಲ್ಲಿ ನೀವು ನಿಶ್ಚಿತ ಠೇವಣಿ ಅಥವಾ ಬೇರೆ ಯಾವುದೇ ಉದ್ದೇಶಕ್ಕೆ ಇಟ್ಟ ಹಣವನ್ನು ಮುಟ್ಟಲು ಆಗುವುದಿಲ್ಲ. ಹಾಗೆ ಮಾಡುವುದು ತಪ್ಪು ನಿರ್ಧಾರವಾಗುವುದು. ಆದ್ದರಿಂದ ಅಂತಹ ಸಮಯದಲ್ಲಿ ಸುಲಭವಾಗಿ ಹಾಗೂ ತಕ್ಷಣಕ್ಕೆ ಹಣವನ್ನು ಹೊಂದಿಸುವ ಯೋಜನೆ ಎಂದರೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು. ನೀವು ಆಯ್ಕೆ ಮಾಡಿಕೊಂಡ ಸಾಲವು ಕೆಲವೇ ಗಂಟೆಗಳಲ್ಲಿ ಹಣವನ್ನು ಒದಗಿಸುತ್ತದೆ.

2. ಮನೆಯ ನವೀಕರಣಕ್ಕೆ ಹಣಕಾಸು:

ಮನೆಯು ವ್ಯಕ್ತಿಯ ವಾಸಸ್ಥಳ ಹಾಗೂ ಪ್ರತಿಷ್ಠೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಸಮಾಜದಲ್ಲಿ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು. ಹಾಗಾಗಿ ಮನೆಯ ನಿರ್ಮಾಣ ಹಾಗೂ ನವೀಕರಣಕ್ಕೆ ಸಾಕಷ್ಟು ಹಣವನ್ನು ವ್ಯಯಿಸುವುದು ಸಾಮಾನ್ಯ. ನಂತರ ಪ್ರಮುಖ ರಚನಾತ್ಮಕ ವೆಚ್ಚಗಳನ್ನು ತಡೆಗಟ್ಟುವ ದೃಷ್ಟಿಯಿಂದ ವೈಯಕ್ತಿಕ ಸಾಲವು ಅನುಕೂಲವನ್ನು ಮಾಡಿಕೊಡುತ್ತದೆ ಎಂದು ಹೇಳಬಹುದು. ಮನೆಯ ನವೀಕರಣ ಮಾಡುವುದರಿಂದ ಮನೆಯು ಸದಾ ಹೊಸತನ ಹಾಗೂ ಆಕರ್ಷಣೆಯಿಂದ ಕೂಡಿರುತ್ತದೆ. ಅದು ನಮ್ಮ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುವುದು. ವಾಸ್ತು ಪ್ರಕಾರವೂ ಕಟ್ಟಡದಲ್ಲಿ ಯಾವುದೇ ಅನುಚಿತವಾದ ತೊಂದರೆಗಳು ಅಥವಾ ರಿಪೇರಿಯಂತಹ ನ್ಯೂನತೆಗಳು ಇರಬಾರದು. ಅವು ಅನೇಕ ಸಮಸ್ಯೆಯನ್ನು ಸೃಷ್ಟಿಸುತ್ತವೆ.

ಹಾಗಾಗಿ ಮನೆಯ ರಿಪೇರಿ ಹಾಗೂ ಹೊಸತನದಂತೆ ನೋಡಿಕೊಳ್ಳುವುದು ಉತ್ತಮ. ಅದಕ್ಕೆ ಆಗಾಗ ಸ್ವಲ್ಪ ಹಣವನ್ನು ವೆಚ್ಚಮಾಡಬೇಕಾಗುವುದು. ಅಲ್ಲದೆ ಹೊಸತಾಗಿ ಬರುವ ಅನುಕೂಲಕರ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಣವನ್ನು ಒದಗಿಸುವ ಸುಲಭ ಮಾರ್ಗ ವೈಯಕ್ತಿಕ ಸಾಲ. ಮನೆಯ ದುರಸ್ತಿಗೆ ಇಂತಿಷ್ಟೇ ಹಣ ತಗಲುವುದು ಎನ್ನುವ ನಿರ್ದಿಷ್ಟ ಅಂಕಿ ಅಂಶಗಳು ಇರುವುದಿಲ್ಲ. ಹಾಗಾಗಿ ಅದಕ್ಕಾಗಿ ಬೇಕಾಗುವ ಹಣವನ್ನು ನಾವು ನಮ್ಮದೇ ಆದ ಅಂದಾಜಿನ ಆಧಾರದ ಮೇಲೆ ಹಣವನ್ನು ಪಡೆದುಕೊಳ್ಳಬಹುದು. ಇದಕ್ಕೆ ವೈಯಕ್ತಿಕ ಸಾಲ ಅತ್ಯಂತ ಅನುಕೂಲಕರ ಹಾಗೂ ಸರಳವಾದ ವಿಧಾನವಾಗಿರುತ್ತದೆ. ಈ ಸಾಲದಲ್ಲಿ ನೀವು ಬಡ್ಡಿಯನ್ನು ಮಾತ್ರ ಇಎಮ್‍ಐ ಮೂಲಕ ಕಟ್ಟುವಂತಹ ಸವಲತ್ತುಗಳ ಆಯ್ಕೆ ಮಾಡಿಕೊಳ್ಳಬಹುದು.

3. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಲು:

ಕುಟುಂಬದಲ್ಲಿ ಪ್ರತಿಯೊಬ್ಬರು ಅವರದ್ದೇ ಆದ ಕರ್ತವ್ಯ ಹಾಗೂ ಕೆಲಸದ ಒತ್ತಡದಲ್ಲಿ ಇರುತ್ತಾರೆ. ಪ್ರತಿಯೊಬ್ಬರೂ ಅವರದ್ದೇ ಆದ ಜವಾಬ್ದಾರಿಯ ಮೇಲೆ ತೀವ್ರವಾದ ವೇಳಾ ಪಟ್ಟಿಯನ್ನು ಹೊಂದಿರುತ್ತಾರೆ. ಮಕ್ಕಳಿಗೆ ಹಾಗೂ ಹಿರಿಯರಿಗೆ ರಜಾ ದಿನಗಳು ಒಟ್ಟಾಗಿ ಬಂದಾಗ ವಿಶೇಷ ಸ್ಥಳಗಳಿಗೆ ಭೇಟಿ ನೀಡಬೇಕು, ಅಲ್ಲಿಯ ವಿಶೇಷತೆಯನ್ನು ತಿಳಿದುಕೊಳ್ಳುವುದು, ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಹೀಗೆ ವಿವಿಧ ವಿಷಯಗಳಲ್ಲಿ ಸಂತೋಷ ಹಾಗೂ ಸಹಕಾರ ಕೈಗೂಡಿ ಬರುವುದು. ಇಂತಹ ಒಂದು ಸುಂದರ ಅನುಭವವನ್ನು ಪಡೆದುಕೊಳ್ಳಲು ಹೆಚ್ಚು ಹಣವನ್ನು ವ್ಯಯಿಸಬೇಕಾಗುವುದು. ಟ್ರಾವೆಲ್ ಪ್ಯಾಕೇಜ್, ವಿಮಾನ ಅಥವಾ ಸಾರಿಗೆಯ ಟಿಕೆಟ್, ಹೋಟೆಲ್ ವೆಚ್ಚ, ಆಹಾರದ ಹಣ ಹೀಗೆ ವಿವಿಧ ಸಂಗತಿಗಳಿಗಾಗಿ ಒಂದಿಷ್ಟು ಹಣವನ್ನು ಹೊಂದಿರಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಸುಲಭವಾಗಿ ಹಣವನ್ನು ಹೊಂದಿಸಲು ಅನುಕೂಲ ಮಾಡಿಕೊಡುವ ಸಂಗತಿ ಎಂದರೆ ವೈಯಕ್ತಿಕ ಸಾಲ.

ಈ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವಾಗ ನೀವು ಸ್ಪರ್ಧಾತ್ಮಕ ಬಡ್ಡಿದರ ಹಾಗೂ ಆನ್ ಲೈನ್ ಸಾಲ ನಿರ್ವಹಣೆಯನ್ನು ಹೊಂದಿರುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಶೇಷವಾಗಿ ನೀವು ಒಂದು ಸಣ್ಣ ವಿಹಾರಕ್ಕೆ ಸಾಲವನ್ನು ಆಯ್ಕೆ ಮಾಡಿಕೊಂಡರೆ ಅದಕ್ಕೆ ಸೂಕ್ತ ಹಣವನ್ನು ಪಡೆದುಕೊಳ್ಳಬಹುದು. ಹಾಗೊಮ್ಮೆ ನೀವು ವಿದೇಶ ಪ್ರಯಾಣ ಅಥವಾ ಭಾರತದ ಒಂದು ನಿರ್ದಿಷ್ಟ ಸ್ಥಳಗಳ ಭೇಟಿಯನ್ನು ಮಾಡುವ ಯೋಜನೆಯನ್ನು ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಯೋಜನೆಗೆ ತಗುಲುವ ಹಣಕಾಸಿನ ಲೆಕ್ಕವನ್ನು ಮಾಡಿ, ನಂತರ ಅದಕ್ಕೆ ಹೊಂದುವ ರೀತಿಯಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಹಣವನ್ನು ಪಡೆಯಲು ಅಥವಾ ಬಿಡುಗಡೆಗಾಗಿ ವಿನಂತಿಸುವುದು ಮತ್ತು ಮರುಪಾವತಿಗಳನ್ನು ಸಹ ನೀವು ಪಡೆದುಕೊಳ್ಳಬಹುದು.

4. ನಿಮ್ಮ ವಿವಾಹಕ್ಕೆ ಯೋಜನೆಯನ್ನು ಮಾಡಬಹುದು:

ಭಾರತೀಯರು ವಿವಾಹಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಅಲ್ಲದೆ ಬಹಳ ಸಡಗರ ಹಾಗೂ ಸಂಭ್ರಮದಿಂದಲೂ ಆಚರಿಸುತ್ತಾರೆ. ಉತ್ಸವದ ರೂಪದಲ್ಲಿ ಆಚರಿಸುವ ವಿವಾಹಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ವಿವಾಹದ ಯೋಜನೆಯು ಸಣ್ಣ ಅಥವಾ ದೊಡ್ಡ ಯೋಜನೆಯಿಂದ ಕೂಡಿದೆಯೇ? ಎನ್ನುವುದನ್ನು ಮೊದಲು ಪರಿಶೀಲಿಸಿ ನಂತರ ಅದಕ್ಕೆ ಅನುಗುಣವಾಗಿ ವೈಯಕ್ತಿಕ ಸಾಲದ ಮೊರೆ ಹೋಗುವುದು ಸೂಕ್ತ. ವಿವಾಹದ ಖರ್ಚು-ವೆಚ್ಚದಲ್ಲಿಯೇ ನೀವು ವಿವಾಹದ ಮಧುಚಂದ್ರಕ್ಕೆ ವಿಶೇಷ ಸ್ಥಳಗಳಿಗೆ ಭೇಟಿ ನೀಡಬಹುದು. ಹೋಟೆಲ್ ಹಾಗೂ ಸಾರಿಗೆ ವೆಚ್ಚಕ್ಕೆ ತಗುಲುವ ಹಣವನ್ನು ಸಹ ನೀವು ಈ ಸಾಲದ ಮೂಲಕವೇ ಪಡೆದುಕೊಳ್ಳಬಹುದು. ಆನ್ ಲೈನ್ ಮೂಲಕ ಬಹಳ ಸರಳ ವಿಧಾನದಲ್ಲಿ ಹಣವನ್ನು ಪಡೆಯಬಹುದು.

5. ನೀವು ಕ್ರೆಡಿಟ್ ಕಾರ್ಡ್ ಬಳಕೆಯ ಸಾಲಗಾರರಾಗಿದ್ದರೆ:

ನೀವು ಕಾಲಮಾನಕ್ಕೆ ಅನುಗುಣವಾಗಿ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ, ಒಂದು ವೈಯಕ್ತಿಕ ಸಾಲವನ್ನು ಬೇರೆಯ ರೀತಿಯಲ್ಲಿ ಅದನ್ನು ಉಪಯೋಗಿಸಿಕೊಳ್ಳಬಹುದು. ಹೆಚ್ಚಿನ ಸಾಲವನ್ನು ಹೊಂದುವುದು ಸೂಕ್ತವಲ್ಲ. ವಿಶೇಷವಾಗಿ ಬಡ್ಡಿದರಗಳನ್ನು ಮೊದಲು ಪರಿಶೀಲಿಸಬೇಕಾಗುತ್ತದೆ. ನಿಮ್ಮ ಸಾಲವನ್ನು ಕ್ರೋಢಿಕರಿಸುವುದರ ಮೂಲಕ ನೀವು ಅದನ್ನು ತ್ವರಿತವಾಗಿ ತೆರವುಗೊಳಿಸಬಹುದು. ವೆಚ್ಚಗಳನ್ನು ಕಡಿಮೆ ಮಾಡಿ ಗಡುವುಗಳನ್ನು ಸುಲಭಗೊಳಿಸಬಹುದು. ಆಗಲೇ ಅಸ್ತಿತ್ವದಲ್ಲಿ ಇರುವ ಸಾಲವನ್ನು ತೆರವುಗೊಳಿಸಿದ್ದರೆ, ಕೇವಲ ಒಂದು ವೈಯಕ್ತಿಕ ಸಾಲವನ್ನು ನಿಭಾಯಿಸಬೇಕು.

ಈ ಆಯ್ಕೆಗಳಲ್ಲಿ ನಿಮಗೆ ಅನುಕೂಲವಾಗುವ ಹಾಗೂ ಅನಿವಾರ್ಯತೆ ಇರುವ ಕಾರಣಗಳಿಗೆ ಸಂಬಂಧಿಸಿದಂತೆ, ಸುಲಭ ಮರುಪಾವತಿಯ ಯೋಜನೆಯೊಂದಿಗೆ ಕಡಿಮೆ ಬಡ್ಡಿದರದ ಮೂಲಕ ಸಾಲವನ್ನು ಮರುಪಾವತಿಸಬಹುದು. ನಿಮ್ಮ ಸಾಲವು ನಿಮ್ಮ ಬಲವನ್ನು ಅಥವಾ ಆರ್ಥಿಕ ಸ್ಥಿತಿಯನ್ನು ದುರ್ಭಲಗೊಳಿಸುತ್ತದೆ ಎನ್ನುವ ಚಿಂತನೆ ನಡೆಸುವ ಅಗತ್ಯವಿರುವುದಿಲ್ಲ.

ಇದಲ್ಲದೆ, ನೀವು ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ, ವೈಯಕ್ತಿಕ ಸಾಲದ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ. ನಿಮ್ಮ ಕ್ರೆಡಿಟ್ ಸ್ಕೋರ್ ನೀವು ಪಡೆಯಬಹುದಾದ ಬಡ್ಡಿ ದರವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅರ್ಹತೆ ಮಾನದಂಡವನ್ನು ಹೊಂದಿಕೆಯಾಗುವಿಕೆಗೆ ಅನುಗುಣವಾಗಿ ಯಾವುದೇ ನಿರಾಕರಣೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ನೀವು ಈ ರೀತಿಯ ಕಾರಣಗಳಿಂದ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವ ಯೋಜನೆಯಲ್ಲಿ ಇದ್ದೀರಿ ಎಂದಾದರೆ ಬಜಾಜ್ ಫೈನಾನ್ಸ್ ನಿಂದ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಿ. ಈ ಸಂಸ್ಥೆಯು ನಾಮ ಮಾತ್ರ ಬಡ್ಡಿದರದಲ್ಲಿ 25 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುವುದು. ಅಲ್ಲದೆ ಇಎಮ್‍ಐಗಳಲ್ಲಿ ಶೇ.45ರವರೆಗೆ ಉಳಿಸಬಹುದು. ಸುಲಭವಾದ ಸಾಲ ಸೌಲಭ್ಯವನ್ನು ಆನ್ ಲೈನ್ ಮೂಲಕವೂ ನಿರ್ವಹಿಸಬಹುದು. ಸುಲಭ ಸಾಲದ ಆಯ್ಕೆ ನಿಮ್ಮದಾಗಿರಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

lok-sabha-home
English summary
While contemplating on any of these personal loan uses, consider borrowing from Bajaj Finserv. With personal loans up to Rs.25 lakh at nominal interest rates.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more