ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಸೇರಿಸಲು ಸಕಾಲವಲ್ಲ: ಸೀತಾರಾಮನ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವೆ ತೆರಿಗೆ(ಜಿಎಸ್‌ಟಿ) ವ್ಯಾಪ್ತಿಗೆ ಸೇರಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲು ಇದು ಸರಿಯಾದ ಸಮಯವಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಹಣಕಾಸು ಸಚಿವರು ಮತ್ತು ಜಿಎಸ್‌ಟಿ ಕೌನ್ಸಿಲ್ ಸಭೆ ಸದಸ್ಯರೊಂದಿಗೆ 45ನೇ ಸಭೆ ನಡೆಸಿದರು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಕಳೆದ 2019 ಡಿಸೆಂಬರ್ 18ರ ಬಳಿಕ ಮೊದಲ ಬಾರಿಗೆ ಜಿಎಸ್‌ಟಿ ಕೌನ್ಸಿಲ್ ಸಭೆಯನ್ನು ನಡೆಸಲಾಯಿತು.

ಕೋವಿಡ್‌ ಔಷಧಿಗಳ ಮೇಲಿನ ತೆರಿಗೆ ರಿಯಾಯಿತಿ ಡಿಸೆಂಬರ್ 31ರವರೆಗೆ ವಿಸ್ತರಣೆ: ನಿರ್ಮಲಾಕೋವಿಡ್‌ ಔಷಧಿಗಳ ಮೇಲಿನ ತೆರಿಗೆ ರಿಯಾಯಿತಿ ಡಿಸೆಂಬರ್ 31ರವರೆಗೆ ವಿಸ್ತರಣೆ: ನಿರ್ಮಲಾ

ಶುಕ್ರವಾರ ನಡೆಸಿದ ಜಿಎಸ್‌ಟಿ ಕೌನ್ಸಿಲ್ ಸಭೆಯ ಮುಖ್ಯ ಧ್ಯೇಯೋದ್ದೇಶವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದೇಶದ ಏಕರೂಪ ತೆರಿಗೆ ನೀತಿ ಆಗಿರುವ ಜಿಎಸ್‌ಟಿ ವ್ಯಾಪ್ತಿಗೆ ಸೇರಿವುವುದೇ ಆಗಿತ್ತು. ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರಿಸುವ ಕುರಿತು ಚರ್ಚೆಯನ್ನು ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ತೆಗೆದುಕೊಳ್ಳಲಾಯಿತು. ಈ ವಿಷಯವನ್ನು ಕೌನ್ಸಿಲ್ ಮುಂದೆ ಚರ್ಚೆಗೆ ಇಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಅದಾಗ್ಯೂ, ಕೇಂದ್ರ ಮತ್ತು ರಾಜ್ಯಗಳು ಜಿಎಸ್‌ಟಿ ಆಡಳಿತದ ವ್ಯಾಪ್ತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲು ವಿಫಲವಾಗಿವೆ.

ಜೈವಿಕ ಡೀಸೆಲ್ ಮೇಲಿನ ತೆರಿಗೆ ಕಡಿತ:

ಡೀಸೆಲ್‌ನೊಂದಿಗೆ ಬೆರೆಸುವ ಜೈವಿಕ ಡೀಸೆಲ್ ಮೇಲಿನ ಜಿಎಸ್‌ಟಿ ದರವನ್ನು (ತೈಲ ಮಾರುಕಟ್ಟೆ ಕಂಪನಿಗಳು ಬಳಸುವ) ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ರೈಲ್ವೆ ಬಿಡಿಭಾಗ, ಲೋಕೋಮೋಟಿವ್‌ಗಳ ಮೇಲಿನ ಜಿಎಸ್‌ಟಿಯನ್ನು ಪ್ರಸ್ತುತ ಶೇ.12 ರಿಂದ ಶೇ.18ಕ್ಕೆ ಹೆಚ್ಚಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.

ಕೇರಳ ಹೈಕೋರ್ಟ್ ಸೂಚನೆಯಲ್ಲಿ ಏನಿತ್ತು?:

ಭಾರತದಲ್ಲಿ ಇಂಧನ ಬೆಲೆ ಗಗನಮುಖಿಯಾಗಿ ಏರಿಕೆಯಾಗುತ್ತಿರುವುದರ ನಡುವೆ ಕಳೆದ ಜೂನ್ ತಿಂಗಳಿನಲ್ಲಿ ರಿಟ್ ಅರ್ಜಿಯೊಂದು ಕೇರಳದ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಕೌನ್ಸಿಲ್ ಗೆ ಸೂಚನೆ ನೀಡಿತ್ತು.

ಜೈವಿಕ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ

ಜೈವಿಕ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆ

ಡೀಸೆಲ್‌ನೊಂದಿಗೆ ಬೆರೆಸುವ ಜೈವಿಕ ಡೀಸೆಲ್ ಮೇಲಿನ ಜಿಎಸ್‌ಟಿ ದರವನ್ನು (ತೈಲ ಮಾರುಕಟ್ಟೆ ಕಂಪನಿಗಳು ಬಳಸುವ) ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ರೈಲ್ವೆ ಬಿಡಿಭಾಗ, ಲೋಕೋಮೋಟಿವ್‌ಗಳ ಮೇಲಿನ ಜಿಎಸ್‌ಟಿಯನ್ನು ಪ್ರಸ್ತುತ ಶೇ.12 ರಿಂದ ಶೇ.18ಕ್ಕೆ ಹೆಚ್ಚಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.

ಕೇರಳ ಹೈಕೋರ್ಟ್ ಸೂಚನೆಯಲ್ಲಿ ಏನಿತ್ತು?:

ಭಾರತದಲ್ಲಿ ಇಂಧನ ಬೆಲೆ ಗಗನಮುಖಿಯಾಗಿ ಏರಿಕೆಯಾಗುತ್ತಿರುವುದರ ನಡುವೆ ಕಳೆದ ಜೂನ್ ತಿಂಗಳಿನಲ್ಲಿ ರಿಟ್ ಅರ್ಜಿಯೊಂದು ಕೇರಳದ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಕೌನ್ಸಿಲ್ ಗೆ ಸೂಚನೆ ನೀಡಿತ್ತು.

ಕೊವಿಡ್-19 ಔಷಧಿಗಳ ತೆರಿಗೆ ಇಳಿಮುಖ

ಕೊವಿಡ್-19 ಔಷಧಿಗಳ ತೆರಿಗೆ ಇಳಿಮುಖ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಶಿಸ್ತುಬದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೊವಿಡ್-19 ಸೋಂಕಿನ ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳು ಮತ್ತು ಔಷಧಿಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಲಾಗಿದೆ. ಅದಲ್ಲದೇ ಬ್ಲ್ಯಾಕ್ ಫಂಗಸ್ ರೋಗದ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಔಷಧಿಗಳ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

Tocilizumab ಹಾಗೂ Amphotericin B ಔಷಧಿಗಳ ಮೇಲೆ ಜಿಎಸ್‌ಟಿಯನ್ನು ಶೇಕಡಾ 5ಕ್ಕೆ ನಿಗದಿಪಡಿಸಿದರೆ ರೆಮ್‌ಡೆಸಿವಿರ್ ಮತ್ತು ಹೆಪಾರಿನ್‌ನಂತಹ ಆಂಟಿ ಕೋಗುಲಂಟ್‌ಗಳ ಮೇಲಿನ ತೆರಿಗೆಯನ್ನು ಶೇಕಡಾ 12 ರಿಂದ 5ಕ್ಕೆ ಇಳಿಸಲಾಗಿದೆ. ಹಿಂದಿನ ಜಿಎಸ್‌ಟಿ ಸಭೆಯಲ್ಲಿ, ಕೋವಿಡ್ -19 ಔಷಧಿಗಳಾದ ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಕಾನ್ಸಂಟ್ರೇಟರ್ ಗಳು ಮತ್ತು ವೈದ್ಯಕೀಯ ಆಮ್ಲಜನಕದಂತಹ ಸರಕುಗಳಿಗೆ ತೆರಿಗೆ ದರ ಕಡಿತಗೊಳಿಸಲಾಗಿತ್ತು.

ಕಂದಾಯ ಇಲಾಖೆಯಿಂದ ತೆರಿಗೆ ವಿನಾಯಿತಿ ಘೋಷಣೆ

ಕಂದಾಯ ಇಲಾಖೆಯಿಂದ ತೆರಿಗೆ ವಿನಾಯಿತಿ ಘೋಷಣೆ

ಕೊರೊನಾವೈರಸ್ ಸೋಂಕಿನ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳ ಸರಬರಾಜು ಮಾಡುವುದಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. 18 ಬಗೆ ವೈದ್ಯಕೀಯ ಉಪಕರಣಗಳ ಮೇಲಿನ ಸರಬರಾಜು ತೆರಿಗೆಯನ್ನು ಕಂದಾಯ ಇಲಾಖೆ ಕಡಿತಗೊಳಿಸಿದೆ. ಇದರ ಜೊತೆಗೆ ವೈದ್ಯಕೀಯ ಆಮ್ಲಜನಕ, ಆಮ್ಲಜನಕ ಕಾನ್ಸಂಟ್ರೇಟರ್‌ಗಳು, ವೆಂಟಿಲೇಟರ್‌ಗಳು, ಬೈಪಾಪ್ ಯಂತ್ರಗಳು ಮತ್ತು ಹೈ ಫ್ಲೋ ನಾಸಲ್ ಕ್ಯಾನುಲ್ಲಾ ಸಾಧನಗಳ ಮೇಲಿನ ತೆರಿಗೆಯನ್ನು ಶೇಕಡಾ 12 ರಿಂದ 5ಕ್ಕೆ ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕೊರೊನಾವೈರಸ್ ನಿರ್ವಹಣೆಗೆ ಭಾರವಾಗದು ಜಿಎಸ್‌ಟಿ

ಕೊರೊನಾವೈರಸ್ ನಿರ್ವಹಣೆಗೆ ಭಾರವಾಗದು ಜಿಎಸ್‌ಟಿ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅಟ್ಟಹಾಸ ಮೆರೆಯುತ್ತಿದ್ದ ಸಂದರ್ಭದಲ್ಲಿ ಅಂತ್ಯಕ್ರಿಯೆಗೂ ಜನರು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಅಂತ್ಯಕ್ರಿಯೆಗೆ ಎಲೆಕ್ಟ್ರಿಕ್ ಘಟಕಗಳನ್ನು ಸ್ಥಾಪಿಸುವುದಕ್ಕೆ ಹಾಗೂ ಅಂತ್ಯಸಂಸ್ಕಾರಕ್ಕಾಗಿ ಬಳಸುವ ಗ್ಯಾಸ್ ಮೇಲಿನ ತೆರಿಗೆಯನ್ನು ಶೇ.18 ರಿಂದ ಶೇ.5ಕ್ಕೆ ಕಡಿತಗೊಳಿಸಲಾಗಿದೆ. ಇದರ ಜೊತೆಗೆ ಆಂಬುಲೆನ್ಸ್ ಮೇಲಿನ ಜಿಎಸ್‌ಟಿ ದರವನ್ನು ಶೇ.28 ರಿಂದ ಶೇ.12ಕ್ಕೆ ಇಳಿಸಲಾಗಿದೆ. ಸ್ಯಾನಿಟೈಸರ್ ಮೇಲಿನ ಜಿಎಸ್‌ಟಿ ದರವನ್ನು ಶೇ.12 ರಿಂದ ಶೇ.5ಕ್ಕೆ ತಗ್ಗಿಸಲಾಗಿದೆ. ಈ ಮಧ್ಯೆ ಕೊವಿಡ್-19 ಸೋಂಕು ಪತ್ತೆಗಾಗಿ ದೇಹದ ಉಷ್ಣಾಂಶ ಪರೀಕ್ಷಿಸುವ ಉಪಕರಣಗಳ ಮೇಲಿನ ತೆರಿಗೆಯನ್ನು ಶೇ.18ರಿಂದ ಶೇ.5ಕ್ಕೆ ಕಡಿತಗೊಳಿಸಲಾಗಿದೆ, ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೊರೊನಾವೈರಸ್ ಲಸಿಕೆ ವಿತರಣೆ ಮೇಲೆ ಶೇ.5ರಷ್ಟು ತೆರಿಗೆ

ಕೊರೊನಾವೈರಸ್ ಲಸಿಕೆ ವಿತರಣೆ ಮೇಲೆ ಶೇ.5ರಷ್ಟು ತೆರಿಗೆ

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸುವುದನ್ನು ಮುಂದುವರಿಸಲಾಗಿದೆ. ಕೊವಿಡ್-19 ಪರೀಕ್ಷಾ ಕಿಟ್ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಮೇಲೆ ಯಾವುದೇ ರೀತಿ ತೆರಿಗೆ ವಿನಾಯಿತಿಯನ್ನು ಘೋಷಿಸಿಲ್ಲ. RT-PCR ಪರೀಕ್ಷಾ ಉಪಕರಣಗಳ ಮೇಲೆ ಶೇ.18ರಷ್ಟು ತೆರಿಗೆ ಹಾಗೂ ಆರ್ಎನ್ಆರ್ ಎಕ್ಸ್ ಟ್ರಾಕ್ಷನ್ ಮಷಿನ್ ಜೆನೊಮೆ ಸೀಕ್ವೆನ್ಸಿಂಗ್ ಮಷಿನ್ ಮೇಲೆ ಶೇ.12ರಷ್ಟು ತೆರಿಗೆಯನ್ನು ಹೇರಲಾಗುತ್ತಿದೆ. ಈ ವೈದ್ಯಕೀಯ ಉಪಕರಣಗಳ ಮೇಲೆ ಶುಕ್ರವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಯಾವುದೇ ರೀತಿಯ ವಿನಾಯಿತಿ ಅಥವಾ ಕಡಿತಗೊಳಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರಮುಖ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಕಡಿತ

ಪ್ರಮುಖ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಕಡಿತ

* ಅಂಗವಿಕಲರು ಬಳಸುವ ವಾಹನಗಳಿಗೆ ರೆಟ್ರೊ ಫಿಟ್ಮೆಂಟ್ ಕಿಟ್ ಮೇಲಿನ ತೆರಿಗೆಯನ್ನು ಶೇ.18 ರಿಂದ ಶೇ.5ಕ್ಕೆ ಕಡಿತಗೊಳಿಸಲಾಗಿದೆ

* ICDS ಇತ್ಯಾದಿ ಯೋಜನೆಗಳಿಗಾಗಿ ಬಲವರ್ಧಿತ ಅಕ್ಕಿ ಕಾಳುಗಳ ಮೇಲಿನ ತೆರಿಗೆ ಶೇ.12 ರಿಂದ ಶೇ.5ಕ್ಕೆ ಇಳಿಕೆ

* ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುವ ಕೀಟ್ರುಡ ಔಷಧ ಮೇಲಿನ ತೆರಿಗೆಯನ್ನು ಶೇ.12 ರಿಂದ ಶೇ.5ಕ್ಕೆ ಇಳಿಸಲಾಗಿದೆ

* ಜೈವಿಕ ಡೀಸೆಲ್ ಅನ್ನು ಡೀಸೆಲ್ ನೊಂದಿಗೆ ಮಿಶ್ರಣ ಮಾಡಲು ಒಎಂಸಿಗಳಿಗೆ ಸರಬರಾಜು ಮಾಡಲಾಗಿದ್ದು, ಇವುಗಳ ಮೇಲಿನ ತೆರಿಗೆ ಶೇ.12 ರಿಂದ 5ಕ್ಕೆ ಇಳಿಕೆ

* ನಿರ್ದಿಷ್ಟಪಡಿಸಿದ ನವೀಕರಿಸಬಹುದಾದ ಶಕ್ತಿ ಸಾಧನಗಳು ಮತ್ತು ಭಾಗಗಳ ಮೇಲಿನ ತೆರಿಗೆ ಶೇ. 5 ರಿಂದ 12ಕ್ಕೆ ಏರಿಕೆ

* ಕಬ್ಬಿಣ, ತಾಮ್ರ, ಅಲ್ಯೂಮಿನಿಯಂ, ಸತು ಮತ್ತು ಇತರ ಕೆಲವು ಲೋಹಗಳ ಅದಿರುಗಳು ಮತ್ತು ಸಾಂದ್ರತೆಗಳು ಮೇಲಿನ ತೆರಿಗೆ ಶೇ.5 ರಿಂದ 18ಕ್ಕೆ ಏರಿಕೆ

* ಪೆಟ್ಟಿಗೆಗಳು, ಪೆಟ್ಟಿಗೆಗಳು, ಚೀಲಗಳು, ಕಾಗದದ ಪ್ಯಾಕಿಂಗ್ ಪಾತ್ರೆಗಳು ಇತ್ಯಾದಿಗಳ ಮೇಲಿನ ತೆರಿಗೆ ಶೇ. 12 ರಿಂದ ಶೇ.18ಕ್ಕೆ ಏರಿಕೆ

* ಪಾಲಿಯುರೆಥೇನ್ ಮತ್ತು ಇತರ ಪ್ಲಾಸ್ಟಿಕ್‌ಗಳ ತ್ಯಾಜ್ಯ ಮತ್ತು ಕಚ್ಚಾ ವಸ್ತುಗಳ ಮೇಲಿನ ತೆರಿಗೆ ಶೇ.5 ರಿಂದ ಶೇ.18ಕ್ಕೆ ಏರಿಕೆ

* ಎಲ್ಲಾ ರೀತಿಯ ಪೆನ್ನುಗಳ ಮೇಲಿನ ತೆರಿಗೆ ಶೇ.12 ರಿಂದ 18ಕ್ಕೆ ಏರಿಕೆ

* ಅಧ್ಯಾಯ 86 ರಲ್ಲಿ ರೈಲ್ವೆ ಭಾಗಗಳು, ಲೋಕೋಮೋಟಿವ್‌ಗಳು ಮತ್ತು ಇತರ ಸರಕುಗಳ ಮೇಲಿನ ತೆರಿಗೆ ಶೇ.12 ರಿಂದ ಶೇ.18ಕ್ಕೆ ಏರಿಕೆ

* ಕಾರ್ಡ್‌ಗಳು, ಕ್ಯಾಟಲಾಗ್, ಮುದ್ರಿತ ವಸ್ತುಗಳಂತಹ ಕಾಗದದ ವಿವಿಧ ಸರಕುಗಳ ಮೇಲಿನ (ಸುಂಕದ ಅಧ್ಯಾಯ 49) ತೆರಿಗೆ ಶೇ.12 ರಿಂದ 18ಕ್ಕೆ ಹೆಚ್ಚಿಸಲಾಗಿದೆ

* ವೈಯಕ್ತಿಕ ಬಳಕೆಗಾಗಿ ಔಷಧಿಗಳ ಆಮದು ಮೇಲೆ IGST, ಅವುಗಳೆಂದರೆ: ಬೆನ್ನುಮೂಳೆಯ ಸ್ನಾಯು ಕ್ಷೀಣತೆಗಾಗಿ ಜೋಲ್ಜೆನ್ಸ್ಮಾ, ಡುಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿಗಾಗಿ ವಿಲ್ಟೆಪ್ಸೊ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಔಷಧೀಯ ಇಲಾಖೆಯಿಂದ ಶಿಫಾರಸು ಮಾಡಲಾದ ಸ್ನಾಯು ಕ್ಷೀಣತೆಯ ಚಿಕಿತ್ಸೆಯಲ್ಲಿ ಬಳಸುವ ಇತರ ಔಷಧಗಳು ಮೇಲಿನ ತೆರಿಗೆ ಶೇ.12ರಿಂದ ಶೂನ್ಯಕ್ಕೆ ಕಡಿತಗೊಳಿಸಲಾಗಿದೆ.

* ಇಂಡೋ-ಬಾಂಗ್ಲಾದೇಶದಲ್ಲಿ ಸರಬರಾಜು ಮಾಡಿದ ಸರಕುಗಳ ಮೇಲೆ ಐಜಿಎಸ್ಟಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ

* ಫಿಶ್ ಆಯಿಲ್ ಹೊರತುಪಡಿಸಿ ಮೀನಿನ ಊಟದ ಉತ್ಪಾದನೆಯ ಸಮಯದಲ್ಲಿ ಅನಪೇಕ್ಷಿತ ತ್ಯಾಜ್ಯ ಉತ್ಪತ್ತಿ ಮೇಲೆ ಯಾವುದೇ ರೀತಿ ತೆರಿಗೆ ವಿಧಿಸಲಾಗುವುದಿಲ್ಲ

English summary
Union Finance Minister Nirmala Sitharaman said that the GST Council has turned down the proposal to bring petrol and diesel under the ambit of the uniform indirect tax regime. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X