ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019-20ರಲ್ಲಿ 2 ಸಾವಿರ ರೂಪಾಯಿ ನೋಟು ಪ್ರಿಂಟ್ ಮಾಡಿಲ್ಲ: RBI

|
Google Oneindia Kannada News

ನವದೆಹಲಿ, ಆಗಸ್ಟ್‌ 25: 2019-20ರ ಹಣಕಾಸು ವರ್ಷದಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿಲ್ಲ ಹಾಗೂ ಈ ವರ್ಷದಲ್ಲಿ 2000 ನೋಟುಗಳ ಚಲಾವಣೆ ಕಡಿಮೆಯಾಗಿದೆ ಎಂದು ಆರ್‌ಬಿಐನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

Recommended Video

KL Rahulಗೆ ಯಾವ ಕ್ರಮಾಂಕದಲ್ಲಿ ಹಾಗು ಯಾವ ತಂಡಕ್ಕೆ ಆಡೋದು ಇಷ್ಟ | Oneindia Kannada

ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ಕರೆನ್ಸಿ ನೋಟುಗಳ ಸಂಖ್ಯೆ 2018 ರ ಮಾರ್ಚ್ ಅಂತ್ಯದ ವೇಳೆಗೆ 33,632 ಲಕ್ಷಗಳಷ್ಟಿದ್ದು, ಅದು 2019 ರ ಮಾರ್ಚ್ ಅಂತ್ಯದ ವೇಳೆಗೆ 32,910 ಲಕ್ಷ ನೋಟುಗಳಿಗೆ ಇಳಿಕೆಯಾಗಿದೆ ಮತ್ತು 2020ರ ಮಾರ್ಚ್ ಅಂತ್ಯದ ವೇಳೆಗೆ 27,398 ಲಕ್ಷ ನೋಟ್ ಗಳಿಗೆ ತಗ್ಗಿದೆ ಎಂದು ಆರ್‌ಬಿಐ ವಾರ್ಷಿಕ ವರದಿ ವಿವರಿಸಿದೆ.

 8.4 ಲಕ್ಷ ಕೋಟಿ ರೂಪಾಯಿ ಸಾಲ ಪುನಾರಚನೆಗೆ ಬ್ಯಾಂಕುಗಳು ರೆಡಿ 8.4 ಲಕ್ಷ ಕೋಟಿ ರೂಪಾಯಿ ಸಾಲ ಪುನಾರಚನೆಗೆ ಬ್ಯಾಂಕುಗಳು ರೆಡಿ

2020ರ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ನೋಟುಗಳ ಪ್ರಮಾಣ ಶೇಕಡಾ 2.4 ರಷ್ಟಿದ್ದು, 2019 ರ ಮಾರ್ಚ್ ಅಂತ್ಯದ ವೇಳೆಗೆ ಇದು ಶೇ. 3 ಮತ್ತು 2018 ರ ಮಾರ್ಚ್ ಅಂತ್ಯದ ವೇಳೆಗೆ ಶೇ. 3.3 ರಿಂದ ಇಳಿಕೆಯಾಗಿದೆ ಎಂದು ಆರ್‌ಬಿ ಹೇಳಿದೆ.

2000 Rupees Notes Were Not Printed In 2019-20: RBI Annual Report

ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯ ಪ್ರಮಾಣದಲ್ಲೂ ಕೂಡ ಇಳಿಕೆ ಕಂಡಿದ್ದು, ಮಾರ್ಚ್ 2020ರಲ್ಲಿ 22.6ರಷ್ಟಿದ್ದು, ಮಾರ್ಚ್‌ 2019ರಲ್ಲಿ ಶೇ. 31.2 ಮತ್ತು 2018 ಮಾರ್ಚ್‌ನಲ್ಲಿ ಶೇ. 37.3ರಷ್ಟಿತ್ತು.

ಮತ್ತೊಂದೆಡೆ 2018 ರಿಂದ ಚಲಾವಣೆಗೆ ಬಂದ 500 ಹಾಗೂ 200 ರೂಪಾಯಿ ನೋಟ್ ಗಳ ಪ್ರಮಾಣ ಮತ್ತು ಚಲಾವಣೆ ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಏರಿದೆ ಎಂದು ವರದಿ ತಿಳಿಸಿದೆ.

English summary
The Reserve Bank of India’s (RBI) currency note presses did not print even one Rs 2,000 note in 2019-20. This happened because they did not receive any order to do so.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X