ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 5 ಬದಲಾವಣೆ

|
Google Oneindia Kannada News

ನವದೆಹಲಿ, ಮಾರ್ಚ್ 13 : ಹೆಣ್ಣು ಮಕ್ಕಳ ಶಿಕ್ಷಣ, ವಿವಾಹಕ್ಕೆ ನೆರವಾಗಲು ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು 2015ರಲ್ಲಿ ಜಾರಿಗೆ ತಂದಿದೆ. ಈ ಖಾತೆಯನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಅಥವ ಅಂಚೆ ಕಚೇರಿಯಲ್ಲಿ ತೆರೆಯಲು ಅವಕಾಶವನ್ನು ನೀಡಲಾಗಿದೆ.

ಕೇಂದ್ರ ಸರ್ಕಾರ ಡಿಸೆಂಬರ್ 12, 2019ರಲ್ಲಿ ಹೊರಡಿಸಿದ ಆದೇಶದಂತೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಯೋಜನೆಯಲ್ಲಿ ಐದು ಬದಲಾವಣೆಗಳು ಆಗಿದ್ದು, ಅವುಗಳ ವಿವರ ಇಲ್ಲಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಅಂತಹ ಮಹತ್ವದ ಬದಲಾವಣೆ ಆಗಿಲ್ಲ. ಆದರೆ, ಕೆಲವು ಚಿಕ್ಕ-ಪುಟ್ಟ ಬದಲಾವಣೆ ಮಾಡಲಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಹೊಂದಿರುವವರು ಆಗಿರುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಬೇಕು.

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಅಂಗವಾಗಿ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ ಪರಿಚಯಿಸಿತ್ತು. ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿ ಮೋದಿ ಈ ಯೋಜನೆಯನ್ನು ಪರಿಚಯಿಸಿದ್ದರು.

ಡಿಫಾಲ್ಟ್ ಅಕೌಂಟ್‌ಗಳಿಗೆ ಹೆಚ್ಚಿನ ಬಡ್ಡಿ

ಡಿಫಾಲ್ಟ್ ಅಕೌಂಟ್‌ಗಳಿಗೆ ಹೆಚ್ಚಿನ ಬಡ್ಡಿ

ಹೊಸ ನಿಯಮಗಳ ಪ್ರಕಾರ ಆರ್ಥಿಕ ವರ್ಷದಲ್ಲಿ ಖಾತೆದಾರರು ರೂ.250 ರೂ. ಪಾವತಿ ಮಾಡದಿದ್ದರೆ ಅಂತಹ ಖಾತೆಯನ್ನು ಡಿಫಾಲ್ಟ್ ಅಕೌಂಟ್ ಎಂದು ತೀರ್ಮಾನಿಸಲಾಗುತ್ತದೆ. ಹೊಸ ನಿಯಮಗಳ ಪ್ರಕಾರ ಈ ಖಾತೆಯ ಮೆಚ್ಯುರಿರಿ ಅವಧಿ ಮುಗಿಯುವ ಯೋಜನೆಯಡಿ ಇರುವ ಬಡ್ಡಿದರ ಸಿಗಲಿದೆ. ಇದರಿಂದಾಗಿ ಖಾತೆ ಹೊಂದಿರುವವರಿಗೆ ಅನುಕೂಲವಾಗಲಿದೆ. ಅಂಚೆ ಇಲಾಖೆಯ ಸದ್ಯದ ಬಡ್ಡಿದರ ಶೇ 4. ಯೋಜನೆ ಅನ್ವಯ ಲಭ್ಯವಿರುವ ವಾರ್ಷಿಕ ಬಡ್ಡಿ ದರ ಶೇ 8.7.

ಅವಧಿಗೂ ಮೊದಲೇ ಖಾತೆಯನ್ನು ಮುಚ್ಚಿರಿ

ಅವಧಿಗೂ ಮೊದಲೇ ಖಾತೆಯನ್ನು ಮುಚ್ಚಿರಿ

ಹೊಸ ನಿಯಮಗಳ ಪ್ರಕಾರ ಅವಧಿಗೂ ಮುನ್ನವೇ ಖಾತೆಯನ್ನು ಮುಚ್ಚಬಹುದು. ಒಂದು ವೇಳೆ ಹೆಣ್ಣು ಮಗು ಮೃತಪಟ್ಟರೆ ಅಥವ ವಿಳಾಸ ಬದಲಾದರೆ ಖಾತೆ ಮುಚ್ಚಲು ಅವಕಾಶವಿದೆ. ಖಾತೆಯನ್ನು ಶಾಶ್ವತವಾಗಿ ಮುಚ್ಚಬಹುದೇ ಅಥವ ಮೆಚ್ಯುರಿಟಿ ಅವಧಿ ತನಕ ವಿಸ್ತರಣೆ ಮಾಡಬಹುದೇ ಎಂಬುದನ್ನು ಹೊಸ ನಿಯಮ ಸ್ಪಷ್ಟಪಡಿಸಿಲ್ಲ.

ಖಾತೆ ನಿರ್ವಹಣೆ ಮಾಡುವಂತಿಲ್ಲ

ಖಾತೆ ನಿರ್ವಹಣೆ ಮಾಡುವಂತಿಲ್ಲ

ಹೊಸ ನಿಯಮಗಳ ಪ್ರಕಾರ ಹೆಣ್ಣು ಮಗು 18 ವರ್ಷವಾಗುವತ ತನಕ ಖಾತೆಯನ್ನು ನಿರ್ವಹಣೆ ಮಾಡುವಂತಿಲ್ಲ. ಹಳೆಯ ನಿಯಮಗಳ ಪ್ರಕಾರ 10 ವರ್ಷದ ವಯೋಮಿತಿ ಇತ್ತು. ಹೆಣ್ಣು ಮಗುವಿಗೆ 18 ವರ್ಷವಾಗುವ ತನಕ ಪೋಷಕರೇ ಖಾತೆಯನ್ನು ನಿರ್ವಹಣೆ ಮಾಡಬೇಕು. 18 ವರ್ಷವಾದಾಗ ಬ್ಯಾಂಕ್/ಅಂಚೆ ಕಚೇರಿಗೆ ನಿಗದಿತ ದಾಖಲೆಗಳನ್ನು ಸಲ್ಲಿಸಬೇಕು.

2ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿದ್ದರೆ

2ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿದ್ದರೆ

2ಕ್ಕಿಂತ ಹೆಚ್ಚಿನ ಹೆಣ್ಣು ಮಕ್ಕಳಿದ್ದರೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಲು ಬೇಕಾದ ದಾಖಲೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಖಾತೆ ತೆರೆಯಲು ಜನನ ಪ್ರಮಾಣ ಪತ್ರವನ್ನು ನೀಡಿದರೆ ಸಾಕು. ಸ್ವಯಂ ಘೋಷಿತ ಅಫಿಡೆವಿಟ್ ಸಲ್ಲಿಕೆ ಮಾಡಬೇಕು. ಹಿಂದಿನ ನಿಯಮದ ಪ್ರಕಾರ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು.

ಖಾತೆಗೆ ಬಡ್ಡಿ ಜಮಾವಣೆಯಾಗಲಿದೆ

ಖಾತೆಗೆ ಬಡ್ಡಿ ಜಮಾವಣೆಯಾಗಲಿದೆ

ಹೊಸ ನಿಯಮಗಳ ಪ್ರಕಾರ ಆ ಆರ್ಥಿಕ ವರ್ಷ ಮುಕ್ತಾಯವಾಗುತ್ತಿದ್ದಂತೆ ಖಾತೆದಾರರಿಗೆ ವಾರ್ಷಿಕ ಬಡ್ಡಿ ದರ ಖಾತೆಗೆ ಜಮಾವಣೆಯಾಗಲಿದೆ.

English summary
5 changes in Sukanya Samriddhi Yojana. Union finance ministry has repealed the existing scheme rules and replaced them with new ones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X