ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿಯಿಂದ ನ್ಯೂಯಾರ್ಕ್ ತನಕ ಡಾಯ್ಚ ಬ್ಯಾಂಕ್ ನಿಂದ 18 ಸಾವಿರ ಉದ್ಯೋಗ ಕಡಿತ

By ಅನಿಲ್ ಆಚಾರ್
|
Google Oneindia Kannada News

ಜರ್ಮನಿಯ ದೊಡ್ಡ ಬ್ಯಾಂಕ್ ಆದ ಡಾಯ್ಚ ಬ್ಯಾಂಕ್ ಸಿಡ್ನಿಯಿಂದ ನ್ಯೂಯಾರ್ಕ್ ತನಕ ಹದಿನೆಂಟು ಸಾವಿರ ಉದ್ಯೋಗ ಕಡಿತ ಮಾಡಲು ಮುಂದಾಗಿದೆ. ವಿಶ್ವಾದ್ಯಂತ ಇರುವ ದಾಯಿಷ್ ಬ್ಯಾಂಕ್ ಶಾಖೆಗಳಲ್ಲಿ ತೊಂಬತ್ತೆರಡು ಸಾವಿರ ಸಿಬ್ಬಂದಿ ಇದ್ದಾರೆ. ಆ ಪೈಕಿ ಅಮೆರಿಕದ ವಾಲ್ ಸ್ಟ್ರೀಟ್ ನಲ್ಲಿ ಮೂವತ್ತೆಂಟೂವರೆ ಸಾವಿರ ಸಿಬ್ಬಂದಿ ಇದ್ದಾರೆ.

ಡಾಯ್ಚ ಬ್ಯಾಂಕ್ ನಿಂದ ಭಾನುವಾರ ಈ ವಿಚಾರ ತಿಳಿಸಿದ್ದು, ಗ್ಲೋಬಲ್ ಈಕ್ವಿಟೀಸ್ ಯೂನಿಟ್ ಮುಚ್ಚಲು ನಿರ್ಧಾರ ಮಾಡಲಾಗಿದೆ. ಇದರ ಜತೆಗೆ ಕೆಲವು ಸ್ಥಿರ ಆದಾಯ ಕಾರ್ಯ ಚಟುವಟಿಕೆಗಳನ್ನು ಸಹ ನಿಲ್ಲಿಸಲಿದೆ. ಅಮೆರಿಕದಲ್ಲಿ ಲಿಸ್ಟ್ ಆಗಿರುವ ಬ್ಯಾಂಕ್ ನ ಷೇರುಗಳು ಹಾಗೂ ಬಾಂಡ್ ಗಳು ಸಹ ಅನಿಶ್ಚಿತತೆಯ ಕಾರಣಕ್ಕೆ ಕುಸಿತ ಕಂಡಿವೆ.

ನೈನಿತಾಲ್ ಬ್ಯಾಂಕಿನಲ್ಲಿ 130 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ ನೈನಿತಾಲ್ ಬ್ಯಾಂಕಿನಲ್ಲಿ 130 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಡಾಯ್ಚ ಬ್ಯಾಂಕ್ ಭವಿಷ್ಯದಲ್ಲಿ ಉತ್ತಮ ಪ್ರಗತಿ ದಾಖಲಿಸುತ್ತದೆ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯ ಪಟ್ಟರೆ, ಆ ಅವಕಾಶ ಎಲ್ಲಿದೆ ಎಂಬುದಕ್ಕೆ ಉತ್ತರ ದೊರೆಯುತ್ತಿಲ್ಲ ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ. ಬ್ಯಾಂಕ್ ನ ಭವಿಷ್ಯದ ಕ್ರೆಡಿಟ್ ರೇಟಿಂಗ್ ಬಗ್ಗೆ ಮಾತನಾಡಿರುವ ರೇಟಿಂಗ್ ಏಜೆನ್ಸಿ ಫಿಚ್, ಭವಿಷ್ಯದ ಯೋಜನೆಗಳನ್ನು ಡಾಯ್ಚ ಬ್ಯಾಂಕ್ ಹೇಗೆ ಅನುಷ್ಠಾನಕ್ಕೆ ತರುತ್ತದೆ ಎಂಬುದರ ಮೇಲೆ ರೇಟಿಂಗ್ ಅವಲಂಬಿತ ಆಗಲಿದೆ ಎಂದಿದ್ದಾರೆ.

18 thousand jobs laid off from Sydney to New York by Deutsche bank

ಬ್ಯಾಂಕ್ ಗೆ ಮತ್ತೆ ಹೊಸ ರೂಪ ನೀಡಲು ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿ ಕಡಿತ, ಪ್ರಮುಖ ನಾಯಕತ್ವ ಬದಲಾವಣೆ ಬಹಳ ಮುಖ್ಯ ಎಂದು ಹೇಳಲಾಗಿದೆ. ಯೋಜನೆಯನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರುವುದೇ ಸವಾಲು ಎಂದು ಮೂಡೀಸ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

2189 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಭವಿಷ್ಯ ನಿಧಿ ಸಂಘಟನೆ 2189 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಭವಿಷ್ಯ ನಿಧಿ ಸಂಘಟನೆ

ಈ ವಿಚಾರ ತಿಳಿಸಲು ಅಮೆರಿಕದ ವಾಲ್ ಸ್ಟ್ರೀಟ್ ನಲ್ಲಿ ಇರುವ ಬ್ಯಾಂಕ್ ನ ಕೆಫಟೇರಿಯಾಗೆ ನೂರಾರು ಸಂಖ್ಯೆಯ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಅಮೆರಿಕದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಡಾಯ್ಚ ಬ್ಯಾಂಕ್, ತೀವ್ರ ಸ್ಪರ್ಧೆಯ ಭಾರ, ನಿಯಮಾವಳಿಗಳ ತನಿಖೆ ಹಾಗೂ ವ್ಯಾಜ್ಯದಲ್ಲಿ ಸಿಲುಕಿ ನಲುಗಿದೆ.

English summary
18 thousand jobs laid off from Sydney to New York by Deutsche bank due to 'reinvention' of bank. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X