ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿಲ್ ನೆರವಿಗೆ ಮುಖೇಶ್ ಅಂಬಾನಿ, ದೊಡ್ಡ ವ್ಯವಹಾರದ 10 ಅಂಶಗಳು

|
Google Oneindia Kannada News

ಅನಿಲ್ ಅಂಬಾನಿ ನಿಯಂತ್ರಣದಲ್ಲಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ಷೇರುಗಳು ಶುಕ್ರವಾರ ಶೇ ಮೂವತ್ತೈದರಷ್ಟು ಏರಿಕೆ ಕಂಡಿತ್ತು. ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗಿದ್ದು ರಿಲಯನ್ಸ್ ಜಿಯೋ ಇನ್ಫೋಕಾಮ್ ಜತೆಗೆ ಮಾಡಿಕೊಂಡ ಒಪ್ಪಂದ. ತನ್ನ ವೈರ್ ಲೈಸ್ ಸಂವಹನದ ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡಿರುವುದು ಆ ಷೇರಿನ ಮೇಲೆ ಹೂಡಿಕೆದಾರರಿಗೆ ಆಸಕ್ತಿ ಮೂಡಿಸಿದೆ.

ಒಟ್ಟು ಇದ್ಯಾವ ಪ್ರಮಾಣದ ವ್ಯವಹಾರ ಎಂಬ ಬಗ್ಗೆ ಎರಡೂ ಕಂಪೆನಿಗಳು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಕೆಲವು ಬ್ಯಾಂಕ್ ಗಳ ಮೂಲದ ಪ್ರಕಾರ ಈ ವ್ಯವಹಾರದ ಪ್ರಮಾಣ 24ರಿಂದ 25 ಸಾವಿರ ಕೋಟಿ ರುಪಾಯಿ. ಇಂಥದ್ದೊಂದು ದೊಡ್ಡ ಡೀಲ್ ಅನ್ನು ಘೋಷಣೆ ಮಾಡಿದ್ದು ಗುರುವಾರದಂದು (ಡಿಸೆಂಬರ್ 28).

ಅನಿಲ್ ಅಂಬಾನಿ ಇಂದಿನ ಸ್ಥಿತಿಗೆ ಕುಜ-ಕೇತು-ಶನಿ ಹೇಗೆ ಕಾರಣ?ಅನಿಲ್ ಅಂಬಾನಿ ಇಂದಿನ ಸ್ಥಿತಿಗೆ ಕುಜ-ಕೇತು-ಶನಿ ಹೇಗೆ ಕಾರಣ?

ಡಿಸೆಂಬರ್ 28 ಎಂಬ ದಿನಕ್ಕೆ ಹಾಗೂ ಈ ಅಣ್ಣ- ತಮ್ಮಂದಿರು ಮತ್ತು ರಿಲಯನ್ಸ್ ಸಮೂಹಕ್ಕೆ ಮತ್ತೊಂದು ಸಂಬಂಧ ಇದೆ. ಆ ದಿನ ರಿಲಯನ್ಸ್ ನ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರ ಎಂಬತ್ತೈದನೇ ಜನ್ಮ ದಿನ. ಅಂದೇ ಅನಿಲ್ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಮಧ್ಯೆ ಖರೀದಿ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಘೋಷಣೆ ಹೊರಬಿದ್ದಿದೆ.

ಇಂಥ ದೊಡ್ಡ ವ್ಯವಹಾರದ ಹತ್ತು ಪ್ರಮುಖ ಅಂಶಗಳು ಇಲ್ಲಿವೆ.

ಆಸ್ತಿಗಳ ಮಾರಾಟ

ಆಸ್ತಿಗಳ ಮಾರಾಟ

1 ಈ ಮಾರಾಟದಲ್ಲಿ ತರಂಗಾತರ, ಮೊಬೈಲ್ ಗೋಪುರ, ಫೈಬರ್ ಆಪ್ಟಿಕ್ ಮತ್ತಿತರ ಟೆಲಿಕಾಂ ಮೂಲಸೌಕರ್ಯದ ರಿಲಯನ್ಸ್ ಕಮ್ಯೂನಿಕೇಷನ್ ನ ಆಸ್ತಿಗಳು ಹಾಗೂ ಸರಕಾರದಿಂದ ಪಡೆದಿರುವ ಇತರ ಅನುಮತಿಗಳು ಸಹ ಒಳಗೊಂಡಿದೆ.

ಸಾಲ ಪಾವತಿಸಲು ಬಳಕೆ

ಸಾಲ ಪಾವತಿಸಲು ಬಳಕೆ

2 ಈ ಒಪ್ಪಂದದಿಂದ ರಿಲಯನ್ಸ್ ಕಮ್ಯೂನಿಕೇಷನ್ಸ್ ಗೆ ಸ್ವಲ್ಪ ಮಟ್ಟಿಗೆ ನಿರಾಳ ಆದಂತಾಗಿದೆ. ಸದ್ಯಕ್ಕೆ ಆ ಕಂಪೆನಿಗೆ ನಲವತ್ತೈದು ಸಾವಿರ ಕೋಟಿ ಸಾಲ ಇದೆ. ಈಗ ಸಿಗುವ ಮೊತ್ತ ಸಂಪೂರ್ಣವಾಗಿ ಸಾಲ ಪಾವತಿಸಲು ಬಳಕೆಯಾಗುತ್ತದೆ.

ಮೂರು ತಿಂಗಳ ಪ್ರಕ್ರಿಯೆ

ಮೂರು ತಿಂಗಳ ಪ್ರಕ್ರಿಯೆ

3 ರಿಲಯನ್ಸ್ ಜಿಯೋ ಅತಿ ಹೆಚ್ಚಿನ ಮೊತ್ತಕ್ಕೆ ಈ ಆಸ್ತಿ ಖರೀದಿಗೆ ಮುಂದಾಗಿದೆ. ಒಟ್ಟಾರೆ ಈ ವ್ಯವಹಾರ 2018ರ ಜನವರಿ ಹಾಗೂ ಮಾರ್ಚ್ ಮಧ್ಯೆ ಮುಗಿಯುತ್ತದೆ ಎಂದು ರಿಲಯನ್ಸ್ ಕಮ್ಯುನಿಕೇಷನ್ಸ್ ನಿಂದ ಹೇಳಿಕೆ ನೀಡಲಾಗಿದೆ.

ಮಾರಾಟದಲ್ಲಿ ಏನೇನು ಒಳಗೊಂಡಿದೆ

ಮಾರಾಟದಲ್ಲಿ ಏನೇನು ಒಳಗೊಂಡಿದೆ

4 ರಿಲಯನ್ಸ್ ಕಮ್ಯೂನಿಕೇಷನ್ ನ ಈ ವ್ಯವಹಾರದಲ್ಲಿ 4G ತರಂಗಾಂತರ ವಿವಿಧ ಬ್ಯಾಂಡ್ ಗಳು, 43 ಸಾವಿರ ಮೊಬೈಲ್ ಗೋಪುರಗಳು, 1,78,000 ಕಿಲೋಮೀಟರ್ ನಷ್ಟು ಫೈಬರ್ ಹಾಗೂ 248 ಮೀಡಿಯಾ ಕವರೇಜ್ ನೋಡ್ಸ್ ಗಳನ್ನು ಮಾರಾಟ ಆಗುತ್ತಿದೆ.

ಗಾತ್ರ ಹೆಚ್ಚಿಸಿಕೊಳ್ಳಲಿರುವ ರಿಲಯನ್ಸ್ ಇಂಡಸ್ಟ್ರೀಸ್

ಗಾತ್ರ ಹೆಚ್ಚಿಸಿಕೊಳ್ಳಲಿರುವ ರಿಲಯನ್ಸ್ ಇಂಡಸ್ಟ್ರೀಸ್

5 ಈ ಟೆಲಿಕಾಂ ವ್ಯವಹಾರ ಪೂರ್ಣಗೊಂಡರೆ ರಿಲಯನ್ಸ್ ಇಂಡಸ್ತ್ರೀಸ್ ನ ಗಾತ್ರ ಮತ್ತೂ ಹೆಚ್ಚಾಗುತ್ತದೆ. ಈ ಹಿಂದೆ ಅಂದರೆ 2002ರಲ್ಲಿ ಮುಖೇಶ್ ಅಂಬಾನಿ ರಿಲಯನ್ಸ್ ಇನ್ಫೋಕಾಮ್ ಅಂತ ಇತ್ತು.

ಅಣ್ಣ-ತಮ್ಮಂದಿರ ಮಧ್ಯೆ ಬಿರುಕು

ಅಣ್ಣ-ತಮ್ಮಂದಿರ ಮಧ್ಯೆ ಬಿರುಕು

6 2005ರಲ್ಲಿ ಅಣ್ಣ-ತಮ್ಮಂದಿರ ಮಧ್ಯೆ ಬಿರುಕು ಬಂದ ಮೇಲೆ ರಿಲಯನ್ಸ್ ಇಂಡಸ್ಟ್ರೀಸ್ ಇಬ್ಬರ ಮಧ್ಯೆ ಹಂಚಿಹೋಯಿತು. ತೈಲ ಹಾಗೂ ಅನಿಲ ವ್ಯವಹಾರ ಮುಖೇಶ್ ಬಳಿ ಹಾಗೂ ಟೆಲಿಕಾಂ ಮತ್ತು ಪವರ್ ವ್ಯವಹಾರ ಅನಿಲ್ ಅಂಬಾನಿ ತೆಗೆದುಕೊಂಡರು.

ಮತ್ತೆ ಟೆಲಿಕಾಂ ವಲಯಕ್ಕೆ ಕಾಲಿಟ್ಟ ಮುಖೇಶ್

ಮತ್ತೆ ಟೆಲಿಕಾಂ ವಲಯಕ್ಕೆ ಕಾಲಿಟ್ಟ ಮುಖೇಶ್

7 2016ರ ಸೆಪ್ಟೆಂಬರ್ ನಲ್ಲಿ ರಿಲಯನ್ಸ್ ಜಿಯೋ ಮೂಲಕ ಮುಖೇಶ್ ಅಂಬಾನಿ ಮತ್ತೆ ಟೆಲಿಕಾಂ ವಲಯಕ್ಕೆ ಕಾಲಿಟ್ಟರು. ಉಚಿತ ಕರೆಗಳು, ಅಗ್ಗದ ಡೇಟಾ ಪ್ಲಾನ್ ಗಳ ಮೂಲಕ ಇತರ ಟೆಲಿಕಾಂ ಕಂಪೆನಿಗಳಿಗೆ ಭಾರೀ ಹೊಡೆತ ಬೀಳುವಂತೆ ಮಾಡಿತು.

ವೇಗವಾಗಿ ಬೆಳೆಯುತ್ತಿರುವ ಕಂಪೆನಿ

ವೇಗವಾಗಿ ಬೆಳೆಯುತ್ತಿರುವ ಕಂಪೆನಿ

8 ಹದಿನೈದು ಕೋಟಿ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಜಿಯೋ ಭಾರತದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಲಿಕಾಂ ಕಂಪೆನಿ. ಈಗ ರಿಲಯನ್ಸ್ ಕಮ್ಯೂನಿಕೇಷನ್ ಖರೀದಿಸುವ ಮೂಲಕ ನಾಲ್ಕು ಬ್ಯಾಂಡ್ ನ ತರಂಗಾಂತರ ಮತ್ತು ನಲವತ್ಮೂರು ಸಾವಿರ ಮೊಬೈಲ್ ಗೋಪುರಗಳನ್ನು ಹಾಗೂ ದೇಶದಾದ್ಯಂತ ಆಪ್ಟಿಕ್ ನೆಟ್ ವರ್ಕ್ ನ ಪಡೆಯುತ್ತದೆ.

ಪರಿಣಾಮಕಾರಿ ಸೇವೆ

ಪರಿಣಾಮಕಾರಿ ಸೇವೆ

9 ರಿಲಯನ್ಸ್ ಕಮ್ಯೂನಿಕೇಷನ್ ನ ಆಸ್ತಿ ಖರೀದಿಯಿಂದ ಜಿಯೋಗೆ ತುಂಬ ದೊಡ್ಡ ಮಟ್ಟದ ಫಾಯಿದೆ ಆಗಲಿದೆ. ವೈರ್ ಲೆಸ್ (ನಿಸ್ತಂತು ಸೇವೆ) ಮತ್ತು ಫೈಬರ್, ಎಂಟರ್ ಪ್ರೈಸ್ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸಬಹುದು ಎಂದು ಆರ್ ಜೆಐಎಲ್ (ರಿಲಯನ್ಸ್ ಜಿಯೋ) ಹೇಳಿಕೆ ನೀಡಿದೆ.

ಏರಿಕೆ ಕಂಡ ಷೇರುಗಳು

ಏರಿಕೆ ಕಂಡ ಷೇರುಗಳು

10 ಈ ವಾರದ ಆರಂಭದಲ್ಲಿ ಸಾಲ ತೀರಿಸುವ ಬಗ್ಗೆ ರಿಲಯನ್ಸ್ ಕಮ್ಯುನಿಕೇಷನ್ ತಿಳಿಸಿದೆ. ಆ ನಂತರ ಷೇರು ಮಾರುಕಟ್ಟೆಯಲ್ಲಿ ಆ ಕಂಪೆನಿಯ ಷೇರುಗಳು ಶೇ ಇನ್ನೂರೈವತ್ತರಷ್ಟು ಏರಿಕೆ ಕಂಡಿದೆ.

English summary
Anil Ambani controlled Reliance communication assets purchasing by Mukesh Ambani promoted Reliance Jio. Approximately it is the deal of 24 to 25 thousand crore. Here is the highlight points of deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X