ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

44,000 ಗಡಿ ಮುಟ್ಟಿದ ಸೆನ್ಸೆಕ್ಸ್: 2021ಕ್ಕೆ 50,000, 2024ಕ್ಕೆ 1,00,000 ಪಾಯಿಂಟ್ಸ್‌?

|
Google Oneindia Kannada News

ಭಾರತೀಯ ಷೇರುಪೇಟೆಯು ದೀಪಾವಳಿ ಹಬ್ಬದ ಬಳಿಕವೂ ಪಟಾಕಿ ಹೊಡೆಯುವುದನ್ನು ಮುಂದುವರಿಸಿದೆ. ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 44,000 ಗಡಿ ತಲುಪಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ದಾಖಲೆಯ ಮಟ್ಟದತ್ತ ಗುರಿನೆಟ್ಟು ಸಾಗುತ್ತಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ ದಿನದ ವಹಿವಾಟು ಅಂತ್ಯಕ್ಕೆ ಶೇ. 0.72 ಅಥವಾ 314 ಪಾಯಿಂಟ್ಸ್ ಏರಿಕೆ ದಾಖಲಿಸಿ 43,952.71ಕ್ಕೆ ತಲುಪಿದೆ. ಇನ್ನೂ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ ಶೇ. 0.73ರಷ್ಟು ಅಥವಾ 93.90 ಪಾಯಿಂಟ್ಸ್‌ ಏರಿಕೆಗೊಂಡು 12,874.20 ಸೂಚ್ಯಂಕಗಳನ್ನು ತಲುಪಿದೆ.

ತೈಲ ಮಾರುಕಟ್ಟೆಯಲ್ಲಿ ಕುಸಿತ, ಅಂಬಾನಿಗೆ 5 ಬಿಲಿಯನ್ ಡಾಲರ್ ನಷ್ಟತೈಲ ಮಾರುಕಟ್ಟೆಯಲ್ಲಿ ಕುಸಿತ, ಅಂಬಾನಿಗೆ 5 ಬಿಲಿಯನ್ ಡಾಲರ್ ನಷ್ಟ

ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಹಿಂದಿನ ದಾಖಲೆಯ ಗರಿಷ್ಠ ಮಟ್ಟವನ್ನು ಪುನಃ ಪಡೆದುಕೊಳ್ಳಲು 43,000 ಕಡೆಗೆ ತಳ್ಳಿತು ಮತ್ತು ನಂತರ ನವೆಂಬರ್ 17 ರಂದು ಆರಂಭಿಕ ವಹಿವಾಟಿನಲ್ಲಿ 44,000 ಅನ್ನು ಮುಟ್ಟಿತು. ಮಾರ್ಚ್‌ನಲ್ಲಿ 3 ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿದ್ದ ಭಾರತೀಯ ಮಾರುಕಟ್ಟೆ ಸ್ಥಿರ ಏರಿಕೆ ಕಂಡಿದೆ.

2021ರ ಆರಂಭದಲ್ಲಿ 50,000 ದಾಟಬಹುದು

2021ರ ಆರಂಭದಲ್ಲಿ 50,000 ದಾಟಬಹುದು

ಬಿಎಸ್‌ಇ-ಪಟ್ಟಿಮಾಡಿದ ಕಂಪನಿಗಳ ಸರಾಸರಿ ಮಾರುಕಟ್ಟೆ-ಬಂಡವಾಳೀಕರಣದ ದೃಷ್ಟಿಯಿಂದ ಹೂಡಿಕೆದಾರರ ಸಂಪತ್ತು ಏಪ್ರಿಲ್‌ನಿಂದ ಸುಮಾರು 40 ಲಕ್ಷ ಕೋಟಿ ರೂ. ಏರಿಕೆ ಕಂಡಿದೆ. ಸತತ ವೇಗದಲ್ಲಿ ಸಾಗುತ್ತಿರುವ ಮಾರುಕಟ್ಟೆಯು ಶೀಘ್ರದಲ್ಲೇ 2021 ರಲ್ಲಿ ಸೆನ್ಸೆಕ್ಸ್ ಅನ್ನು 50,000 ಕಡೆಗೆ ತೆಗೆದುಕೊಂಡು ಹೋಗಬಹುದು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

2024 ರ ವೇಳೆಗೆ 1,00,000 ತಲುಪಿದ್ರೂ ಆಶ್ಚರ್ಯವಿಲ್ಲ!

2024 ರ ವೇಳೆಗೆ 1,00,000 ತಲುಪಿದ್ರೂ ಆಶ್ಚರ್ಯವಿಲ್ಲ!

ಇನ್ನು ಭಾರತೀಯ ಮಾರುಕಟ್ಟೆ ಇದೇ ರೀತಿಯಲ್ಲಿ ವೇಗದಲ್ಲಿ ಮುಂದುವರಿದರೆ 2024 ರ ವೇಳೆಗೆ 100,000 ರಷ್ಟಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

''2020ಕ್ಕೂ ಮೊದಲು ಸೆನ್ಸೆಕ್ಸ್ 45,000 ಮತ್ತು 2021ರಲ್ಲಿ 50,000 ವೇಗವನ್ನು ಮುಂದುವರಿಸಲು ಸಾಧ್ಯ ಎಂದು ಭಾವಿಸಿದ್ದೇವೆ. ಕಳೆದ 10 ವಹಿವಾಟುಗಳಲ್ಲಿ ಸೆನ್ಸೆಕ್ಸ್ ಶೇ. 7.57ರಷ್ಟು ಸಂಯುಕ್ತ ಲಾಭವನ್ನು ನೀಡಿದೆ ಮತ್ತು ಡಾಲರ್ ಪರಿಭಾಷೆಯಲ್ಲಿ ಅಲ್ಪ ಪ್ರಮಾಣದ ಶೇ. 2.09ರಷ್ಟು ಆಗಿದೆ'' ಎಂದು ಎಲಿಕ್ಸಿರ್ ಇಕ್ವಿಟೀಸ್ ಪ್ರೈ.ಲಿ.ನ ನಿರ್ದೇಶಕ ದೀಪನ್ ಮೆಹ್ತಾ ಮನಿಕಂಟ್ರೋಲ್‌ಗೆ ತಿಳಿಸಿದ್ದಾರೆ.

ಷೇರುಪೇಟೆಯಲ್ಲಿ ರಕ್ತಪಾತ: 3.3 ಲಕ್ಷ ಕೋಟಿ ನಷ್ಟಕ್ಕೆ 5 ಕಾರಣಷೇರುಪೇಟೆಯಲ್ಲಿ ರಕ್ತಪಾತ: 3.3 ಲಕ್ಷ ಕೋಟಿ ನಷ್ಟಕ್ಕೆ 5 ಕಾರಣ

ಮುಂದಿನ 2-3 ವರ್ಷದಲ್ಲಿ ಅಸಾಧಾರಣ ಆದಾಯ ನಿರೀಕ್ಷಿಸಬಹುದು

ಮುಂದಿನ 2-3 ವರ್ಷದಲ್ಲಿ ಅಸಾಧಾರಣ ಆದಾಯ ನಿರೀಕ್ಷಿಸಬಹುದು

"ಸರಾಸರಿ ಆದಾಯವು ಶೇ. 12-14ರಷ್ಟಿದೆ. ಮುಂದಿನ 2-3 ವರ್ಷಗಳಲ್ಲಿ ಅಸಾಧಾರಣ ಆದಾಯವನ್ನು ನಿರೀಕ್ಷಿಸಬಹುದು "ಎಂದು ದೀಪನ್ ಮೆಹ್ತಾ ಹೇಳಿದರು.

ಜಾಗತಿಕ ದಲ್ಲಾಳಿ ಸಂಸ್ಥೆಯಾದ ಮೋರ್ಗನ್ ಸ್ಟಾನ್ಲಿ 2021 ರ ಡಿಸೆಂಬರ್ ವೇಳೆಗೆ ಸೆನ್ಸೆಕ್ಸ್‌ನ ಗುರಿಯನ್ನು 50,000 ಕ್ಕೆ ಏರಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಈ ಮೊದಲು ಜೂನ್ 2021 ಕ್ಕೆ 37,300 ರಷ್ಟಿತ್ತು. ಆದರೆ ಮಾರುಕಟ್ಟೆಯಲ್ಲಿ ಶೀಘ್ರ ಚೇತರಿಕೆಯು ಅಂದಾಜಿನ ಪ್ರಮಾಣವನ್ನು ಹಿಗ್ಗಿಸಿದೆ.

ನವೆಂಬರ್ ಆರಂಭದಲ್ಲಿ 29,436 ಕೋಟಿ ರೂಪಾಯಿ FPI ಹೂಡಿಕೆ

ನವೆಂಬರ್ ಆರಂಭದಲ್ಲಿ 29,436 ಕೋಟಿ ರೂಪಾಯಿ FPI ಹೂಡಿಕೆ

ಸಂಭಾವಿತ ಕೋವಿಡ್ ಲಸಿಕೆ ಸಿಗುವ ಸಾಧ್ಯತೆ ಸಾಕಷ್ಟು ಹತ್ತಿರವಾಗುತ್ತಿರುವುದರಿಂದ ವಿದೇಶಿ ಬಂಡವಾಳ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯತ್ತ ಸಾಕಷ್ಟು ಆಕರ್ಷಿತರಾಗಿದ್ದಾರೆ. ಎಫ್‌ಪಿಐಗಳು ನವೆಂಬರ್ 2-13ರ ನಡುವೆ 29,436 ಕೋಟಿ ರೂ. ಇಕ್ವಿಟಿಗಳ ಮೇಲೆ ಮತ್ತು 5,673 ಕೋಟಿ ರೂ. ಬಾಂಡ್‌ಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಹಿಂದಿನ ತಿಂಗಳಲ್ಲಿ 22,033 ಕೋಟಿ ರೂ. ವಿದೇಶಿ ಬಂಡವಾಳ ಹರಿದುಬಂದಿದೆ.

English summary
We see Sensex at 45,000 before 2020 and 50,000 in 2021 are possible if this momentum continues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X