ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿ ಎಫ್ ಡಿಗೆ ಹೆಚ್ಚು ಬಡ್ಡಿ, ಮ್ಯೂಚುವಲ್ ಫಂಡೋ, ಪಿಪಿಎಫೋ?

|
Google Oneindia Kannada News

ಇರುವೆ ಕೂಡ ಮಳೆಗಾಲದ ದಿನಗಳಿಗೆ ಅಂತಲೇ ಒಂದಷ್ಟು ಆಹಾರವನ್ನು ಶೇಖರಿಸಿಡುತ್ತದೆ. ಅಂಥದ್ದರಲ್ಲಿ ಮಕ್ಕಳು-ಕುಟುಂಬ, ಭವಿಷ್ಯ ಎಂದು ಸದಾ ಯೋಚಿಸುವ, ಮನೆ-ಕಾರು ಖರೀದಿ ಅದೂ ಇದು ಎಂದು ಗುರಿ ಹಾಕಿಕೊಂಡು ಪೈಸೆಗೆ ಪೈಸೆ ಕೂಡಿಡಲು ಹವಣಿಸುವ ಮನುಷ್ಯ ಮಾತ್ರರು ಏನೆಲ್ಲ ಯೋಜನೆ-ಆಲೋಚನೆಗಳನ್ನು ಮಾಡಿಕೊಳ್ಳಬೇಕು, ಅಲ್ವಾ?

ಉಳಿತಾಯ ಬಹಳ ಮುಖ್ಯವಾದದ್ದು. ಅದರಲ್ಲೂ ಬುದ್ಧಿವಂತಿಕೆಯಿಂದ ಮಾಡುವ ಉಳಿತಾಯ ತುಂಬಾನೇ ಮುಖ್ಯ. ಸರಕಾರ, ಬ್ಯಾಂಕ್, ಹಣಕಾಸು ಕಂಪೆನಿಗಳು ಎಲ್ಲವೂ ನಾನಾ ಬಗೆಯ ಉಳಿತಾಯ ಯೋಜನೆಗಳನ್ನು ಇಟ್ಟಿರುವುದೇ ಹೂಡಿಕೆ ಮಾಡುವುದಕ್ಕೆ. ತುಂಬ ಬುದ್ಧಿವಂತಿಕೆಯಿಂದ ಹಣ ಹೂಡಿದರೆ ಮಳೆಗಾಲದಲ್ಲಿ (ಕಷ್ಟದ ಸಮಯದಲ್ಲಿ) ಧೈರ್ಯವಾಗಿ ಇರಬಹುದು.

ಹೂಡಿಕೆಯ ಲಾಭ ಹಾಗೂ ಸವಾಲುಗಳನ್ನು ತಿಳಿದರೆ ದೀರ್ಘಾವಧಿಯ ಆರ್ಥಿಕ ಯೋಜನೆಗಳನ್ನು ಹಾಕಿಕೊಳ್ಳುವುದಕ್ಕೆ ಬಹಳ ಅನುಕೂಲಗಳು ಇರುತ್ತವೆ. ಅದಕ್ಕಾಗಿಯೇ ಈ ಲೇಖನದಲ್ಲಿ ಕೆಲವು ಹೂಡಿಕೆ ಅವಕಾಶಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇವುಗಳಲ್ಲಿ ನಿಮ್ಮ ಹಣ ಹೂಡಿಕೆ ಮಾಡಿದರೆ ಭವಿಷ್ಯದ ಆರ್ಥಿಕ ಅಗತ್ಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇರೋದಿಲ್ಲ.

5 Best Saving Schemes in India That You Can Invest In

ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್ಸ್)
ಇದು ತುಂಬ ಸುರಕ್ಷಿತ ಹಾಗೂ ಸಮಸ್ಯೆಯಿಲ್ಲದ ಉಳಿತಾಯ. ನಿರ್ದಿಷ್ಟ ಅವಧಿಗೆ ಠೇವಣಿ ಇಟ್ಟು ನಿಯಮಿತವಾಗಿ ಬಡ್ಡಿ ಪಡೆಯಬಹುದು. ವಿವಿಧ ಬ್ಯಾಂಕ್ ಗಳು ಹಾಗೂ ಹಣಕಾಸು ಕಂಪನಿಗಳು ವಾರ್ಷಿಕ ಶೇ. ಏಳರಷ್ಟು ಬಡ್ಡಿ ನೀಡುತ್ತಿವೆ..

ನೀವು ಕನಿಷ್ಠ ಇಪ್ಪತ್ತೈದು ಸಾವಿರ ರುಪಾಯಿಯಿಂದ ನಿಶ್ಚಿತ ಠೇವಣಿ ಮಾಡಬಹದು.ಇನ್ನು ಅವಧಿಯ ವಿಚಾರಕ್ಕೆ ಬಂದರೆ ಏಳು ದಿನದಿಂದ ಹತ್ತು ವರ್ಷದ ಅವಧಿವರೆಗೆ ನಿಶ್ಚಿತ ಠೇವಣಿ ಇಡಬಹುದು. ಇದರಲ್ಲಿ ಇಷ್ಟೇ ಅವಧಿಗೆ ಹಣ ಇಡಬೇಕು ಎಂಬ ನಿಯಮಗಳಿಲ್ಲ. ಅಗತ್ಯ ಇದ್ದಾಗ ತೆಗೆದುಕೊಳ್ಳಬಹುದು. ಇನ್ನು ಬಡ್ಡಿಯನ್ನು ತಿಂಗಳು ತಿಂಗಳೋ ಅಥವಾ ಮೂರು-ಆರು ತಿಂಗಳು ಅಥವಾ ಠೇವಣಿ ತೆಗೆಯುವಾಗ ನಿಮ್ಮಿಷ್ಟದಂತೆ ಪಡೆಯಬಹುದು.

ತುರ್ತಾಗಿ ಹಣ ಬೇಕಾದ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದ ದಂಡ ಕಟ್ಟಿ ಠೇವಣಿ ತೆಗೆಯಬಹುದು. ಹಿರಿಯ ನಾಗರಿಕರಿಗೆ ಇದನ್ನು ಸಲಹೆ ಮಾಡುವುದು ಹೆಚ್ಚು. ಉಳಿದವರಿಗೆ ಹೋಲಿಸಿದರೆ ಅವರಿಗೆ ಸ್ವಲ್ಪ ಮಟ್ಟಿಗೆ ಬಡ್ಡಿದರ ಹೆಚ್ಚಿಗೆ ಸಿಗುತ್ತದೆ.

ಪರ್ಸನಲ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
ಇದು ತುಂಬ ಸುರಕ್ಷಿತ ಹಾಗೂ ಹೆಸರುವಾಸಿಯಾದ ಹೂಡಿಕೆ ಅವಕಾಶ. ಇದು ಸರಕಾರದ ಪ್ರೋತ್ಸಾಹ ಇರುವ ದೀರ್ಘಾವಧಿ ಹಾಗೂ ತೆರಿಗೆ ಬೀಳದ ಹೂಡಿಕೆ. ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಪಾವತಿ ವೇಳೆಯಲ್ಲಿ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿ ಇದೆ. ಇದರ ಮೇಲಿನ ಬಡ್ಡಿಗೂ ತೆರಿಗೆ ವಿನಾಯಿತಿ ಇದೆ.

ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆ ತೆರೆಯಬಹುದು. ಹದಿನೈದು ವರ್ಷಗಳ ಕಾಲ ಕಟ್ಟಬೇಕಾಗುತ್ತದೆ. ಇನ್ನೈದು ವರ್ಷ ನಿಮಗೆ ಬೇಕು ಅಂದರೆ ವಿಸ್ತರಣೆ ಮಾಡಬಹುದು. ಆದರೆ ಐದು ವರ್ಷಗಳ ಕಾಲ ಈ ಹಣವನ್ನು ತೆಗೆಯುವುದಕ್ಕೆ ಆಗಲ್ಲ. ನಿಮ್ಮ ಹೂಡಿಕೆಗೆ ಪ್ರತಿಯಾಗಿ ವಾರ್ಷಿಕ ಶೇ 7.90 ಕಾಂಪೌಂಡ್ ಬಡ್ಡಿದರ ಸಿಗುತ್ತದೆ. ವಾರ್ಷಿಕ ಕನಿಷ್ಠ 500ರಿಂದ ಗರಿಷ್ಠ 1.50 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್
ಇದಕ್ಕೆ ಕೂಡ ಸರಕಾರದ ಪ್ರೋತ್ಸಾಹ ಇದೆ. ಈ ಹೂಡಿಕೆಯಲ್ಲಿ ನಿಶ್ಚಿತ ಲಾಭ ಜತೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಯಾವುದೇ ಅಂಚೆ ಕಚೇರಿಯಲ್ಲಿ ಐದು ವರ್ಷಗಳ ಅವಧಿಗೆ ಮಾಡಿಸಬಹುದು. ಬಡ್ಡಿದರವನ್ನು ಸರಕಾರ ನಿರ್ಧರಿಸುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ದರ ಪರಿಷ್ಕರಣೆ ಕೂಡ ಆಗುತ್ತದೆ.

ಒಮ್ಮೆ ಹೂಡಿಕೆ ಮಾಡಿದ ಮೇಲೆ ಆ ಅವಧಿಯಲ್ಲಿ ಬಡ್ಡಿ ದರ ಬದಲಾಗುವುದಿಲ್ಲ. ಸದ್ಯಕ್ಕೆ ಎನ್ಎಸ್ ಸಿ ಮೇಲಿನ ಹೂಡಿಕೆಗೆ ವಾರ್ಷಿಕ ಶೇ 7.90 ದರ ಇದೆ. ಆರು ತಿಂಗಳಿಗೆ ಒಮ್ಮೆ ಕಾಂಪೌಂಡ್ ಬಡ್ಡಿದರ ದೊರೆಯುತ್ತದೆ. ಕನಿಷ್ಠ ಐನೂರು ರುಪಾಯಿ ಹಾಗೂ ಗರಿಷ್ಠ ಎಂದು ಯಾವುದೇ ಮಿತಿ ಇಲ್ಲ. ಆದರೆ ಸೆಕ್ಷನ್ 80C ಅಡಿಯಲ್ಲಿ ಒಂದೂವರೆ ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಆದರೆ ಬಂಡವಾಳದ ಮೇಲೆ ಗಳಿಸಿದ ಬಡ್ಡಿಗೆ ತೆರಿಗೆ ಬೀಳುತ್ತದೆ.

ಮ್ಯೂಚುವಲ್ ಫಂಡ್
ನೀವು ಮ್ಯೂಚುವಲ್ ಫಂಡ್ ಗಳಲ್ಲಿ ಕೂಡ ಹಣ ಹೂಡಬಹುದು. ನಿಮ್ಮ ಆದ್ಯತೆ ಮೇರೆಗೆ ಷೇರು, ಡೆಟ್ ಫಂಡ್ ವಿವಿಧ ಕಡೆಗಳಲ್ಲಿ ಬಂಡವಾಳ ಹಂಚಿಕೆ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹಣ ಹೂಡುವುದಕ್ಕಿಂತ ಇದರಲ್ಲಿ ರಿಸ್ಕ್ ಕಡಿಮೆ.

ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ (ಎಸ್ ಐಪಿ) ಎಂದು ಆರಿಸಿಕೊಂಡು ಸಣ್ಣ ಪ್ರಮಾಣದಲ್ಲಿಯೇ ಆದರೂ ನಿರಂತರವಾಗಿ ಹೂಡಿಕೆ ಮಾಡಬಹುದು. ಬೇರೆ ಉಳಿತಾಯ ಯೋಜನೆಗೆ ಹೋಲಿಸಿದರೆ ಇದರಿಂದ ಸಿಗುವ ರಿಟರ್ನ್ಸ್ ಹೆಚ್ಚಿರುತ್ತದೆ.

ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್ ಎಸ್ ಎಸ್)
ಇದರ ಹೆಸರೇ ಹೇಳುವ ಹಾಗೆ ನಿಮ್ಮ ಹೂಡಿಕೆಯು ಮ್ಯೂಚುವಲ್ ಫಂಡ್ ನಲ್ಲಿ ಆಗಿದ್ದು, ಷೇರು ಮಾರುಕಟ್ಟೆಯಲ್ಲಿ ಹಾಕಲಾಗುತ್ತದೆ. ಸೆಕ್ಷನ್ 80C ಅಡಿಯಲ್ಲಿ ಒಂದೂವರೆ ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಆದರೆ ಮೂರು ವರ್ಷಗಳ ಕಾಲ ಆ ಹಣವನ್ನು ತೆಗೆಯುವುದಕ್ಕೆ ಆಗಲ್ಲ.ಇದರಲ್ಲಿ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ. ಜತೆಗೆ ರಿಸ್ಕ್ ಕೂಡ ಅದೇ ರೀತಿ ಇರುತ್ತದೆ. ಕನಿಷ್ಠ ಐನೂರು ರುಪಾಯಿ ಅಂತಿದೆ. ಆದರೆ ಗರಿಷ್ಠ ಮಿತಿ ಅಂತೇನೂ ಇಲ್ಲ.

ಬುದ್ಧಿವಂತಿಕೆ ಏನೆಂದರೆ ಇಲ್ಲಿರುವ ಆಯ್ಕೆಗಳು ಎಲ್ಲವನ್ನೂ ಆಯ್ದುಕೊಂಡು, ನಿಮ್ಮ ಆದಾಯಕ್ಕೆ ತಕ್ಕ ಹಾಗೆ, ಮನಸು ಒಪ್ಪುವ ಹಾಗೆ ಸ್ವಲ್ಪ ಸ್ವಲ್ಪ್ ಮೊತ್ತವನ್ನು ಹೂಡಿಕೆ ಮಾಡುವುದು. ಅಂದರೆ ಎಫ್ ಡಿ, ಮ್ಯೂಚುವಲ್ ಫಂಡ್, ಎನ್ ಎಸ್ ಸಿ ಎಲ್ಲದರಲ್ಲೂ ಸ್ವಲ್ಪ ಸ್ವಲ್ಪ ಮೊತ್ತ ಹೂಡಿಕೆ ಮಾಡಬಹುದು.

ಅಂದಹಾಗೆ ಬಜಾಜ್ ಫ್ಫೈನಾನ್ಸ್ ಅವರು ನಿಶ್ಚಿತ ಠೇವಣಿ ಅಡಿಯಲ್ಲಿ ವಾರ್ಷಿಕ ಶೇ 8.05ರಷ್ಟು ಬಡ್ಡಿ ನೀಡುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಅವಧಿ ಮತ್ತು ಬಡ್ಡಿಯೂ ಸಿಗುತ್ತದೆ. ಎಫ್ ಡಿ ಕ್ಯಾಲ್ಯುಕೇಟರ್ ಬಳಸಿ ನಿಮಗೆ ಎಷ್ಟು ಬಡ್ಡಿ ಸಿಗಬಹುದು ಮತ್ತು ಅಂತಿಮವಾಗಿ ಎಷ್ಟು ಹಣ ಸಿಗಬಹುದು ಎಂಬುದನ್ನು ಲೆಕ್ಕ ಹಾಕಿಕೊಳ್ಳಿ.

English summary
The government, banks and financial companies, all offer various savings schemes to encourage people to invest their money for a specified period of time and earn periodic returns on their investments. If you invest prudently, knowing the pros and cons of various investment options, you can ace your financial planning endeavours. Here are the best investment schemes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X