ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಕೋಟಿ ಭಾರತೀಯರ ಕಾರ್ಡ್ ಮಾಹಿತಿ ಸೋರಿಕೆ

|
Google Oneindia Kannada News

ಬೆಂಗಳೂರು, ಜನವರಿ 5: 10 ಕೋಟಿಗೂ ಅಧಿಕ ಭಾರತೀಯರ ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿಗಳು ಸೋರಿಕೆಯಾಗಿದ್ದು, ಡಾರ್ಕ್ ವೆಬ್ ನಲ್ಲಿ ಬಿಕರಿಯಾಗುತ್ತಿವೆ ಎಂದು ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸಂಶೋಧಕ ರಾಜಶೇಖರ್ ರಜಾಹರಿಯಾ ಅವರ ಸಂಸ್ಥೆ ವರದಿ ಮಾಡಿದೆ.

ಬೆಂಗಳೂರು ಮೂಲದ ಡಿಜಿಟಲ್ ಪೇಮೆಂಟ್ ಗೇಟ್ ವೇ ಜಸ್ ಪೇ (JusPay) ಸಂಸ್ಥೆಯ ಸರ್ವರ್ ಗಳಿಗೆ ಕನ್ನ ಹಾಕಿ ಮಾಹಿತಿಯನ್ನು ಕದಿಯಲಾಗಿದ್ದು, ಡಾರ್ಕ್ ವೆಬ್ ಗಳಲ್ಲಿ ಮಾರಾಟಕ್ಕಿಡಲಾಗಿದೆ ಎಂದು ರಾಜಶೇಖರ್ ಹೇಳಿದ್ದಾರೆ.

ಕಳೆದ 1 ವರ್ಷದಲ್ಲಿ ಭಾರತದ ಶೇಕಡಾ 93ರಷ್ಟು ಸಂಸ್ಥೆಗಳ ಮೇಲೆ ಸೈಬರ್ ದಾಳಿಕಳೆದ 1 ವರ್ಷದಲ್ಲಿ ಭಾರತದ ಶೇಕಡಾ 93ರಷ್ಟು ಸಂಸ್ಥೆಗಳ ಮೇಲೆ ಸೈಬರ್ ದಾಳಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಸ್ ಪೇ ಸಂಸ್ಥೆ ವಕ್ತಾರರು, ಆಗಸ್ಟ್ 18, 2020ರಂದು ನಮ್ಮ ಸಂಸ್ಥೆ ಸರ್ವರ್ ಗಳ ಮೇಲೆ ದಾಳಿಯಾಗಿದ್ದು ನಿಜ. ಆದರೆ, ಯಾವುದೇ ಗ್ರಾಹಕರ ಕ್ರೆಡಿಟ್ ಕಾರ್ಡ್ ವಿವರ, ಹಣಕಾಸು ವ್ಯವಹಾರ ಮಾಹಿತಿ ಸೋರಿಕೆಯಾಗಿಲ್ಲ, ಒಂದು ವೇಳೆ ಸೈಬರ್ ದಾಳಿಯಾಗಿ ಮಾಹಿತಿ ಸೋರಿಕೆಯಾಗಿದ್ದರೂ 10ಕೋಟಿ ಪ್ರಮಾಣದಲ್ಲಂತೂ ಸಾಧ್ಯವಿಲ್ಲ ಎಂದಿದ್ದಾರೆ.

10 crore Indians card data selling on Dark Web: Researcher

ಕೆಲವು ಇಮೇಲ್ ಸಂದೇಶ, ಫೋನ್ ನಂಬರ್ ಕದ್ದಿದ್ದಾರೆ. ಆದರೆ, ಈ ಬಗ್ಗೆ ಅಲರ್ಟ್ ಸಿಕ್ಕ ತಕ್ಷಣವೇ ಆ ಗ್ರಾಹಕರಿಗೆ ತಿಳಿಸಿ ಸೂಕ್ತ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಆದರೆ, ರಾಜಶೇಖರ್ ಅವರು ತಮ್ಮ ಮಾಹಿತಿ ನಿಖರವಾಗಿದ್ದು, ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೂಲಕ ಹಣಕಾಸು ವ್ಯವಹಾರ ನಡೆದಿದ್ದು, ಡಾರ್ಕ್ ವೆಬ್ ನಲ್ಲಿ ಮಾಹಿತಿ ಖರೀದಿ ನಡೆದಿದೆ.

Payment Card Industry Data Security Standard ಬಳಸುವ ಜಸ್ ಪೇ ಮಾಹಿತಿ ಕದಿಯುವುದು ಸುಲಭವಾಗಿದ್ದು, ಕಾರ್ಡ್ ಫಿಂಗರ್ ಪ್ರಿಂಟ್ ರೂಪಿಸಲು ಹ್ಯಾಶ್ ಅಲ್ಗಾರಿಥಂ ಬಳಸಿ ಸುರಕ್ಷತಾ ಅಡೆ ತಡೆಗಳನ್ನು ಡಿಕ್ರಿಪ್ಟ್ ಮಾಡಬಹುದಾಗಿದೆ. ಹೀಗಾಗಿ, ಮುಚ್ಚಲ್ಪಟ್ಟ ನಂಬರ್ ಗಳನ್ನು ಪೂರ್ತಿಯಾಗಿ ಕಾಣುವಂತೆ ಮಾಡಬಹುದು ಎಂದಿದ್ದಾರೆ. ಆದರೆ, 16 ಅಂಕಿಗಳ ಕಾರ್ಡ್ ನಂಬರ್ ಸೋರಿಕೆಯಾಗಿಲ್ಲ ಎಂದು ಜಸ್ ಪೇ ಹೇಳಿದೆ.

English summary
Independent cybersecurity researcher Rajshekhar Rajaharia claimed on Sunday that data of nearly 10 crore credit and debit card holders in the country is being sold for an undisclosed amount on the Dark Web.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X