ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪುರ ಚಿಟ್‌ಫಂಡ್ ಹಗರಣ: ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ

|
Google Oneindia Kannada News

ನವದೆಹಲಿ, ಜೂ.18: ಬರೋಬ್ಬರಿ 191,18,90,089 ಕೋಟಿ ರೂಪಾಯಿಗಳ ಚಿಟ್ ಫಂಡ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವ್ಯಕ್ತಿಗಳು ಮತ್ತು ನಾಲ್ಕು ಖಾಸಗಿ ಸಂಸ್ಥೆಗಳು ಸೇರಿದಂತೆ ಎಂಟು ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವುದಾಗಿ ಕೇಂದ್ರೀಯ ತನಿಖಾ ದಳ (ಸಿಬಿಐ) ತಿಳಿಸಿದೆ.

ಗೌತಮ್ ಕುಂದು, ನಿರ್ದೇಶಕ ಶಿಬಾಮೊಯ್ ದತ್ತಾ, ನಿರ್ದೇಶಕ ಅಶೋಕ್ ಕುಮಾರ್ ಸಹಾ, ರಾಮ್ ಲಾಲ್ ಗೋಸ್ವಾಮಿ, ರೋಸ್ ವ್ಯಾಲಿ ಹೋಟೆಲ್ ಮತ್ತು ಎಂಟರ್‌ಟೈನ್‌ಮೆಂಟ್ ಲಿಮಿಟೆಡ್, ರೋಸ್ ವ್ಯಾಲಿ ರಿಯಲ್ ಎಸ್ಟೇಟ್ ಮತ್ತು ಕನ್‌ಸ್ಟ್ರಕ್ಷನ್ ಲಿಮಿಟೆಡ್, ಕೋಲ್ಕತ್ತಾ, ರೋಸ್ ವ್ಯಾಲಿ, ಇಂಡಸ್ಟ್ರೀಸ್, ಕೋಲ್ಕತ್ತಾ, ಮತ್ತು ರಿಯಲ್ ಎಸ್ಟೇಟ್ ಮತ್ತು ಲ್ಯಾಂಡ್‌ಬ್ಯಾಂಕ್ ಇಂಡಿಯಾ ಲಿಮಿಟೆಡ್ ವಿರುದ್ಧ ತ್ರಿಪುರಾದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ವಂಚನೆ ಪ್ರಕರಣ: ಅಸ್ಸಾಂ ಲೇಡಿ ಸಿಂಗಮ್ ಬಂಧನವಂಚನೆ ಪ್ರಕರಣ: ಅಸ್ಸಾಂ ಲೇಡಿ ಸಿಂಗಮ್ ಬಂಧನ

ನಿಯಮಾವಳಿಗಳನ್ನು ಉಲ್ಲಂಘಿಸಿದ ನಿರ್ದೇಶಕರು

ನಿಯಮಾವಳಿಗಳನ್ನು ಉಲ್ಲಂಘಿಸಿದ ನಿರ್ದೇಶಕರು

ರಿಯಲ್ ಎಸ್ಟೇಟ್ ವ್ಯವಹಾರಗಳ ಹೆಸರಿನಲ್ಲಿ ಪ್ರಮಾಣಪತ್ರಗಳನ್ನು ನೀಡಿ, ಅಪಾರ ಸಂಖ್ಯೆಯ ಹೂಡಿಕೆದಾರರಿಗೆ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವುದು, ಉದ್ಯಮ ಮತ್ತು ಭೂಮಿ ಅಭಿವೃದ್ಧಿ, ಸೆಬಿ ಮತ್ತು ಆರ್‌ಬಿಐ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ದೇಶಕರು ಠೇವಣಿ ರೂಪದಲ್ಲಿ ಭಾರಿ ಸಾರ್ವಜನಿಕ ಹಣವನ್ನು ಸಂಗ್ರಹಿಸಿದ್ದರು.

ಲಾಟರಿ ಹೆಸರಲ್ಲಿ ಲಕ್ಷ ಲಕ್ಷ ವಂಚನೆ: ಇಬ್ಬರ ಬಂಧನಲಾಟರಿ ಹೆಸರಲ್ಲಿ ಲಕ್ಷ ಲಕ್ಷ ವಂಚನೆ: ಇಬ್ಬರ ಬಂಧನ

2018 ರಲ್ಲಿ ಚಾರ್ಜ್‌ಶೀಟ್ ಪೊಲೀಸರಿಂದ ಚಾರ್ಚ್‌ ಶೀಟ್‌

2018 ರಲ್ಲಿ ಚಾರ್ಜ್‌ಶೀಟ್ ಪೊಲೀಸರಿಂದ ಚಾರ್ಚ್‌ ಶೀಟ್‌

ತ್ರಿಪುರಾ ಹೈಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿ ಸಿಬಿಐ ಅಕ್ಟೋಬರ್ 18, 2019 ರಂದು ಪ್ರಕರಣವನ್ನು ದಾಖಲಿಸಿತ್ತು. ಈ ಹಿಂದೆ ಕುಮಾರ್‌ಘಾಟ್, ಅಗರ್ತಲಾ ಮತ್ತು ಇತರೆಡೆ ಶಾಖೆಗಳನ್ನು ಹೊಂದಿರುವ ಖಾಸಗಿ ಕಂಪನಿಯ ವಿರುದ್ಧ ಕುಮಾರ್‌ಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಂಪನಿಯ ನಿರ್ದೇಶಕರ ಮಂಡಳಿ ಮತ್ತು ಇತರರ ವಿರುದ್ಧ ಪೊಲೀಸರು 2018 ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದರು. ದೂರುದಾರರು 2007 ಮತ್ತು 2009 ರ ನಡುವೆ ಕುಮಾರ್‌ಘಾಟ್ ಶಾಖೆಯಲ್ಲಿ ಖಾಸಗಿ ಕಂಪನಿಯಲ್ಲಿ 9,26,000 ರುಪಾಯಿ ಮತ್ತು ಅಗರ್ತಲಾದಲ್ಲಿರುವ ಅದರ ಇನ್ನೊಂದು ಶಾಖೆಯಲ್ಲಿ 75,000 ರುಪಾಯಿ ಠೇವಣಿ ಮಾಡಿದ್ದರು.

ಪರಸ್ಪರ ಪಿತೂರಿ ನಡೆಸಿರುವ ಆರೋಪಿಗಳು

ಪರಸ್ಪರ ಪಿತೂರಿ ನಡೆಸಿರುವ ಆರೋಪಿಗಳು

ಆದರೆ, ಮೆಚ್ಯೂರಿಟಿ ದಿನಾಂಕಗಳು ಕಳೆದರೂ ಆರೋಪಿಗಳು ದೂರುದಾರರಿಗೆ ಹಣವನ್ನು ಹಿಂದಿರುಗಿಸಿರಲಿಲ್ಲ. ಪರಸ್ಪರ ಪಿತೂರಿ ನಡೆಸಿರುವ ಆರೋಪಿಗಳು ತಮ್ಮ ನಿಧಿ ಸಂಗ್ರಹಿಸುವ ಕಂಪನಿಗಳ ನಿರ್ದೇಶಕರು ಮತ್ತು ಷೇರುದಾರರಾಗಿದ್ದಾರೆ ಎಂದು ಸಿಬಿಐ ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿಗಳು ಗ್ರೂಪ್ ಆಫ್ ಕಂಪನೀಸ್ ಅಡಿಯಲ್ಲಿ ಹಲವಾರು ಕಂಪನಿಗಳನ್ನು ರಚಿಸಿದರು. ಬಳಿಕ ಅದರ ನಿರ್ದೇಶಕರಾದರು. ಈ ಕಂಪನಿಗಳು ನಷ್ಟವನ್ನುಂಟು ಮಾಡುವ ಘಟಕಗಳು ಎಂದು ತಿಳಿದು ಹಣವನ್ನು ಇತರ ಕಂಪನಿಗಳಿಗೆ ವರ್ಗಾಯಿಸಿದರು. ಬಳಿಕ ಈ ಕಂಪನಿಗಳ ಹೆಸರಿನಲ್ಲಿ ಹಲವಾರು ಬ್ಯಾಂಕ್ ಖಾತೆಗಳನ್ನು ತೆರೆದು ಇದೇ ಖಾತೆಗಳಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವ ಸಲುವಾಗಿ ಈ ಬ್ಯಾಂಕ್ ಖಾತೆಗಳಿಗೆ ಸಹಿ ಹಾಕಿದರು.

ಹೂಡಿಕೆ ಮಾಡಲು ಪ್ರೇರಣೆ

ಹೂಡಿಕೆ ಮಾಡಲು ಪ್ರೇರಣೆ

ಆರೋಪಿಗಳು ಒಬ್ಬರ ಮೇಲೊಬ್ಬರಂತೆ ಏಜೆಂಟರನ್ನು ನೇಮಿಸಿ ಹೆಚ್ಚಿನ ಕಮಿಷನ್ ಮತ್ತು ಪ್ರೋತ್ಸಾಹದೊಂದಿಗೆ ಜನರಿಗೆ ಆಮಿಷವೊಡ್ಡುವ ಮೂಲಕ ಠೇವಣಿ ಸಂಗ್ರಹಿಸಲು ಪ್ರೇರೇಪಿಸಿದರು. ಹೆಚ್ಚಿನ ಆದಾಯವನ್ನು ನೀಡುವ ಖಾಸಗಿ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಹೂಡಿಕೆದಾರರನ್ನು ಪ್ರೇರೇಪಿಸಿದರು. ಆರೋಪಿಗಳು ತಮ್ಮ ಕಂಪನಿಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರಾಗಿದ್ದು, ಹೂಡಿಕೆದಾರರು ಹೂಡಿಕೆ ಮಾಡಿದ ಮೊತ್ತವನ್ನು ಸದರಿ ಗುಂಪಿನ ಹಿತಾಸಕ್ತಿಗಾಗಿ ನಷ್ಟಕ್ಕೆ ತಿರುಗಿಸಲಾಯಿತು. ಆ ಮೂಲಕ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲಾಯಿತು. ಇದು ಬರೋಬ್ಬರಿ 191,18,90,089 ರೂಪಾಯಿ ದುರುಪಯೋಗವಾಗಿದೆ ಎಂದು ಸಿಬಿಐ ಹೇಳಿದೆ.

Recommended Video

ಎಷ್ಟೇ ಪರ್ಫಾಮ್ ಮಾಡಿದ್ರು ಬಿಸಿಸಿಐ ಕಣ್ಣಿಗೆ ಬೀಳೋದು ಕಷ್ಟ | *Cricket | OneIndia Kannada

English summary
The Central Bureau of Investigation (CBI) said eight persons, including four individuals and four private firms, have been indicted in connection with a chit fund fraud case worth Rs 191,18,90,089 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X