• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಎಸ್ ಟಿಗೆ ಒಂದು ವರ್ಷ; ಹರ್ಷವೋ ದುಃಖವೋ ಯಾರ ಅನುಭವ ಏನು?

|

ಇಂಗ್ಲಿಷಿನಲ್ಲಿ ಅದನ್ನು 'ಸ್ಯಾಚುರೇಷನ್ ಸ್ಟೇಜ್' ಅಂತ ಕರೆಯುತ್ತಾರೆ. ಕನ್ನಡದಲ್ಲಿ ಏನೆನ್ನಬಹುದೋ ಗೊತ್ತಿಲ್ಲ. ಆದರೆ ಯಾವುದೇ ವಸ್ತು, ವಿಷಯ, ವ್ಯವಹಾರ ಗರಿಷ್ಠ ಮಟ್ಟ ಅಂದರೆ ಎಲ್ಲಿಗೆ- ಎಷ್ಟು ಮುಟ್ಟಬಹುದೋ ಅಷ್ಟು ತಲುಪಿದೆ ಅಂತ ಮಾತ್ರ ಗೊತ್ತು. ಆ ನಂತರ ಇಳಿಮುಖ ಆಗಬೇಕೇ ವಿನಾ ಮೇಲ್ಮುಖದತ್ತ ಸಾಗುವುದಿಲ್ಲ ಅನ್ನೋದು ಅರ್ಥಶಾಸ್ತ್ರದ ವ್ಯಾಖ್ಯೆ.

ದೊಡ್ಡ ದೊಡ್ಡ ಶಾಪಿಂಗ್ ಮಾಲ್ ಗಳಲ್ಲಿ ಅಂಥ ವ್ಯವಹಾರ ಇಲ್ಲ ಅಂತಾರೆ. ವ್ಯವಹಾರವೇ ಡಲ್ಲು ಅನ್ನೋ ಮಾತು ಸಹಜ ಆಗಿಬಿಟ್ಟಿದೆ. 'ಎಷ್ಟು ಕಡೆ ರೆಸ್ಯೂಮೆ ಕೊಟ್ಟು ಬಂದೆ, ಎಲ್ಲೂ ಕೆಲಸ ಖಾಲಿ ಇಲ್ಲ' ಅನ್ನೋ ಮಾತು ಕೇಳಿಬರ್ತಿದೆ. ಹಾಗಿದ್ದರೆ ಇದೆಲ್ಲ ಯಾವುದರ ಪರಿಣಾಮ? ನಿಜಕ್ಕೂ ಪರಿಸ್ಥಿತಿ ಹೀಗಿದೆಯಾ?

ಕರಕುಶಲ ವಸ್ತು ಮೇಲಿನ ಜಿಎಸ್‌ಟಿ ಹಿಂಪಡೆಯದ ಮೋದಿ: ಪ್ರಸನ್ನ ಅಸಮಾಧಾನ

ಒಂದು ಕಡೆ ಮಾರುತಿ ಸುಜುಕಿ ಕಂಪೆನಿಯವರು ತಮ್ಮ ರೀ ಲಾಂಚ್ ಆದ ಹೊಸ ಕಾರು ಒಂದು ಲಕ್ಷ ಯೂನಿಟ್ ಮಾರಾಟ ಆಗಿದೆ ಎನ್ನುತ್ತಾರೆ. ಮತ್ತೊಂದು ಕಡೆ ಒಟ್ಟಾರೆಯಾಗಿ ಕಾರು ಮಾರಾಟ ಮಾರುಕಟ್ಟೆಯೇ ಬಿದ್ದುಹೋಗಿದೆ ಎಂಬ ಸುದ್ದಿ ಬರುತ್ತದೆ. ದೊಡ್ಡ ಹೋಟೆಲ್ ಗಳಲ್ಲಿ ವ್ಯಾಪಾರ ಕಡಿಮೆ ಆಗಿದೆ ಎಂದು ಅಲವತ್ತುಕೊಂಡರೆ, ಪರ್ಯಾಯವಾಗಿ ಏನು ಯೋಚಿಸಿ ಮಾಡಬೇಕೋ ಅದನ್ನು ಮಾಡಿದ್ದೀವಿ ಎಂಬ ಉತ್ತರ ಮತ್ತೊಂದು ಕಡೆ.

ನಾನಾ ವಲಯಗಳು ಚೇತರಿಸಿಕೊಳ್ಳುತ್ತವೆ

ನಾನಾ ವಲಯಗಳು ಚೇತರಿಸಿಕೊಳ್ಳುತ್ತವೆ

ಇಡೀ ಅರ್ಥ ವ್ಯವಸ್ಥೆಯೇ ಒಂದು ಚಕ್ರ. ಸರಕಾರಿ ನೌಕರರಿಗೆ ದೊಡ್ಡ ಪ್ರಮಾಣದಲ್ಲಿ ಸಂಬಳ ಜಾಸ್ತಿಯಾಯಿತು ಅಂದುಕೊಳ್ಳಿ. ಹೋಟೆಲ್ ಉದ್ಯಮ, ಕಾರು- ಸ್ಕೂಟರ್- ಬೈಕ್ ಕಂಪೆನಿಗಳು, ಚಿನ್ನಾಭರಣ ಮಾರುವ ಜ್ಯುವೆಲ್ಲರಿ ಶಾಪ್ ಗಳು, ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ, ಇನ್ಷೂರೆನ್ಸ್ ಪಾಲಿಸಿಗಳು, ರಿಯಲ್ ಎಸ್ಟೇಟ್, ಪೀಠೋಪಕರಣ, ಗೃಹಬಳಕೆ ಹಾಗೂ ಗೃಹಾಲಂಕಾರ ವಸ್ತುಗಳು ಹೀಗೆ ನಾನಾ ವಲಯಗಳು ಚೇತರಿಸಿಕೊಳ್ಳುತ್ತವೆ.

ಒಬ್ಬೊಬ್ಬರ ಅನುಭವ ಒಂದೊಂದು ರೀತಿ

ಒಬ್ಬೊಬ್ಬರ ಅನುಭವ ಒಂದೊಂದು ರೀತಿ

ಅದೇ ರೀತಿ ಯಾವುದೇ ತೆರಿಗೆ ಹೆಚ್ಚಾಗುವುದೋ ಅಥವಾ ಕಡಿಮೆ ಆಗುವುದೋ ಅಥವಾ ಹೊಸದಾಗಿ ಆಗುವುದೋ ಆದರೆ ಅದರಿಂದಲೂ ಖರೀದಿ ಆಸಕ್ತಿಯ ಮೇಲೆ ಪರಿಣಾಮ ಆಗುತ್ತದೆ. ಇನ್ನು ಐದು ದಿನ ಕಳೆದರೆ ಜಿಎಸ್ ಟಿ ಜಾರಿಗೆ ಬಂದು ಒಂದು ವರ್ಷ ಪೂರ್ಣವಾಗುತ್ತದೆ. ಇಂಥ ಸಂದರ್ಭದಲ್ಲಿ ಒಬ್ಬೊಬ್ಬರ ಅನುಭವ ಒಂದೊಂದು ರೀತಿ ಇದೆ.

ಶೇ ಹದಿನೆಂಟರಷ್ಟು ತೆರಿಗೆ ಪಾವತಿ

ಶೇ ಹದಿನೆಂಟರಷ್ಟು ತೆರಿಗೆ ಪಾವತಿ

ಈ ಲೇಖನ ಬರೆಯುತ್ತಿರುವ ಲೇಖಕನಿಗೆ ರೆಸ್ಟೋರೆಂಟ್ ನಲ್ಲಿ ಶೇ ಹದಿನೆಂಟರಷ್ಟು ತೆರಿಗೆ ಪಾವತಿಸುವಾಗ ಬಹಳ ಸಿಟ್ಟು ಬಂದಿತ್ತು. ಇನ್ನೂ ವಿಚಿತ್ರ ಏನೆಂದರೆ, ಆ ರೆಸ್ಟೋರೆಂಟ್ ನಲ್ಲಿ ಐದು ಪರ್ಸೆಂಟ್ ಸೇವಾ ತೆರಿಗೆಯೂ ಹಾಕಿದ್ದರು. ಅಲ್ಲಿಗೆ ಹೆಚ್ಚು ಕಡಿಮೆ ಶೇ ಇಪ್ಪತ್ಮೂರರಷ್ಟು ತೆರಿಗೆ ಪಾವತಿಸಿದಂತೆ. ಇದರ ಹೊರತುಪಡಿಸಿ, ಆದಾಯ ತೆರಿಗೆಯಲ್ಲೇನೂ ದೊಡ್ಡ ಫಾಯಿದೆ ಮಾಡಿಕೊಟ್ಟಿರಲಿಲ್ಲ.

ಜಿಎಸ್ ಟಿಯಿಂದ ಬದಲಾವಣೆ ಆಗಿರುವುದಂತೂ ಸತ್ಯ

ಜಿಎಸ್ ಟಿಯಿಂದ ಬದಲಾವಣೆ ಆಗಿರುವುದಂತೂ ಸತ್ಯ

ಇನ್ನು ಕೆಲವು ವಸ್ತುಗಳಿಗೆ ಸಿಕ್ಕಾಪಟ್ಟೆ ತೆರಿಗೆ ಕಟ್ಟುತ್ತಿದ್ದರೂ ಎಷ್ಟು ಕಟ್ಟುತ್ತಿದ್ದೆವು ಎಂಬ ಬಗ್ಗೆ ತಿಳಿವಳಿಕೆ ಇರಲಿಲ್ಲ. ಜಿಎಸ್ ಟಿ ಬಂದ ಮೇಲೆ ಸ್ಪಷ್ಟವಾಗಿ ಗೊತ್ತಾಗಲು ಶುರುವಾಯಿತು. ತೆರಿಗೆ ಕದಿಯುತ್ತಿದ್ದವರು ದೊಡ್ಡ ಸಂಖ್ಯೆಯಲ್ಲಿ ಇದ್ದರು ಎಂಬ ಸಂಗತಿ ಕೂಡ ಗೊತ್ತಾದದ್ದು ಆಮೇಲೆಯೇ. ಒಟ್ಟಿನಲ್ಲಿ ಈ ಒಂದು ವರ್ಷ ನಮ್ಮ ಬದುಕಿನಲ್ಲಿ ಜಿಎಸ್ ಟಿಯಿಂದ ಬದಲಾವಣೆ ಆಗಿರುವುದಂತೂ ಸತ್ಯ. ಹಾಗೆ ನಿಮ್ಮ ಅನುಭವಕ್ಕೆ ಬಂದದ್ದು ಓದುಗರ ಜತೆಗೆ ಹಂಚಿಕೊಳ್ಳಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
GST (Goods and Service Tax) implemented in July 1st, 2017. Now 1 year completed. So, what are the plus and minus of GST? Series will continue and readers can also participate in this discussion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more