ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2000 ರುಪಾಯಿ ನೋಟುಗಳ ಚಲಾವಣೆ ಪ್ರಮಾಣದಲ್ಲಿ ಇಳಿಕೆ

By ಅನಿಲ್ ಆಚಾರ್
|
Google Oneindia Kannada News

2000 ರುಪಾಯಿ ನೋಟುಗಳ ಮೇಲೆ ಜನರ ಅವಲಂಬನೆ ಕಡಿಮೆ ಮಾಡುವ ಪ್ರಯತ್ನಗಳು ಆಗುತ್ತಿರುವಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗುರುವಾರದಂದು ಬಿಡುಗಡೆ ಆದ FY19ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವರದಿ ನಮ್ಮೆದುರು ಇದೆ. 2016ರ ನವೆಂಬರ್ ನಲ್ಲಿ 2000 ರುಪಾಯಿ ನೋಟು ಬಿಡುಗಡೆ ಆದ ಮೇಲೆ ಅದರ ಚಲಾವಣೆಯ ಪ್ರಮಾಣ ಹಾಗೂ ಮೌಲ್ಯ ಎರಡೂ FY19ರಲ್ಲಿ ಕಡಿಮೆ ಆಗಿದೆ.

FY18ರಲ್ಲಿ 6,72,600 ಕೋಟಿ ಇದ್ದ ಮೌಲ್ಯವು FY19ರಲ್ಲಿ 6,58,200 ಕೋಟಿಗೆ ಕುಸಿದಿದೆ. ಅರ್ಥಾತ್, ಅತಿ ಹೆಚ್ಚು ಮೌಲ್ಯದ ನೋಟು 14,400 ಕೋಟಿ ಮೌಲ್ಯದಷ್ಟು ಚಲಾವಣೆಯಿಂದ ಕಳೆದ ವರ್ಷ ಹಿಂದಕ್ಕೆ ಹೋಗಿದೆ. ಆದರೆ ಇದೇನು ನಕಲಿ ನೋಟುಗಳೇ ಅಥವಾ ಬೇರೆ ಕಾರಣಗಳು ಇವೆಯೇ ಗೊತ್ತಿಲ್ಲ.

ಯಶಸ್ವಿ ಉದ್ಯಮಿ ಆರ್ಥಿಕ ತಜ್ಞ ಆಗಲಾರ: ಉದಾಹರಣೆಗೆ ಇನ್ಫಿ ನಾರಾಯಣ ಮೂರ್ತಿಯಶಸ್ವಿ ಉದ್ಯಮಿ ಆರ್ಥಿಕ ತಜ್ಞ ಆಗಲಾರ: ಉದಾಹರಣೆಗೆ ಇನ್ಫಿ ನಾರಾಯಣ ಮೂರ್ತಿ

ಅದೇ ರೀತಿ 2000 ರುಪಾಯಿ ನೋಟುಗಳು FY18ರಲ್ಲಿ 3,363 ಮಿಲಿಯನ್ ಸಂಖ್ಯೆಯಲ್ಲಿದ್ದವು. ಅದೇ FY19ರಲ್ಲಿ 3,291 ಮಿಲಿಯನ್ ಗೆ ಇಳಿಯುವ ಮೂಲಕ 2 ಪರ್ಸೆಂಟ್ ಕುಸಿತ ಕಂಡಿದೆ. ಇದಕ್ಕೆ ವಿರುದ್ಧವಾಗಿ 500 ರುಪಾಯಿ ನೋಟುಗಳನ್ನು FY18ಕ್ಕೆ ಹೋಲಿಸಿದರೆ FY19ರಲ್ಲಿ 39 ಪರ್ಸೆಂಟ್ ಏರಿಕೆ ಆಗಿದೆ. ಒಟ್ಟಾರೆ ಚಲಾವಣೆಯಲ್ಲಿ ಇರುವ ನೋಟುಗಳ ಮಿಶ್ರಣದ ಲೆಕ್ಕಾಚಾರದಲ್ಲಿ ಐನೂರು ರುಪಾಯಿ ನೋಟುಗಳು ಶೇ 43ರಿಂದ ಶೇ 51ಕ್ಕೆ ಏರಿಕೆ ಆಗಿದೆ.

2 Thousand Rupees Currency Circulation Reduced

2000 ರುಪಾಯಿ ನೋಟುಗಳು ಒಟ್ಟಾರೆಯಾಗಿ 50% ನಷ್ಟು ಇದ್ದವು FY17ರಲ್ಲಿ. ಆ ನಂತರ ಆ ಪ್ರಮಾಣ FY18ರಲ್ಲಿ 37 ಪರ್ಸೆಂಟ್ ಗೆ ಕುಸಿದರೆ, FY19ರಲ್ಲಿ 31 ಪರ್ಸೆಂಟ್ ಗೆ ಇಳಿಯಿತು. ಇದರರ್ಥ ಏನೆಂದರೆ ಒಟ್ಟಾರೆ ಚಲಾವಣೆಯಲ್ಲಿ ಇರುವ ನೋಟುಗಳ ಲೆಕ್ಕಾಚಾರ ಪ್ರಮಾಣ ನೋಡಿದರೂ ಎರಡು ಸಾವಿರ ರುಪಾಯಿ ನೋಟುಗಳನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗುತ್ತಿದೆ.

ಎರಡು ಸಾವಿರ ರುಪಾಯಿ ನೋಟುಗಳನ್ನು ಸಂಗ್ರಹ ಮಾಡುವುದು ಸಲೀಸು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಲಾಗುತ್ತಿದೆ ಎಂಬ ಮಾತಿದೆ. ಆ ಕಾರಣಕ್ಕೆ ನೂರು ಮತ್ತು ಇನ್ನೂರು ರುಪಾಯಿ ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚು ಮಾಡುತ್ತಿದೆ.

English summary
RBI FY19 report revealed that, 2 thousand rupees circulation reduced in the country. Here is the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X