ಜೀಯೋಗೆ ಸಡ್ಡು ಹೊಡೆಯಲು ಹೊರಟಿದೆ ಬಿಎಸ್ಎನ್ಎಲ್, ಇಲ್ಲಿದೆ ಪ್ಲಾನ್

Subscribe to Oneindia Kannada

ಬೆಂಗಳೂರು, ಮಾರ್ಚ್ 16: ಸರಕಾರಿ ಪ್ರಾಯೋಜಿತ ಬಿಎಸ್ಎನ್ಎಲ್ ಕೂಡಾ ಡೇಟಾ ಸಮರಕ್ಕೆ ದಾಗುಂಡಿ ಇಟ್ಟಿದೆ. ದಿನಕ್ಕೆ 2 ಜಿಬಿ ಡೇಟಾ ನೀಡುವುದಾಗಿ ಹೇಳಿರುವ ಬಿಎಸ್ಎನ್ಎಲ್, ರಿಲಾಯನ್ಸ್ ಜಿಯೋಗೆ ಸಡ್ಡು ಹೊಡೆಯಲು ಮುಂದಾಗಿದೆ.

ಈ ಹಿಂದೆ 339ರ ಪ್ಲಾನಿಗೆ ಬಿಎಸ್ಎನ್ಎಲ್ ಅನಿಯಮಿತ ಕರೆ ಮತ್ತು ಕೇವಲ 300 ಎಂಬಿಗಳ ಡೇಟಾ ನೀಡುವುದಾಗ ಹೇಳಿತ್ತು. ನಂತರ ಅದೇ ಹಳೇ ಪ್ಲಾನನ್ನು ಮತ್ತೆ ಪರಿಷ್ಕರಣೆ ಮಾಡಿ ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆಗಳು ಮತ್ತು 28 ದಿನಗಳ ಕಾಲ ದಿನಕ್ಕೆ 1 ಜಿಬಿ ಡೇಟಾ ನೀಡುವುದಾಗಿ ಹೇಳಿತ್ತು.[ಮತ್ತೆ ಮುಂದುವರಿಯುತ್ತೆ ರಿಲಾಯನ್ಸ್ ಜಿಯೋ ಉಚಿತ ಕೊಡುಗೆ!]

2 GB data a day with unlimited calling, BSNL to counter Jio

ಇದೀಗ ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಇದೇ ಪ್ಲಾನಿಗೆ ದಿನಕ್ಕೆ 2 ಜಿಬಿ ಡೇಟಾ ನೀಡಲಿದೆ ಎಂದು ವರದಿಗಳು ಹೇಳುತ್ತಿವೆ. ಈ ಮೂಲಕ ರಿಲಯನ್ಸ್ ಗಿಂತಲು ಹೆಚ್ಚು ಡೇಟಾ ನೀಡುವುದಾಗಿ ಬಿಎಸ್ಎನ್ಎಲ್ ಹೇಳಿದ್ದು ಪ್ರತಿಸ್ಪರ್ಧಿಗೆ ಸಡ್ಡು ಹೊಡೆಯಲು ಹೊರಟಿದೆ.

ಆದರೆ ಒಂದು ಕಂಡೀಷನ್ ; ಬಿಎಸ್ಎನ್ಎಲ್ ನಿಂದ ಬಿಎಸ್ಎನ್ಎಲ್ ಕರೆಗಳು ಸಂಪೂರ್ಣ ಉಚಿತವಾಗಿರುತ್ತವೆ. ಆದರೆ ಬೇರೆ ನೆಟ್ವರ್ಕಿಗೆ ದಿನಕ್ಕೆ 25 ನಿಮಿಷಗಳ ಉಚಿತ ಕರೆಗಳು ಮಾತ್ರ ಇರುತ್ತವೆ. 25 ನಿಮಿಷಗಳ ನಂತರ ಪ್ರತಿನಿಮಿಷಕ್ಕೆ 25 ಪೈಸೆ ಕರೆ ದರವಿರಲಿದೆ.[ಗೂಗಲ್ ಜತೆಗೆ ಕೈ ಜೋಡಿಸಲಿದೆ ರಿಲಯನ್ಸ್ ಜಿಯೊ]

ಮಾರ್ಚ್ 31ರ ಮೊದಲು ರೀಚಾರ್ಚ್ ಮಾಡಿದರೆ ಮುಂದಿನ ಒಂದು ವರ್ಷ ದಿನಕ್ಕೆ 1 ಜಿಬಿ ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ನೀಡುವುದಾಗಿ ಬಿಎಸ್ಎನ್ಎಲ್ ಹೇಳಿದೆ. ರಿಲಾಯನ್ಸ್ ಜೀಯೋ ಪ್ರೈಮ್ ಸದಸ್ಯತ್ವಕ್ಕೆ ಸ್ಪರ್ಧೆ ಒಡ್ಡಲು ಈ ಆಫರನ್ನು ಸರಕಾರಿ ಸ್ವಾಮ್ಯದ ಕಂಪನಿ ಬಿಡುಗಡೆ ಮಾಡಿದೆ.

ಈಗಾಗಲೇ ಏರ್ಟೆಲ್ ಮತ್ತು ವೊಡಾಫೋನ್ ಕಂಪೆನಿಗಳೂ ಜಿಯೋಗೆ ಸ್ಪರ್ಧೆ ಒಡ್ಡಲು ದಿನಕ್ಕೆ 1 ಜಿಬಿ ಡೇಟಾ ನಿಡುವ ಪ್ಲಾನುಗಳನ್ನು ಬಿಡುಗಡೆ ಮಾಡಿವೆ. ಈ ಮೂಲಕ ಎಲ್ಲಾ ಕಂಪೆನಿಗಳು ಒಟ್ಟಾಗಿ ಜಿಯೋವನ್ನು ಎದುರಿಸಲು ಸಜ್ಜಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To counter Reliance Jio, state run BSNL is going to revise its unlimited plans. The Rs 339 plan will be offering the same unlimited calling to any network and unlimited data for 28 days with a daily data cap of 2GB.
Please Wait while comments are loading...