ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಗ್ನಿಜೆಂಟ್ ನಿಂದ 400 ಉದ್ಯೋಗಿಗಳಿಗೆ ಹೊಸ ಪ್ಯಾಕೇಜ್ ಘೋಷಣೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 07 : ವಾರ್ಷಿಕವಾಗಿ ಸುಮಾರು 60 ಮಿಲಿಯನ್ ಡಾಲರ್ ಉಳಿತಾಯ ಮಾಡಲು ಐಟಿ ಸಂಸ್ಥೆ ಕಾಗ್ನಿಜೆಂಟ್ ಮುಂದಾಗಿದೆ. ಈ ನಿಟ್ಟಿನಲ್ಲಿ 400 ಕ್ಕೂ ಅಧಿಕ ಹಿರಿಯ ಕಾರ್ಯಕಾರಿ ಸಿಬ್ಬಂದಿಗೆ ಸ್ವಯಂ ಬೇರ್ಪಡುವಿಕೆ ಪ್ಯಾಕೇಜ್ (ವಿಎಸ್ ಪಿ) ಘೋಷಿಸಲಾಗಿದೆ.

ಮೇ ತಿಂಗಳಿನಲ್ಲಿ ವಿಎಸ್ ಪಿ ಯೋಜನೆ ಜಾರಿಗೊಳಿಸಲಾಯಿತು. ಇದರ ಅನ್ವಯ ಯುಎಸ್ ಹಾಗೂ ಭಾರತದ ಟಾಪ್ ಲೆವೆಲ್ ಉದ್ಯೋಗಿಗಳಿಗೆ 9 ತಿಂಗಳ ಸಂಬಳದ ಪ್ಯಾಕೇಜ್ ಒಟ್ಟಿಗೆ ನೀಡುವ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಲಾಯಿತು. ಭಾರತದಲ್ಲಿ ಸುಮಾರು 2.56 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಕಾಗ್ನಿಜೆಂಟ್ ಈಗ 400 ಸಿಬ್ಬಂದಿಗೆ ಈ ಸೌಲಭ್ಯ ಒದಗಿಸುತ್ತಿದೆ.

400 Cognizant executive opt for Voluntary Separation Package

ಕಾಂಗ್ನಿಜೆಂಟ್ ಸಂಸ್ಥೆ 6000 ಮಂದಿ ಭಾರತೀಯ ಉದ್ಯೋಗಿಗಳನ್ನು ಯು ಎಸ್ ಟೀಂನಿಂದ ಹೊರ ತಬ್ಬುವ ಸುದ್ದಿ ಹೊರ ಬರುತ್ತಿದ್ದಂತೆ, ಚೆನ್ನೈನ ಘಟಕದಲ್ಲಿ ಆತಂಕ ಹೆಚ್ಚಾಗಿದೆ. ಎರಡು ಐಟಿ ಉದ್ಯೋಗಿಗಳ ಹಿತರಕ್ಷಣಾ ಸಂಘಟನೆಗಳು ಕಾಂಗ್ನಿಜೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾದ ಸುದ್ದಿ ಓದಿರಬಹುದು. ಇದಾದ ಬಳಿಕ ಈ ವಿಎಸ್ ಪಿ ಯೋಜನೆ ಬಗ್ಗೆ ಸುದ್ದಿ ಬಂದಿದೆ.

ಅಮೆರಿಕದ ಉದ್ಯೋಗ ನೀತಿ, ವೀಸಾ ನೀತಿಯ ಫಲವಾಗಿ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯರನ್ನು ಉದ್ಯೋಗದಿಂದ ಹೊರದಬ್ಬಲು ಮುಂದಾಗಿರುವ ಆತಂಕ ಸುದ್ದಿ ಬಂದಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಎಂಬ ಮಂತ್ರ ಪಠಿಸುತ್ತಿರುವ ಎಂಎನ್ ಸಿ ಕಂಪನಿಗಳ ಸಲಿಗೆ ಭಾರತದ ಇನ್ಫೋಸಿಸ್, ವಿಪ್ರೋ ಹಾಗೂ ಟಿಸಿಎಸ್ ಕೂಡಾ ತಲೆದೂಗಲು ಆರಂಭಿಸಿವೆ.

English summary
In a move that will help save about 60 million dollars annually, around 400 senior executives of Cognizant have accepted the company's voluntary separation package (VSP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X