ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಗಳಿಗೆ ಇಂದು ರಾತ್ರಿಯೇ 20,000 ಕೋಟಿ GST ಪರಿಹಾರ ಮೊತ್ತ ವರ್ಗಾವಣೆ: ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಅಕ್ಟೋಬರ್ 05: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಪರಿಹಾರದ ಮೊತ್ತವನ್ನು ರಾಜ್ಯಗಳಿಗೆ ಇಂದು (ಸೋಮವಾರ) ರಾತ್ರಿಯೇ ವಿತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇಂದು ನಡೆದ ಜಿಎಸ್‌ಟಿ ಮಂಡಳಿಯ 42ನೇ ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ವರ್ಷದಲ್ಲಿ ಸಂಗ್ರಹಿಸಲಾಗಿರುವ ತೆರಿಗೆ ಪರಿಹಾರ ಮೊತ್ತ 20,000 ಕೋಟಿ ರೂಪಾಯಿಗಳನ್ನು ರಾಜ್ಯಗಳಿಗೆ ವಿತರಿಸಲು ತೀರ್ಮಾನಿಸಲಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 95,480 ಕೋಟಿ GST ಸಂಗ್ರಹ: ಶೇ. 4ರಷ್ಟು ಏರಿಕೆಸೆಪ್ಟೆಂಬರ್ ತಿಂಗಳಿನಲ್ಲಿ 95,480 ಕೋಟಿ GST ಸಂಗ್ರಹ: ಶೇ. 4ರಷ್ಟು ಏರಿಕೆ

ಜನವರಿ 1 ರಿಂದ ಸಣ್ಣ ತೆರಿಗೆದಾರರು ಮಾಸಿಕ ರಿಟರ್ನ್ಸ್ ಸಲ್ಲಿಸುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಘೋಷಿಸಿದ್ದಾರೆ. ಚಲನ್ ಮೂಲಕ ಮಾಸಿಕ ತೆರಿಗೆ ಪಾವತಿಸಬಹುದು ಎಂದು ಅಧಿಕಾರಿ ಹೇಳಿದರು.

42nd GST Meet: Rs 20,000 Crore GST Compensation To Be Disbursed To All States Tonight

ಜನವರಿ ಮೊದಲನೆಯ ದಿನದಿಂದ, ವಾರ್ಷಿಕ ವಹಿವಾಟು 5 ಕೋಟಿ ರೂ.ಗಿಂತ ಕಡಿಮೆ ಇರುವ ತೆರಿಗೆದಾರರು ಮಾಸಿಕ ರಿಟರ್ನ್ಸ್ ಸಲ್ಲಿಸುವ ಅಗತ್ಯವಿಲ್ಲ, ಅಂದರೆ ಜಿಎಸ್‌ಟಿಆರ್ 3 ಬಿ ಮತ್ತು ಜಿಎಸ್‌ಟಿಆರ್ 1. ಅವರು ತ್ರೈಮಾಸಿಕ ರಿಟರ್ನ್ಸ್ ಮಾತ್ರ ಸಲ್ಲಿಸುತ್ತಾರೆ ಎಂದು ಅಧಿಕಾರಿ ಹೇಳಿದರು.

ಇಂದು ಮುಂಚೆಯೇ, ಜಿಎಸ್‌ಟಿ ಫಲಕವು ರಾಜ್ಯಗಳಿಗೆ ಮೊದಲ ಸಾಲ ಪಡೆಯುವ ಮಿತಿಯಲ್ಲಿ 97,000 ಕೋಟಿ ರೂ.ಗಳ ಬದಲು 1.1 ಲಕ್ಷ ಕೋಟಿ ರೂ.ಗಳ ಸಾಲ ಮಿತಿಯನ್ನು ಹೆಚ್ಚಿಸಿತ್ತು. ಜಿಎಸ್‌ಟಿ ಪರಿಹಾರ ಸೆಸ್ ತೆರಿಗೆಯನ್ನು 2022 ವರ್ಷ ಮೀರಿ ವಿಸ್ತರಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.

ಕೋವಿಡ್-19 ಕಾರಣದಿಂದ ಆಗಿರುವ ಕೊರತೆಯು 1.38 ಲಕ್ಷ ಕೋಟಿ (ಒಟ್ಟು ಕೊರತೆ 2.35 ಲಕ್ಷ ಕೋಟಿ). ನಷ್ಟದ ಭರ್ತಿಗೆ ರಾಜ್ಯಗಳ ಮುಂದೆ ಎರಡು ಆಯ್ಕೆಗಳನ್ನು ಕೇಂದ್ರ ಇರಿಸಿತ್ತು. ಮೊದಲನೆಯದು ರಾಜ್ಯಗಳು 97 ಸಾವಿರ ಕೋಟಿಯನ್ನು ಆರ್‌ಬಿಐನಿಂದ ಸಾಲವಾಗಿ ಪಡೆಯಬಹುದು. ಈ ಸಾಲವನ್ನು ಮುಂದೆ ಕೇಂದ್ರವೇ ತೀರಿಸಲಿದೆ. ಎರಡನೆಯದು ರಾಜ್ಯಗಳು ಒಟ್ಟು 2.35 ಲಕ್ಷ ಕೋಟಿಯನ್ನು ಮಾರುಕಟ್ಟೆಯಿಂದ ಸಾಲವಾಗಿ ಪಡೆಯಬಹುದು. ಈ ಸಾಲದ ಅಸಲನ್ನು ಕೇಂದ್ರವು ತೀರಿಸುತ್ತದೆ.

English summary
After an inconclusive GST meet, finance minister Nirmala Sitharaman announced that Compensation cess collected this year, amounting to Rs 20,000 crore, will get disbursed to all states tonight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X