ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಕಚೇರಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ

|
Google Oneindia Kannada News

ನವದೆಹಲಿ, ಜನವರಿ 03 : ಅಂಚೆ ಕಚೇರಿಯಲ್ಲಿ ಕಡಿಮೆ ಅವಧಿಗೆ ಹೂಡಿಕೆ ಮಾಡುವ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಏರಿಕೆ ಮಾಡಲಾಗಿದೆ.

ಆದರೆ, ಸಾರ್ವಜನಿಕ ಪಿಂಚಣಿ ಯೋಜನೆ(ಪಿ.ಪಿ.ಎಫ್.), ರಾಷ್ಟ್ರೀಯ ಉಳಿತಾಯ ಯೋಜನೆ(ಎನ್.ಎಸ್.ಎಸ್.), ಸುಕನ್ಯ ಸಮೃದ್ಧಿ ಯೋಜನೆ ಸೇರಿದಂತೆ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಡಿಸೆಂಬರ್ 31, 2018ರಿಂದ ಜಾರಿಗೆ ಬರುವಂತೆ ವಿತ್ತ ಸಚಿವಾಲಯವು ಹೊರಡಿಸಿದ ಪ್ರಕಟಣೆಯಂತೆ, ಅಂಚೆ ಕಚೇರಿಯಲ್ಲಿನ 1 ವರ್ಷ ಅವಧಿಯ ಸಣ್ಣ ಉಳಿತಾಯ ಯೋಜನೆಯ ಠೇವಣಿಯ ಮೇಲಿನ ಬಡ್ಡಿದರವನ್ನು ಶೇ7%ಕ್ಕೆ ಏರಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿ 6.9%ರಷ್ಟು ಬಡ್ಡಿದರವಿತ್ತು.

ಪಾರ್ಸೆಲ್ ನೆಟ್ವರ್ಕ್ ಹೆಚ್ಚಿಸಲು ವೆಬ್ ತಾಣ ತೆರೆದ ಇಂಡಿಯಾ ಪೋಸ್ಟ್ ಪಾರ್ಸೆಲ್ ನೆಟ್ವರ್ಕ್ ಹೆಚ್ಚಿಸಲು ವೆಬ್ ತಾಣ ತೆರೆದ ಇಂಡಿಯಾ ಪೋಸ್ಟ್

ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ ಪತ್ರ ಮತ್ತು ಇನ್ನಿತರ ನಿರ್ದಿಷ್ಟ ಅವಧಿ ಠೇವಣಿ ಯೋಜನೆಗಳನ್ನು ಸರ್ಕಾರ ಒಂದೇ ಯೋಜನೆಯಡಿ ವಿಲೀನಗೊಳಿಸಲು ಚಿಂತಿಸಿದ ಹಿನ್ನೆಲೆಯಲ್ಲಿ ಪಿಪಿಎಫ್ ಖಾತೆಯಲ್ಲಿ ಈ ಮಹತ್ವದ ಬದಲಾವಣೆ ತರುವ ಸಾಧ್ಯತೆಯೂ ಇದೆ.

ತುರ್ತು ಸ್ಥಿತಿಯಲ್ಲಿ ಪಿಪಿಎಫ್ ಖಾತೆ ಮುಚ್ಚಲು ಅವಕಾಶವಿದೆಯಾದರೂ ಅದಕ್ಕೆ ದಂಡ ತೆರಬೇಕಾದ ಅನಿವಾರ್ಯತೆ ಇರುತ್ತದೆ. ರಾಷ್ಟ್ರೀಯ ಉಳಿತಾಯ ಪತ್ರದ ಹಣವನ್ನು ವಾಪಸ್‌ ಪಡೆಯುವ ನಿಯಮಗಳು ತುಂಬಾ ಕಠಿಣವಾಗಿವೆ.

ಕೆಲವು ಯೋಜನೆಗಳ ಬಡ್ಡಿದರ ಇಳಿಕೆ

ಕೆಲವು ಯೋಜನೆಗಳ ಬಡ್ಡಿದರ ಇಳಿಕೆ

ಆದರೆ, 3 ವರ್ಷ ಅವಧಿಯ ಹೂಡಿಕೆ ಮೇಲಿನ ಬಡ್ಡಿದರವನ್ನು ಶೇ 7.2% ರಿಂದ 7ಕ್ಕೆ ಇಳಿಸಲಾಗಿದೆ.

ಆದರೆ, 2 ಹಾಗೂ 5 ವರ್ಷ ಅವಧಿಯ ಹೂಡಿಕೆ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶೇ 7 ಹಾಗೂ ಶೇ 7.8ರಷ್ಟೇ ಇದೆ. ಜನಪ್ರಿಯ ಯೋಜನೆಯಾದ 5 ವರ್ಷಗಳ ಅವಧಿಯ ಹೂಡಿಕೆ ಮೇಲಿನ ಬಡ್ಡಿದರವನ್ನು ಶೇ 7.3ಕ್ಕೆ ಉಳಿಸಿಕೊಳ್ಳಲಾಗಿದೆ.

ಹಣಕಾಸು ಸೇವೆ ಒದಗಿಸುವ ಅಂಚೆ ಇಲಾಖೆಯ ಜೀವನಾಡಿ ಡಾಕ್ ಸೇವಕ್ ಹಣಕಾಸು ಸೇವೆ ಒದಗಿಸುವ ಅಂಚೆ ಇಲಾಖೆಯ ಜೀವನಾಡಿ ಡಾಕ್ ಸೇವಕ್

ಸಾರ್ವಜನಿಕ ಪಿಂಚಣಿ ಯೋಜನೆ(ಪಿ.ಪಿ.ಎಫ್.)

ಸಾರ್ವಜನಿಕ ಪಿಂಚಣಿ ಯೋಜನೆ(ಪಿ.ಪಿ.ಎಫ್.)

ಸಾರ್ವಜನಿಕ ಪಿಂಚಣಿ ಯೋಜನೆ(ಪಿ.ಪಿ.ಎಫ್.) ಹಾಗೂ 5 ವರ್ಷ ಅವಧಿಯ ರಾಷ್ಟ್ರೀಯ ಉಳಿತಾಯ ಪತ್ರ(ಎನ್ಎಸ್ ಸಿ) ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಶೇ 8ರಷ್ಟೇ ಇದೆ. 5 ವರ್ಷಗಳ ತಿಂಗಳ ಆದಾಯ ಖಾತೆ ಶೇ 7.7ರಷ್ಟು ತಂದು ಕೊಡಲಿದೆ.

ಹಿರಿಯ ನಾಗರಿಕರ ಉಳಿತಾಯ ಖಾತೆ, ಜನಪ್ರಿಯ ಯೋಜನೆಯಾದ ಸುಕನ್ಯಾ ಸಮೃದ್ಧಿ ಖಾತೆ ಮೇಲಿನ ಬಡ್ಡಿದರ ಶೇ 8.7 ಹಾಗೂ ಶೇ 8.5ರಷ್ಟೇ ಇದೆ. 2018ರಲ್ಲಿ ಎರಡು ಬಾರಿ ಬಡ್ಡಿದರವನ್ನು ಆರ್ ಬಿಐ ಏರಿಕೆ ಮಾಡಿತ್ತು. ಇದರಿಂದ ಪಿಪಿಎಫ್ ಖಾತೆದಾರರಿಗೆ ಅನುಕೂಲವಾಗಿತ್ತು.

ಭವಿಷ್ಯ ನಿಧಿ ವಿಥ್ ಡ್ರಾ ನಿಯಮದಲ್ಲಿ ಏನಿದು ಹೊಸ ಬದಲಾವಣೆ ಭವಿಷ್ಯ ನಿಧಿ ವಿಥ್ ಡ್ರಾ ನಿಯಮದಲ್ಲಿ ಏನಿದು ಹೊಸ ಬದಲಾವಣೆ

ಪಿಪಿಎಫ್ ತೆರಿಗೆ ಮುಕ್ತ

ಪಿಪಿಎಫ್ ತೆರಿಗೆ ಮುಕ್ತ

ಪಿಪಿಎಫ್ ಗೆ ನೀಡುವ ಮೊತ್ತ ತೆರಿಗೆ ಮುಕ್ತವಾಗಲಿದೆ. ವಿಥ್ ಡ್ರಾ (ನಿವೃತ್ತಿಯಾಗುವಾಗ) ಸಮಯದಲ್ಲೂ ಪಿಪಿಎಫ್ ಮೊತ್ತದ ಮೇಲೆ ಯಾವುದೇ ತೆರಿಗೆ ಹಾಕುವುದಿಲ್ಲ. 15,000 ರು ಪ್ರತಿ ತಿಂಗಳು ಆದಾಯ ಹೊಂದಿರುವ ಸಂಬಳದಾರರು ಇಪಿಎಫ್ ನ ತೆರಿಗೆಗೆ ಒಳಪಡುವುದಿಲ್ಲ

ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿರುತ್ತದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ ಎನ್ನಲಾಗಿತ್ತು.

ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆ

ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಣೆ

ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರಗಳನ್ನು ಪ್ರತಿ ಮೂರು ತಿಂಗಳುಗಳಿಗೊಮ್ಮೆ ಪರಿಷ್ಕರಿಸಲಾಗುತ್ತಿದೆ. ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ ಪತ್ರ ಮತ್ತು ಇನ್ನಿತರ ನಿರ್ದಿಷ್ಟ ಅವಧಿ ಠೇವಣಿ ಯೋಜನೆಗಳ ಬಡ್ಡಿದರವನ್ನು 40 ಮೂಲಾಂಶ(ಬಿಪಿಎಸ್) ನಷ್ಟು ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಇಳಿಕೆ ಮಾಡಿ, ಹೂಡಿಕೆದಾರರನ್ನು ಆಕರ್ಷಿಸಲಾಯಿತು.

English summary
The government has revised the interest rate on post office time deposit schemes while leaving rates of other popular small savings schemes like the PPF (Public Provident Fund), Sukanya Samriddhi account and Senior Citizen Savings schemes unchanged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X