ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದರಿನಲ್ಲಿ ಸಿಲುಕಿಕೊಂಡ 2 ಮಿಲಿಯನ್ ಟನ್ ಅಕ್ಕಿ, ಕಾರಣವೇನು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 12: ಕಾಕಿನಾಡ ಮತ್ತು ವಿಶಾಖಪಟ್ಟಣಂನಂತಹ ಪೂರ್ವ ಬಂದರುಗಳಿಂದ ಭಾರತವು ಪ್ರತಿ ತಿಂಗಳು ಸುಮಾರು ಎರಡು ಮಿಲಿಯನ್ ಟನ್‌ಗಳಷ್ಟು ಅಕ್ಕಿಯನ್ನು ಸಾಗಿಸುತ್ತದೆ. ಆದರೆ ಈಗ ಅಕ್ಕಿಯನ್ನು ಸಾಗಿಸದೆ ಹಾಗೆ ನಿಲ್ಲಿಸಲಾಗಿದೆ.

ಭಾರತವು ನುಚ್ಚಕ್ಕಿಯ ರಫ್ತುಗಳನ್ನು ನಿಷೇಧಿಸಿದ್ದು, ವಿವಿಧ ರೀತಿಯ ರಫ್ತಿನ ಮೇಲೆ 20% ಸುಂಕವನ್ನು ಗುರುವಾರ ವಿಧಿಸಿತು. ಹೀಗಾಗಿ ಭಾರತೀಯ ಬಂದರುಗಳಲ್ಲಿ ಅಕ್ಕಿ ಲೋಡ್ ಮಾಡುವುದನ್ನು ನಿಲ್ಲಿಸಲಾಗಿದೆ. ಖರೀದಿದಾರರು ಒಪ್ಪಿದ ಒಪ್ಪಂದದ ಬೆಲೆಯ ಮೇಲೆ ಸರ್ಕಾರದ ಹೊಸ 20% ರಫ್ತು ತೆರಿಗೆಯನ್ನು ಪಾವತಿಸಲು ನಿರಾಕರಿಸಿದ್ದರಿಂದ ಸುಮಾರು ಒಂದು ಮಿಲಿಯನ್ ಟನ್ ಧಾನ್ಯಗಳು ಅಲ್ಲಿ ಸಿಕ್ಕಿ ಹಾಕಿಕೊಂಡಿವೆ ಎಂದು ರಫ್ತುದಾರರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಭಾರತದಲ್ಲಿ ಅಕ್ಕಿ ಉತ್ಪಾದನೆ ಕುಂಠಿತ: ನುಚ್ಚಕ್ಕಿ ರಫ್ತು ನಿಷೇಧಿಸಿದ ಕೇಂದ್ರಭಾರತದಲ್ಲಿ ಅಕ್ಕಿ ಉತ್ಪಾದನೆ ಕುಂಠಿತ: ನುಚ್ಚಕ್ಕಿ ರಫ್ತು ನಿಷೇಧಿಸಿದ ಕೇಂದ್ರ

ಭಾರತವು ನುಚ್ಚಕ್ಕಿಯ ರಫ್ತುಗಳನ್ನು ನಿಷೇಧಿಸಿ ವಿವಿಧ ರೀತಿಯ ರಫ್ತುಗಳ ಮೇಲೆ 20% ಸುಂಕವನ್ನು ಗುರುವಾರ ವಿಧಿಸಿದೆ. ವಿಶ್ವದ ಅತಿದೊಡ್ಡ ಧಾನ್ಯವಾದ ಅಕ್ಕಿಯ ರಫ್ತುದಾರರು ಸ್ಥಳೀಯ ಸರಬರಾಜುಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಸರಾಸರಿಗಿಂತ ಕಡಿಮೆ ಮಾನ್ಸೂನ್ ಮಳೆಯ ನಂತರ ಬೆಲೆಗಳು ಇಳಿಕೆ ಕಂಡಿವೆ.

20% ಸುಂಕವು ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಆದರೆ ನಾವು ಖರೀದಿದಾರರು ಸುಂಕವನ್ನು ಪಾವತಿಸಲು ಸಿದ್ಧರಿಲ್ಲ. ನಾವು ಹಡಗುಗಳನ್ನು ಲೋಡ್ ಮಾಡುವುದನ್ನು ನಿಲ್ಲಿಸಿದ್ದೇವೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ (ಎಐಆರ್‌ಇಎ) ಅಧ್ಯಕ್ಷ ಬಿ.ವಿ.ಕೃಷ್ಣರಾವ್ ಹೇಳಿದ್ದಾರೆ. ಭಾರತವು ಪ್ರತಿ ತಿಂಗಳು ಸುಮಾರು ಎರಡು ಮಿಲಿಯನ್ ಟನ್ ಅಕ್ಕಿಯನ್ನು ಸಾಗಿಸುತ್ತದೆ. ಆಂಧ್ರಪ್ರದೇಶ ರಾಜ್ಯದ ಕಾಕಿನಾಡ ಮತ್ತು ವಿಶಾಖಪಟ್ಟಣಂನಂತಹ ಪೂರ್ವ ಬಂದರುಗಳಿಂದ ದೊಡ್ಡ ಪ್ರಮಾಣದಲ್ಲಿ ಲೋಡ್ ಆಗುತ್ತದೆ.

ಸರ್ಕಾರವು ನಿಯಮವನ್ನು ಬದಲಾಯಿಸುವ ದಿನದವರೆಗೆ ನೀಡಲಾದ ಕ್ರೆಡಿಟ್ ಪತ್ರಗಳು (LC) ಅಥವಾ ಪಾವತಿ ಗ್ಯಾರಂಟಿಗಳಿಂದ ಮಾಡಿಕೊಳ್ಳಲಾದ ಒಪ್ಪಂದಗಳಿಗೆ ಹಿಂದೆ ವಿನಾಯಿತಿಗಳನ್ನು ಒದಗಿಸಿದೆ. ಆದರೆ ಈಗ ಇಲ್ಲ ಎಂದು ಭಾರತದ ಅತಿದೊಡ್ಡ ಅಕ್ಕಿ ರಫ್ತುದಾರ ಸಂಸ್ಥೆ ಸತ್ಯಂ ಬಾಲಾಜಿಯ ಕಾರ್ಯನಿರ್ವಾಹಕ ನಿರ್ದೇಶಕ ಹಿಮಾಂಶು ಅಗರ್ವಾಲ್ ಹೇಳಿದ್ದಾರೆ.

20% ಸುಂಕವನ್ನು ಪಾವತಿಸಲು ಆಗಲ್ಲ

20% ಸುಂಕವನ್ನು ಪಾವತಿಸಲು ಆಗಲ್ಲ

ಅಕ್ಕಿ ವ್ಯಾಪಾರದಲ್ಲಿ ವ್ಯಾಪಾರವು ನಿರ್ದಿಷ್ಟವಾಗಿರುವುದಿಲ್ಲ. ಹೀಗಾಗಿ ರಫ್ತುದಾರರು 20% ಸುಂಕವನ್ನು ಪಾವತಿಸಲು ಶಕ್ತರಾಗಿರುವುದಿಲ್ಲ. ಸರ್ಕಾರವು ಈಗಾಗಲೇ ನೀಡಿರುವ ಸಾಲದ ಪತ್ರಗಳ ವಿರುದ್ಧ ರಫ್ತು ಮಾಡಲು ಅನುಮತಿಸಬೇಕು. ಸರ್ಕಾರವು ಈ ವರ್ಷದ ಆರಂಭದಲ್ಲಿ ಗೋಧಿ ರಫ್ತುಗಳನ್ನು ನಿಷೇಧಿಸಿದಾಗ ಈಗಾಗಲೇ ನೀಡಲಾದ ಕ್ರೆಡಿಟ್‌ ಪತ್ರಗಳ ವಿರುದ್ಧ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿತ್ತು ಎಂದು ಅಗರ್ವಾಲ್ ಹೇಳಿದರು.

ಹುಳು ತಿನ್ನುತ್ತಿದೆ 7,50,000 ಟನ್ ಬಿಳಿ ಅಕ್ಕಿ

ಹುಳು ತಿನ್ನುತ್ತಿದೆ 7,50,000 ಟನ್ ಬಿಳಿ ಅಕ್ಕಿ

ಶುಕ್ರವಾರದಿಂದ ನುಚ್ಚಕ್ಕಿಯ ರಫ್ತಿಗೆ 20% ಸುಂಕ ವಿಧಿಸಿದ ನಂತರ ಸುಮಾರು 7,50,000 ಟನ್ ಬಿಳಿ ಅಕ್ಕಿ ಬಂದರುಗಳಲ್ಲಿ ಹುಳು ತಿನ್ನುತ್ತಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. ನುಚ್ಚಕ್ಕಿ ರಫ್ತು ನಿಷೇಧಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್‌ಗೆ ಹಸ್ತಾಂತರಿಸಲಾದ ಸರಕುಗಳನ್ನು ಲೋಡ್ ಮಾಡಲು ಅಥವಾ ಗುರುವಾರದ ಅಧಿಸೂಚನೆಯ ಮೊದಲು ಹಡಗು ಲಂಗರು ಹಾಕಲು ಭಾರತ ಅನುಮತಿಸಿದೆ. ಆದರೆ ಸೆ.15ರೊಳಗೆ ಲೋಡಿಂಗ್ ಪೂರ್ಣಗೊಳಿಸಬೇಕಾಗಿದೆ.

ಸರಕುಗಳನ್ನು ಒಳನಾಡಿಗೆ ಹಿಂತಿರುಗಿಸಲು ಸಾಧ್ಯವಿಲ್ಲ

ಸರಕುಗಳನ್ನು ಒಳನಾಡಿಗೆ ಹಿಂತಿರುಗಿಸಲು ಸಾಧ್ಯವಿಲ್ಲ

ವಿವಿಧ ಬಂದರುಗಳಲ್ಲಿ ಬಿದ್ದಿರುವ 3,50,000 ಟನ್‌ಗಳಷ್ಟು ನುಚ್ಚಕ್ಕಿ ಸರ್ಕಾರದ ಮಾನದಂಡಗಳನ್ನು ಪೂರೈಸುವುದಿಲ್ಲ ಮತ್ತು ಸರಕುಗಳನ್ನು ಒಳನಾಡಿಗೆ ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಜಾಗತಿಕ ವ್ಯಾಪಾರ ಸಂಸ್ಥೆಯೊಂದರ ಹೊಸ ದೆಹಲಿ ಮೂಲದ ಡೀಲರ್ ಹೇಳಿದ್ದಾರೆ. ನುಚ್ಚಕ್ಕಿಯ ಸಾಗಣೆಗಳು ಚೀನಾ, ಸೆನೆಗಲ್, ಸೆನೆಗಲ್ ಮತ್ತು ಜಿಬೌಟಿಗೆ ಹೋಗುತ್ತಿವೆ. ಆದರೆ ಇತರ ದರ್ಜೆಯ ಬಿಳಿ ಅಕ್ಕಿಯನ್ನು ಬೆನಿನ್, ಶ್ರೀಲಂಕಾ, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಖರೀದಿದಾರರು ಖರೀದಿಸಿದ್ದಾರೆ ಎಂದು ರಫ್ತುದಾರರು ತಿಳಿಸಿದ್ದಾರೆ.

ವಾಣಿಜ್ಯ ಸಚಿವಾಲಯ ಪ್ರತಿಕ್ರಿಯೆ ಇಲ್ಲ

ವಾಣಿಜ್ಯ ಸಚಿವಾಲಯ ಪ್ರತಿಕ್ರಿಯೆ ಇಲ್ಲ

7,50,000 ಟನ್ ಬಿಳಿ ಅಕ್ಕಿ ಮತ್ತು 5,00,000 ಟನ್ ನುಚ್ಚಕ್ಕಿಯ ಮೇಲಿನ ಹೊಸ ನಿಯಮಗಳನ್ನು ಸಡಿಲಿಸಲು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಸರ್ಕಾರವನ್ನು ಕೇಳಿಕೊಂಡಿದೆ. ಆದರೆ ಸಂಘವು ಮಾಡಿದ ವಿನಂತಿಗೆ ವಾಣಿಜ್ಯ ಸಚಿವಾಲಯ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ. ಭಾರತವು 150ಕ್ಕೂ ಹೆಚ್ಚು ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತದೆ. ಸಾಗಣೆಯಲ್ಲಿನ ಕಡಿತವು ಆಹಾರದ ಬೆಲೆಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಬರ ಮತ್ತು ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಈಗಾಗಲೇ ಏರುತ್ತಿದೆ.

English summary
India ships about two million tonnes of rice every month from eastern ports like Kakinada and Visakhapatnam. But now the rice has been stopped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X