ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ಮೊದಲ ದಿನದ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು ಮಾರ್ಚ್ 07: ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುವ ಭಾರತದ ಹೆಮ್ಮೆಯ ಮತ್ತು ಪ್ರತಿಷ್ಠಿತ ನ್ಯಾನೋಟೆಕ್ ಕಾರ್ಯಕ್ರಮವಾಗಿರುವ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದರು. ಕರ್ನಾಟಕ ಸರ್ಕಾರದ ವಿಷನ್ ಗ್ರೂಪ್ ಆನ್ ನ್ಯಾನೋಟೆಕ್ನಾಲಜಿಯ ಗೌರವಾಧ್ಯಕ್ಷರು, ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರು ಮತ್ತು ಲೀನಸ್ ಪೌಲಿಂಗ್ ಸಂಶೋಧನಾ ಪ್ರಾಧ್ಯಾಪಕರು, ಬೆಂಗಳೂರಿನ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್- ಜೆಎನ್‌ಸಿಎಎಸ್‌ಆರ್) ಗೌರವಾಧ್ಯಕ್ಷರಾಗಿರುವ ಪ್ರೊ. ಸಿ.ಎನ್.ಆರ್. ರಾವ್, ಎಫ್‌ಆರ್‌ಎಸ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಿತು.

ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು; ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸ ರಿಜ್ವಾನ್ ಅರ್ಷದ್ ಅವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.

ರೈತರಿಗೆ ಕೆಲವೇ ದಿನಗಳಲ್ಲಿ ನ್ಯಾನೋ ಯೂರಿಯಾ ಪೂರೈಕೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರೈತರಿಗೆ ಕೆಲವೇ ದಿನಗಳಲ್ಲಿ ನ್ಯಾನೋ ಯೂರಿಯಾ ಪೂರೈಕೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಾರ್ಚ್ 7 ರಿಂದ 9 ರವರೆಗೆ ಮೂರು ದಿನಗಳ ಕಾಲ ಈ ವರ್ಚುಯಲ್ ಆವೃತ್ತಿಯ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೆಸ್ಟೆಪ್ಸ್ ಮತ್ತು ಜೆಎನ್‌ಸಿಎಎಸ್‌ಆರ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿವೆ.

ಮಾ.7ರಿಂದ ಬೆಂಗಳೂರಲ್ಲಿ ಇಂಡಿಯಾ ನ್ಯಾನೋ ಸಮಾವೇಶ ಮಾ.7ರಿಂದ ಬೆಂಗಳೂರಲ್ಲಿ ಇಂಡಿಯಾ ನ್ಯಾನೋ ಸಮಾವೇಶ

ಸಮ್ಮೇಳನ ಮೊದಲ ದಿನದಂದು ಭಾಗವಹಿಸಿದ್ದ ಗಣ್ಯರು

ಸಮ್ಮೇಳನ ಮೊದಲ ದಿನದಂದು ಭಾಗವಹಿಸಿದ್ದ ಗಣ್ಯರು

ಕರ್ನಾಟಕ ಸರ್ಕಾರದ ನ್ಯಾನೊ ತಂತ್ರಜ್ಞಾನ ಕುರಿತ ಕರ್ನಾಟಕ ವಿಷನ್ ಗ್ರೂಪ್‌ನ ಅಧ್ಯಕ್ಷ ಪ್ರೊ. ನವಕಾಂತ ಭಟ್; ಬೆಂಗಳೂರು ಇಂಡಿಯಾ ನ್ಯಾನೋ 2022ರ ಸಮ್ಮೇಳನದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪ್ರೊ. ಅಜಯ್ ಕುಮಾರ್ ಸೂದ್, ಎಫ್‌ಆರ್‌ಎಸ್; ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ; ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಇ.ವಿ. ರಮಣ ರೆಡ್ಡಿ, ಭಾ.ಆ.ಸೇ; ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರು (ತಾಂತ್ರಿಕ) ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎ.ಬಿ. ಬಸವರಾಜು, ಭಾ.ಆ.ಸೇ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಪ್ರೊ. ಎಸ್. ಸ್ವಾಮಿನಾಥನ್ ಅವರಿಗೆ ಪ್ರಶಸ್ತಿ

ಪ್ರೊ. ಎಸ್. ಸ್ವಾಮಿನಾಥನ್ ಅವರಿಗೆ ಪ್ರಶಸ್ತಿ

ಸಮಾರಂಭದಲ್ಲಿ ಪ್ರತಿಷ್ಠಿತ ಪ್ರೊ. ಸಿ.ಎನ್.ಆರ್. ರಾವ್ ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್ ಪ್ರಶಸ್ತಿಯನ್ನು ಪ್ರೊ. ಎಸ್. ಸ್ವಾಮಿನಾಥನ್, ಡೀನ್, ಯೋಜನೆ ಮತ್ತು ಅಭಿವೃದ್ಧಿ; ನಿರ್ದೇಶಕರು, ಸೆಂಟರ್ ಫಾರ್ ನ್ಯಾನೊಟೆಕ್ನಾಲಜಿ & ಅಡ್ವಾನ್ಸ್ಡ್ ಬಯೋಮಟೀರಿಯಲ್ಸ್ ಸಾಸ್ತ್ರ ಡೀಮ್ಡ್ ವಿಶ್ವವಿದ್ಯಾಲಯ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊ. ಫೆಡೆರಿಕೋ ಕೆಪ್ಯಾಸ್ಸೊ, ಸಿಂಗಾಪುರ್ ನಯಾಂಗ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರೊ. ಕ್ಸಿಯೊಡಾಂಗ್ ಚೆನ್, ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊ. ಪಿಡಾಂಗ್ ಯಾಂಗ್ ಮತ್ತು ಭಾರತದ ಸಾಸ್ತ್ರ ಡೀಮ್ಡ್ ವಿಶ್ವವಿದ್ಯಾಲಯದ ಪ್ರೊ. ಎಸ್. ಸ್ವಾಮಿನಾಥನ್ ಅವರನ್ನು ಒಳಗೊಂಡಂತೆ ಹಲವು ಪ್ರಭಾವಿ ವಾಗ್ಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

‘ಸುಸ್ಥಿರ ಭವಿಷ್ಯಕ್ಕಾಗಿ ನ್ಯಾನೋ ತಂತ್ರಜ್ಞಾನ' ಎಂಬ ಪ್ರಮುಖ ಆಶಯ ಹೊಂದಿರುವ ಸಮ್ಮೇಳನವು 2500ಕ್ಕೂ ಹೆಚ್ಚು ಪ್ರತಿನಿದಿಗಳು ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಮಲ್ಟಿ-ಟ್ರಾಕ್ ಅಧಿವೇಶನಗಳು ನಡೆಯಲಿದ್ದು, 25ಕ್ಕೂ ಅಧಿಕ ಅಧಿವೇಶನಗಳಲ್ಲಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ 75ಕ್ಕೂ ಹೆಚ್ಚು ಭಾಷಣಕಾರರು, ವೈದ್ಯಕೀಯ, ಉತ್ಪಾದನೆ, ವಿದ್ಯುನ್ಮಾನ, ಹೈಡ್ರೋಜನ್ ಆರ್ಥಿಕತೆ, ಆಹಾರ ಮತ್ತು ಕೃಷಿ, ಜವಳಿ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನದ ಅಳವಡಿಕೆಗೆ ಸಂಬಂಧಿಸಿದಂತೆ ಉಪನ್ಯಾಸ ನೀಡಲಿದ್ದಾರೆ. ಅಲ್ಲದೆ, ನ್ಯಾನೋ ಫ್ಯಾಬ್ರಿಕೇಷನ್, ಬಾಟಮ್-ಅಪ್ ಸಿಂಥೆಸಿಸ್, ಕ್ಯಾರೆಕ್ಟರೈಸೇಷನ್ ಟೂಲ್ಸ್, ಮತ್ತು ನ್ಯಾನೋ ಜೀವಶಾಸ್ತ್ರಗಳ ಮೇಲೆ ಕೇಂದ್ರೀಕೃತವಾದ ಬೋಧನೆಗಳು (ಟ್ಯುಟೋರಿಯಲ್ಸ್) ಕೂಡ ನಡೆಯಲಿವೆ.

ಸ್ಟಾರ್ಟ್-ಅಪ್ ಪಿಚ್ಚಿಂಗ್ ಸೆಷನ್

ಸ್ಟಾರ್ಟ್-ಅಪ್ ಪಿಚ್ಚಿಂಗ್ ಸೆಷನ್

ಪ್ರಸಕ್ತ ವರ್ಷ ಕೈಗಾರಿಕೆ ಮತ್ತು ಅಂತಾರಾಷ್ಟ್ರೀಯ ಪಾಲ್ಗೊಳ್ಳುವಿಕೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸೆಮಿಕಂಡೆಕ್ಟರ್ ಉತ್ಪಾದನೆ, ಫಾರ್ಮಾ ಮತ್ತು ಮೆಡಿಸಿನ್ ಹಾಗೂ ಫಂಡಿಂಗ್ ವಿಷಯಗಳ ಕುರಿತ ವಿಶೇಷ ಅಧಿವೇಶನಗಳು ನಡೆಯುತ್ತಿವೆ. ಈ ವೇಳೆ ನಡೆಯುವ ಪ್ರದರ್ಶನ ಮೇಳದಲ್ಲಿ 40ಕ್ಕೂ ಅಧಿಕ ಕಂಪನಿಗಳು ಭಾಗವಹಿಸುತ್ತಿದ್ದು, ನ್ಯಾನೋ ತಂತ್ರಜ್ಞಾನ ಉತ್ಪನ್ನಗಳು, ಸೇವೆಗಳು ಮತ್ತು ಅನ್ವೇಷಣೆ, ನಾವಿನ್ಯತೆಗಳನ್ನು ಪ್ರದರ್ಶನ ಮಾಡಲಿವೆ. ಐಐಟಿ ದೆಹಲಿ, ಜೆಎನ್‌ಸಿಎಎಸ್‌ಆರ್, ಹೆಚ್‌ಹೆಚ್‌ವಿ, ಸಿಐಐಆರ್‌ಸಿ, ಸಾಸ್ತ್ರ ವಿಶ್ವವಿದ್ಯಾಲಯ, ಸಿಇಎನ್‌ಎಸ್, ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಎಆರ್‌ಸಿಐ, ಸಿಇಎನ್‌ಎಸ್‌ಇ, ಇ-ಸ್ಪಿನ್ ನ್ಯಾನೋಟೆಕ್ ಮತ್ತು 15 ನವೋದ್ಯಮಗಳು (IIT Delhi, JNCASR, HHV, CIIRC, SASTRA University, CeNS, Institute of Nano Science & Technology, ARCI, CeNSE, E-Spin Nanotech and 15 start-ups) ಪ್ರಮುಖ ಪ್ರದರ್ಶಕ ಸಂಸ್ಥೆಗಳಾಗಿವೆ. ಪ್ರಯೋಗಾಲಯದಿಂದ ಮಾರುಕಟ್ಟೆವರೆಗಿನ ಪ್ರಯಾಣದ ವೇಗವನ್ನು ಹೆಚ್ಚಿಸುವ ಆಶಯದೊಂದಿಗೆ, ನ್ಯಾನೋಸ್ಪಾರ್ಕ್ಸ್ (NanoSparX) ಎಂಬ ಸ್ಟಾರ್ಟ್-ಅಪ್ ಪಿಚ್ಚಿಂಗ್ ಸೆಷನ್ ಕೂಡ ನಡೆಯಲಿದ್ದು, ಈ ವೇಳೆ ಭರವಸೆ ಮೂಡಿಸುವ ಕೆಲವು ಕಂಪನಿಗಳು, ಉದ್ಯಮ ಮತ್ತು ಹೂಡಿಕೆದಾರರಿಗೆ ತಮ್ಮ ಯೋಜನೆಗಳನ್ನು ವಿವರಿಸಿ ಅವರನ್ನು ಆಕರ್ಷಿಸಲು ಪ್ರಯತ್ನಿಸಲಿವೆ.

ಇಸ್ರೇಲ್ ನ್ಯಾನೋ ಇಕೋಸಿಸ್ಟಮ್

ಇಸ್ರೇಲ್ ನ್ಯಾನೋ ಇಕೋಸಿಸ್ಟಮ್

ಗ್ಲೋಬಲ್ ಇನ್ನೋವೇಷನ್ ಅಲಯನ್ಸ್ (ಜಿಐಎ) ಪಾಲುದಾರರ ಅಧಿವೇಶನದಲ್ಲಿ ಇಸ್ರೇಲ್ ನ್ಯಾನೋ ಇಕೋಸಿಸ್ಟಮ್-ಕನೆಕ್ಟಿಂಗ್ ಅಕಾಡೆಮಿಯಾ & ಇಂಡಸ್ಟ್ರಿ ಇನ್ಫೇನಿಯನ್ ಮತ್ತು ಫ್ರಾವ್ನ್ಹೋಫರ್ ಸಂಸ್ಥೆಗಳು; ನ್ಯಾನೋಟೆಕ್ ಮೇಡ್ ಇನ್ ಜರ್ಮನಿ; ಜಪಾನ್- ಇಂಡಿಯಾ ಕೊ-ಇನ್ನೋವೇಷನ್ ಥ್ರೂ ಆರ್&ಡಿ; ಕಂ ಇನ್ನೋವೇಟ್ ವಿತ್ ದ ನೆದರ್ಲ್ಯಾಂಡ್ ನ್ಯಾನೋ ಇಕೋಸಿಸ್ಟಮ್; ನ್ಯಾನೋ ಕೆನಡಾ ಮತ್ತು ನಾರ್ತ್ ರೈನ್-ವೆಸ್ಟ್ಫಾಲಿಯಾಗಳು ಭಾಗಿಯಾಗಿದ್ದಾರೆ. ನಾರ್ತ್ ರೈನ್-ವೆಸ್ಟ್ಫಾಲಿಯಾ ರಾಜ್ಯದ ಆರ್ಥಿಕ ವ್ಯವಹಾರಗಳು, ನಾವೀನ್ಯತೆ, ಡಿಜಿಟಲೀಕರಣ ಮತ್ತು ವಿದ್ಯುತ್ (ಎನರ್ಜಿ) ಇಲಾಖೆಯ ಗೌರವಾನ್ವಿತ ಸಚಿವರಾಗಿರುವ ಪ್ರೊಫೆಸರ್ ಡಾ. ಆಂಡ್ರೆಯಾಸ್ ಪಿಂಕ್‌ವಾರ್ಟ್ ಅವರು ‘ನೇವಿಗೇಟಿಂಗ್ ನ್ಯಾನೋಟೆಕ್ನಾಲಜಿ ಫಾರ್ ಮ್ಯಾನುಫ್ಯಾಕ್ಚರಿಂಗ್' ಕುರಿತು ವಿಶೇಷ ಭಾಷಣ ನೀಡಲಿದ್ದಾರೆ.

2ನೇ ದಿನದ ಸಮ್ಮೇಳನದಲ್ಲಿ ಏನಿರುತ್ತೆ?

2ನೇ ದಿನದ ಸಮ್ಮೇಳನದಲ್ಲಿ ಏನಿರುತ್ತೆ?

2ನೇ ದಿನದ ಸಮ್ಮೇಳನದಲ್ಲಿ, ಬೆಂಗಳೂರು ಇಂಡಿಯಾ ನ್ಯಾನೋ ಇನ್ನೋವೇಷನ್ ಪ್ರಶಸ್ತಿ ಮತ್ತು ಕರ್ನಾಟಕ ಡಿಎಸ್‌ಟಿ ನ್ಯಾನೋಸೈನ್ಸ್ ಫೆಲೋಷಿಪ್ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದೇ ವೇಳೆ ತಮ್ಮ ಸಂಶೋಧನೆಗಳನ್ನು ಪ್ರಸ್ತುತಪಡಿಸಿದ 140ಕ್ಕೂ ಹೆಚ್ಚು ಯುವ ಸಂಶೋಧಕರು ಪ್ರದರ್ಶಿಸಿದ 10 ಅತ್ಯುತ್ತಮ ಪೋಸ್ಟರ್‌ಗಳಿಗೆ ಪೋಸ್ಟರ್ ಪ್ರಶಸ್ತಿ ಪ್ರದಾನ ಸಹ ನಡೆಯಲಿದೆ. ಅಲ್ಲದೆ, ಉತ್ಸಾಹಿ ಯುವ ಪದವಿ ವಿದ್ಯಾರ್ಥಿಗಳಿಗೆ ನ್ಯಾನೋ ಫಾರ್ ದಿ ಯಂಗ್ ವಿಶೇಷ ಕಾರ್ಯಕ್ರಮ ಮತ್ತು 23 ರಾಜ್ಯಗಳು ಹಾಗೂ 5 ಕೇಂದ್ರಾಡಳಿತ ಪ್ರದೇಶಗಳ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿರುವ ಮೊಟ್ಟಮೊದಲ ರಾಷ್ಟ್ರೀಯ ನ್ಯಾನೊಟೆಕ್ ರಸಪ್ರಶ್ನೆ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಪ್ರತಿನಿಧಿಗಳು ಬಿ2ಬಿ ಪಾಲುದಾರಿಕೆ ಪರಿಕರವನ್ನು ಬಳಸಿಕೊಂಡು ನೆಟ್ವರ್ಕ್ ಮಾಡಬಹುದು ಮತ್ತು ವರ್ಚುಯಲ್ ಕಾರ್ಯಕ್ರಮವು ಮುಕ್ತಾಯವಾದ 10 ದಿನಗಳ ನಂತರ ವೀಕ್ಷಣೆಗೆ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ www.bengaluruindianano.in ಗೆ ಭೇಟಿ ನೀಡಬಹುದು.

Recommended Video

ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬೊಮ್ಮಾಯಿ ಬಜೆಟ್ ನಲ್ಲಿ ಏನೇನಿದೆ? | Oneindia Kannada

English summary
12th Bengaluru India Nano, India’s flagship Nanotech Event focusing on Nanoscience & Nanotechnology was inaugurated by Shri Basavaraj S. Bommai, Hon’ble Chief Minister of Karnataka today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X