ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4G ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲನೇ ಸ್ಥಾನ

|
Google Oneindia Kannada News

ನವದೆಹಲಿ, ಡಿಸೆಂಬರ್ 16: ರಿಲಯನ್ಸ್ ಜಿಯೋ ಸೆಕೆಂಡಿಗೆ 20.8 ಮೆಗಾಬಿಟ್ (ಎಮ್‌ಬಿಪಿಎಸ್) ಡೌನ್‌ಲೋಡ್ ವೇಗದ ಸೇವೆಯನ್ನು ನೀಡುವ ಮೂಲಕ 4G ಡೌನ್‌ಲೋಡ್‌ ವೇಗದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ, ಅಪ್‌ಲೋಡ್ ವಿಭಾಗದಲ್ಲಿ ವೊಡಾಫೋನ್ 6.5 ಎಮ್‌ಬಿಪಿಎಸ್ ವೇಗದೊಂದಿಗೆ ಅಗ್ರಸ್ಥಾನದಲ್ಲಿದೆ ಎಂದು ಟೆಲಿಕಾಂ ನಿಯಂತ್ರಕ ಟ್ರಾಯ್ ವರದಿ ಮಾಡಿದೆ.

ನೈಜ ಸಮಯದ ಆಧಾರದ ಮೇಲೆ ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಭಾರತದಾದ್ಯಂತ ಸಂಗ್ರಹಿಸುವ ಡೇಟಾದ ಆಧಾರದ ಮೇಲೆ ಸರಾಸರಿ ವೇಗವನ್ನು ಟ್ರಾಯ್ ಲೆಕ್ಕಾಚಾರ ಮಾಡುತ್ತದೆ.

"ಜಿಯೋ ರೈತ ವಿರೋಧಿಯಲ್ಲ'' ಆರೋಪ ನಿರಾಕರಿಸಿದ ಏರ್ ಟೆಲ್, ವಿಐಎಲ್

ಡೌನ್‌ಲೋಡ್‌ ವೇಗದ ಪಟ್ಟಿಯಲ್ಲಿ ಜಿಯೋ ತನ್ನ ಹತ್ತಿರದ ಪ್ರತಿಸ್ಪರ್ಧಿ ವೊಡಾಫೋನ್ ಗಿಂತಲೂ ಡಬಲ್ ಡೌನ್‌ಲೋಡ್ ವೇಗವನ್ನು ಹೊಂದಿದೆ. ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲಾರ್ ತಮ್ಮ ಮೊಬೈಲ್ ವ್ಯವಹಾರವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್ ಆಗಿ ವಿಲೀನಗೊಳಿಸಿದರೂ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಇನ್ನೂ ಎರಡೂ ಘಟಕಗಳ ಪ್ರತ್ಯೇಕ ವೇಗ ಡೇಟಾವನ್ನು ಬಿಡುಗಡೆ ಮಾಡುತ್ತಿದೆ.

4G download speed: Jio fastest network ; Vodafone leads in upload

ಡಿಸೆಂಬರ್ 10 ರಂದು ಟ್ರಾಯ್‌ ಬಿಡುಗಡೆಗೊಳಿಸಿದ ಮಾಹಿತಿಯ ಪ್ರಕಾರ ನವೆಂಬರ್‌ನಲ್ಲಿ ವೊಡಾಫೋನ್ 9.8 ಎಮ್‌ಬಿಪಿಎಸ್ ಡೌನ್‌ಲೋಡ್ ವೇಗವನ್ನುದಾಖಲಿಸಿದೆ. ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 8.8 ಎಮ್‌ಬಿಪಿಎಸ್ ಮತ್ತು 8 ಎಮ್‌ಬಿಪಿಎಸ್ ಡೌನ್‌ಲೋಡ್ ವೇಗವನ್ನು ಹೊಂದಿದೆ.

ಅಪ್‌ಲೋಡ್ ವಿಭಾಗದಲ್ಲಿ ವೊಡಾಫೋನ್ 6.5 ಎಮ್‌ಬಿಪಿಎಸ್ ವೇಗದೊಂದಿಗೆ ಅಗ್ರಸ್ಥಾನದಲ್ಲಿದೆ. ಐಡಿಯಾ ನಂತರ 5.8 ಎಮ್‌ಬಿಪಿಎಸ್, ಏರ್‌ಟೆಲ್ 4 ಎಮ್‌ಬಿಪಿಎಸ್ ಮತ್ತು ಜಿಯೋ 3.7 ಎಮ್‌ಬಿಪಿಎಸ್ ಅಪ್‌ಲೋಡ್ ವೇಗವನ್ನು ಹೊಂದಿದೆ. ನವೆಂಬರ್‌ನಲ್ಲಿ 6.5 ಎಮ್‌ಬಿಪಿಎಸ್ ಅಪ್‌ಲೋಡ್ ವೇಗದ ಸೇವೆಯನ್ನು ನೀಡಿದ ವೊಡಾಫೋನ್ ಈ ವಿಭಾಗದಲ್ಲಿ ಇತರರಿಗಿಂತ ಮುಂದಿದೆ ಎಂದು ಟೆಲಿಕಾಂ ನಿಯಂತ್ರಕ ಟ್ರಾಯ್ ತನ್ನ ವರದಿಯಲ್ಲಿ ತಿಳಿಸಿದೆ.

ಡೌನ್‌ಲೋಡ್ ವೇಗವು ಗ್ರಾಹಕರಿಗೆ ವಿಡಿಯೋ ನೋಡಲು, ಆನ್‌ಲೈನ್ ಗೇಮ್ ಆಡಲು ಮತ್ತು ವಿಡಿಯೋ ಮತ್ತು ಆಡಿಯೋ ಗಳನ್ನು ಡೌನ್‌ಲೋಡ್‌ ಮಾಡಲು ಸಹಾಯ ಮಾಡುತ್ತದೆ. ಅಪ್‌ಲೋಡ್ ವೇಗವು ಚಿತ್ರಗಳು, ವಿಡಿಯೋ ಇತ್ಯಾದಿಗಳನ್ನು ಕಳುಹಿಸಲು ಅಥವಾ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

English summary
4G download speed stats in November: Jio has fastest network and Vodafone leads in upload says TRAI data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X