ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?

By Mahesh
|
Google Oneindia Kannada News

ಬೆಂಗಳೂರು, ಜೂನ್ 28: ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ತನಿಖಾ ದಳವು ಕಳೆದ ಎರಡು ತಿಂಗಳಲ್ಲಿ ಜಿಎಸ್ಟಿ ವಂಚನೆ ಪತ್ತೆ ಹಚ್ಚಿರುವ ಪ್ರಮಾಣ 2,000 ಕೋಟಿ ರೂ. ದಾಟುತ್ತದೆ ಎಂದು ಸಿಬಿಐಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಣ್ಣ ವ್ಯಾಪಾರಿಗಳಷ್ಟೇ ಅಲ್ಲದೇ ದೊಡ್ಡ ಕಂಪನಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳೂ ಸಹ ಜಿಎಸ್ಟಿ ರಿಟರ್ನ್ ಸಲ್ಲಿಸುವಾಗ ತಪ್ಪುಗಳನ್ನು ಮಾಡುತ್ತಿವೆ ಎಂದು ಕೇಂದ್ರ ಪರೋಕ್ಷ ತೆರಿಗೆ ಹಾಗೂ ಸುಂಕ ಬೋರ್ಡ್ (ಸಿಬಿಐಸಿ) ಸದಸ್ಯ ಜಾನ್ ಜೋಸೆಫ್ ಹೇಳಿದ್ದಾರೆ.

₹2,000 crore GST evasion unearthed in two months

ತೆರಿಗೆ ಪಾವತಿಸುವ ರೀತಿಯನ್ನು ನೋಡಿದಾಗ ಆತಂಕಕಾರಿ ಚಿತ್ರಣ ದೊರೆಯುತ್ತಿದೆ. 1.1 ಕೋಟಿಗೂ ಹೆಚ್ಚು ಉದ್ಯಮಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಜಿಎಸ್ ಟಿಗೆ ಒಂದು ವರ್ಷ; ಹರ್ಷವೋ ದುಃಖವೋ ಯಾರ ಅನುಭವ ಏನು?ಜಿಎಸ್ ಟಿಗೆ ಒಂದು ವರ್ಷ; ಹರ್ಷವೋ ದುಃಖವೋ ಯಾರ ಅನುಭವ ಏನು?

ಆದರೆ, ಒಂದು ಲಕ್ಷದಷ್ಟು ಜನರೇ ಶೇ.80ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. ವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಇದು ಅಧ್ಯಯನ ಮಾಡಬೇಕಾದ ಪ್ರಮುಖ ವಿಷಯವಾಗಿದೆ ಎಂದರು.

ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?

ಬಹುತೇಕ ಉದ್ಯಮಿಗಳು ವಾರ್ಷಿಕ ವಹಿವಾಟು 5 ಲಕ್ಷ ರೂ.ಗಳೆಂದು ತೋರಿಸಲಾಗಿದೆ. ಈ ಬಗ್ಗೆ ಸಾಕಷ್ಟು ಪರಿಶೀಲನೆಯ ಅಗತ್ಯವಿದೆ ಎಂದು ಸರಕು ಮತ್ತು ಸೇವೆಗಳ ತೆರಿಗೆ ಗುಪ್ತಚರದ ಪ್ರಧಾನ ನಿರ್ದೇಶಕರೂ ಆಗಿರುವ ಜೋಸೆಫ್ ಹೇಳಿದ್ದಾರೆ.

English summary
The Goods and Services Tax (GST) investigation wing has detected tax evasion of over ₹2,000 crore in two months, and data analysis reveals that only 1% of over 1.11 crore registered businesses pay 80% of the taxes, a senior official said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X