ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ದಿನದಲ್ಲೇ ಮುಕೇಶ್ ಅಂಬಾನಿ ಆಸ್ತಿ 29,000 ಕೋಟಿ ಏರಿಕೆ

By ಅನಿಲ್ ಆಚಾರ್
|
Google Oneindia Kannada News

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಆಸ್ತಿಗೆ ಎರಡೇ ದಿನದಲ್ಲಿ ಎಷ್ಟು ಆಸ್ತಿ ಸೇರ್ಪಡೆ ಆಗಿದೆ ಗೊತ್ತಾ? ರಿಲಯನ್ಸ್ ಇಂಡಸ್ಟ್ರೀಸ್ ನ ಪ್ರವರ್ತಕರು ಹಾಗೂ ಕಂಪೆನಿಯ ಅತಿ ದೊಡ್ಡ ಷೇರುದಾರರು ಆಗಿರುವ ಮುಕೇಶ್ ಅಂಬಾನಿ ಆಸ್ತಿ ಸೋಮವಾರದಿಂದ ಈಚೆಗೆ 29,000 ಕೋಟಿ ತನಕ ಹೆಚ್ಚಳವಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ನ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಮುಖ ಘೋಷಣೆ ಮಾಡಲಾಗಿದೆ. ಅದರಲ್ಲಿ ರಿಲಯನ್ಸ್ ನ ತೈಲದಿಂದ ಕೆಮಿಕಲ್ಸ್ ತನಕ ಎಲ್ಲದರಲ್ಲೂ ಶೇಕಡಾ 20ರಷ್ಟು ಷೇರನ್ನು ಅರ್ಮಾಕೋಗೆ ಮಾರಾಟ ಮಾಡುವ ಬಗ್ಗೆ ಆಗಿರುವ ಒಪ್ಪಂದವನ್ನು ಘೋಷಿಸಲಾಯಿತು.

ವಿಶ್ವದ 25 ಕುಟುಂಬದ ಬಳಿ ಬರೋಬ್ಬರಿ 100 ಲಕ್ಷ ಕೋಟಿ ರೂ ಆಸ್ತಿವಿಶ್ವದ 25 ಕುಟುಂಬದ ಬಳಿ ಬರೋಬ್ಬರಿ 100 ಲಕ್ಷ ಕೋಟಿ ರೂ ಆಸ್ತಿ

ಇನ್ನು ಹದಿನೆಂಟು ತಿಂಗಳಲ್ಲಿ ಯಾವುದೇ ನಿವ್ವಳ ಸಾಲ ಇಲ್ಲದಂಥ ಕಂಪೆನಿ ಆಗುತ್ತದೆ ಹಾಗೂ ಮುಂದಿನ ಜಿಯೋ ಫೈಬರ್ ಆರಂಭಿಸುವ ಘೋಷಣೆ ಮಾಡಲಾಯಿತು. ಷೇರು ಪೇಟೆಯು ಈ ಎರಡು ಘೋಷಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದು, ಎರಡು ದಿನದಲ್ಲಿ ಷೇರು ಬೆಲೆಯಲ್ಲಿ ಹನ್ನೊಂದು ಪರ್ಸೆಂಟ್ ಏರಿಕೆ ಆಗಿದೆ.

28,684 ಕೋಟಿ ರುಪಾಯಿ ಏರಿಕೆ

28,684 ಕೋಟಿ ರುಪಾಯಿ ಏರಿಕೆ

ಇದೇ ವೇಳೆ ಕಂಪೆನಿಯ ಷೇರುಗಳು ಬುಧವಾರದ ವಹಿವಾಟಿನ ಕೊನೆಗೆ ರು.1,288.30 ತಲುಪಿತ್ತು. ಅದು ವಹಿವಾಟು ಆರಂಭಿಸಿದ್ದು ರು. 1,162ರಲ್ಲಿ. ಆಗಸ್ಟ್ 12ರ ವಾರ್ಷಿಕ ಸಾಮಾನ್ಯ ಸಭೆಯ ನಂತರ ಮುಕೇಶ್ ಅಂಬಾನಿಯ ಆಸ್ತಿ ಮೌಲ್ಯ $ 4 ಬಿಲಿಯನ್
(ಭಾರತದ ರುಪಾಯಿ ಮೌಲ್ಯ 28,684 ಕೋಟಿ) ಏರಿಕೆಯಾಗಿದೆ.

ಮುಕೇಶ್ ಅಂಬಾನಿ ಒಟ್ಟು ಆಸ್ತಿ $ 49.9 ಬಿಲಿಯನ್

ಮುಕೇಶ್ ಅಂಬಾನಿ ಒಟ್ಟು ಆಸ್ತಿ $ 49.9 ಬಿಲಿಯನ್

ಬ್ಲೂಮ್ ಬರ್ಗ್ ನ ಶತಕೋಟ್ಯಧಿಪತಿ ಸೂಚ್ಯಂಕದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 13ನೇ ಸ್ಥಾನದಲ್ಲಿದ್ದು, ಒಟ್ಟಾರೆ ಆಸ್ತಿ ಪ್ರಮಾಣ $ 49.9 ಬಿಲಿಯನ್ ಎನ್ನಲಾಗಿದೆ. ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಈ ವರ್ಷದಲ್ಲಿ $ 5.57 ಬಿಲಿಯನ್ ಸಂಪಾದಿಸಿದ್ದಾರೆ. ರಿಲಯನ್ಸ್ ಷೇರು 15 ಪರ್ಸೆಂಟ್ ಏರಿಕೆ ಆಧಾರದಲ್ಲಿ ಈ ಮೊತ್ತವನ್ನು ಗಳಿಸಿದ್ದಾರೆ.

ಸೆ.5; ಮುಖೇಶ್ ಅಂಬಾನಿ 'ಗಿಗಾ ಸುನಾಮಿ'ಗೆ ಮುಹೂರ್ತ ಫಿಕ್ಸ್! ಸೆ.5; ಮುಖೇಶ್ ಅಂಬಾನಿ 'ಗಿಗಾ ಸುನಾಮಿ'ಗೆ ಮುಹೂರ್ತ ಫಿಕ್ಸ್!

ಸೌದಿ ಅರ್ಮಾಕೋ ಜತೆಗೆ ಒಪ್ಪಂದ

ಸೌದಿ ಅರ್ಮಾಕೋ ಜತೆಗೆ ಒಪ್ಪಂದ

ರಿಲಯನ್ಸ್ ಇಂಡಸ್ಟ್ರೀಸ್ ನ ಅತಿ ದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆ ಒಪ್ಪಂದ ಸೌದಿ ಅರ್ಮಾಕೋ ಜತೆಗೆ ಆಗಿದ್ದು, 2021ರ ಮಾರ್ಚ್ ಹೊತ್ತಿಗೆ ಕಂಪೆನಿ ಶೂನ್ಯ ನಿವ್ವಳ ಸಾಲ ಕಂಪೆನಿ ಆಗಲಿದೆ. ಕಂಪೆನಿಯ ರೀಟೇಲ್ ಹಾಗೂ ಟೆಲಿಕಾಂ ವ್ಯವಹಾರ ಕೂಡ ಉನ್ನತಿಗೆ ಏರಬಹುದು ಎಂಬ ಲೆಕ್ಕಾಚಾರ ಕೇಳಿಬರುತ್ತಿದೆ.

ಷೇರಿನ ಬೆಲೆ ರು. 1,349ರ ಗುರಿ

ಷೇರಿನ ಬೆಲೆ ರು. 1,349ರ ಗುರಿ

ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಪ್ರಕಾರ, ತೈಲದಿಂದ ಕೆಮಿಕಲ್ಸ್ ವ್ಯವಹಾರದ ತನಕ ಷೇರುಗಳನ್ನು ಅರ್ಮಾಕೋಗೆ ಮಾರಲು ತೀರ್ಮಾನಿಸಿರುವುದು ಸಕಾರಾತ್ಮಕ ಬೆಳವಣಿಗೆ. ಈ ಹಿಂದೆ ರಿಲಯನ್ಸ್ ಷೇರುಗಳನ್ನು 'ಓವರ್ ವೇಯ್ಟ್' ಎಂದು ಕರೆದಿದ್ದ ಮೋರ್ಗನ್ ಸ್ಟ್ಯಾನ್ಲಿ ಈಗ ಷೇರಿನ ಬೆಲೆ ರು. 1,349ರ ಗುರಿಯೊಂದಿಗೆ 'ಈಕ್ವಲ್ ವೇಯ್ಟ್' ಎಂದಿದೆ.

ಕಾಶ್ಮೀರಕ್ಕಾಗಿ ಅಂಬಾನಿಯಿಂದ ಸ್ಪೆಷಲ್ ಟಾಸ್ಕ್ ಫೋರ್ಸ್ ಕಾಶ್ಮೀರಕ್ಕಾಗಿ ಅಂಬಾನಿಯಿಂದ ಸ್ಪೆಷಲ್ ಟಾಸ್ಕ್ ಫೋರ್ಸ್

English summary
This is how 29,000 crore added to Reliance Industries Mukesh Ambani's net worth within 2 days. Here is the complete story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X