ವರ್ಷದೊಳಗೆ ಮೊಬೈಲ್ ಬದಲಿಸೋರು ಹೆಚ್ಚು, ಅದಕ್ಕಾಗಿ ಎಷ್ಟು ಖರ್ಚು?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 30 : ಮೊಬೈಲ್ ಫೋನ್ ಗಳೆಂದರೆ ಐಷಾರಾಮಿ ವಸ್ತು ಅನ್ನೋ ಕಾಲ ಮುಗಿದುಹೋಯಿತು ಅನ್ನಿಸುತ್ತಿದೆ. ಏಕೆಂದರೆ ಕ್ವಿಕರ್ ನಿಂದ ಮಾಡಿದ ಸಮೀಕ್ಷೆಯೊಂದರ ಪ್ರಕಾರ ಶೇ 40ರಷ್ಟು ಮೊಬೈಲ್ ಫೋನ್ ಬಳಕೆದಾರರು ಒಂದು ವರ್ಷಕ್ಕಿಂತ ಮುಂಚೆಯೇ ತಮ್ಮ ಫೋನ್ ಅನ್ನು ಬದಲಿಸುತ್ತಾರೆ.

ಇನ್ನು ಶೇ 2ರಷ್ಟು ಮಂದಿ ಮಾತ್ರ ನಾಲ್ಕು ವರ್ಷದ ನಂತರ ಕೂಡ ತಮ್ಮ ಒಂದೇ ಮೊಬೈಲ್ ಫೋನ್ ಬಳಸುತ್ತಾರೆ ಅಂತಿದೆ ಕ್ವಿಕರ್ ಬಜಾರ್ ನ ವರದಿ. ಇನ್ನು ಶೇ 75ರಷ್ಟು ಮಂದಿ ಮೊಬೈಲ್ ಫೋನ್ ಖರೀದಿಗೆ 10 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಬಾಕಿ 25ರಷ್ಟು ಮಂದಿ 5ರಿಂದ 10 ಸಾವಿರ ಮತ್ತು 15 ಸಾವಿರಕ್ಕೂ ಹೆಚ್ಚು ಹಣದಿಂದ ಮೊಬೈಲ್ ಖರೀದಿಸುತ್ತಾರೆ.

40 percent people replace their mobile in less than a year: survey

ಆಪಲ್ ಮತ್ತು ಸ್ಯಾಮ್ಸಂಗ್ ಕಂಪೆನಿಯ ಮೊಬೈಲ್ ಫೋನ್ ಗಳು ಜನರು ಅತಿ ಹೆಚ್ಚು ಇಷ್ಟಪಡುವ ಬ್ರ್ಯಾಂಡ್ ಗಳು. ಕ್ರಮಾವಾಗಿ ಶೇ 28 ಮತ್ತು ಶೇ 24ರಷ್ಟು ಜನ ಈ ಎರಡು ಬ್ರ್ಯಾಂಡ್ ಗಳನ್ನು ಇಷ್ಟಪಡುವವರಿದ್ದಾರೆ. ತಲಾ ಶೇ 10ರಷ್ಟು ಮಂದಿ ಮೊಟೊರೋಲಾ ಹಾಗೂ ಒನ್ ಪ್ಲಸ್ ಇಷ್ಟ ಅಂತ ಹೇಳಿಕೊಂಡಿದ್ದಾರೆ.

ಬಿಸಿ ದೋಸೆಯಂತೆ ಬಿಕರಿಯಾದ ಲಕ್ಷ ರುಪಾಯಿಯ ಐಫೋನ್ x

ಮೊಬೈಲ್ ಫೋನ್ ಖರೀದಿಸುವಾಗ ಯಾವ ಬ್ರ್ಯಾಂಡ್ ಹಾಗೂ ಎಷ್ಟು ಅದರ ಬೆಲೆ ಎಂಬುದು ಬಹಳ ಮುಖ್ಯ ಎಂಬುದು ತಿಳಿದುಬಂದಿದೆ. ಆ ನಂತರ ಗುಣಮಟ್ಟ, ಸ್ಪೆಸಿಫಿಕೇಷನ್ ಇತ್ಯಾದಿ ನೋಡುವುದಾಗಿ ಹೇಳಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 40ಕ್ಕೂ ಹೆಚ್ಚು ಮಂದಿ ಸೆಕೆಂಡ್ ಹ್ಯಾಂಡ್- ಹೈಯರ್ ಎಂಡ್ ಫೋನ್ ಖರೀದಿಗೆ ಆದ್ಯತೆ ಎಂದು ಹೇಳಿದ್ದಾರೆ.

ಮೊಬೈಲ್ ಫೋನ್ ನ ಪ್ರಾಥಮಿಕ ಅಗತ್ಯ ಏನು ಎಂಬ ಪ್ರಶ್ನೆಗೆ ಶೇ 57ರಷ್ಟು ಮಂದಿ ಇಂಟರ್ ನೆಟ್ ಬ್ರೌಸಿಂಗ್ ಅಂತಲೇ ಉತ್ತರಿಸಿದ್ದಾರೆ. ಆ ನಂತರದ ಕಾರಣಗಳು ಕ್ಯಾಮೆರಾ, ಗೇಮಿಂಗ್ ಅಂದಿದ್ದರೆ, ಶೇಕಡಾ ಹತ್ತರಷ್ಟು ಜನ ಸಂಗೀತ ಹಾಗೂ ವಿಡಿಯೋ ಸಲುವಾಗಿ ಫೋನ್ ಬಳಸುವುದಾಗಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Around 40% mobile users replace their mobile phones in less than a year and only 2% people want to keep using their phones after a period of 4 year, according to a report by Quikr Bazaar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ