• search
 • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಜಮೀರ್ ಅಹ್ಮದ್ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ: ಎಚ್ಡಿಕೆ

|

ಬೀದರ್, ಏಪ್ರಿಲ್ 7: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬಸವಕಲ್ಯಾಣದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ ನಂತರ ಮಾತನಾಡುತ್ತಿದ್ದ ಎಚ್ಡಿಕೆ, "ಪಾಪ ಅವನು ಹುಟ್ಟಿದಾಗಲೇ ಶ್ರೀಮಂತಿಕೆಯಲ್ಲೇ ಹುಟ್ಟಿ ಬಂದವನು. ಹಣದ ಮೇಲೆ ಮಲಗಿಕೊಂಡೇ ಬಂದಿರುವವರು"ಎಂದು ಕುಮಾರಸ್ವಾಮಿ ಹೇಳಿದರು.

 ಎಲ್ಲೋ ಇದ್ದ ಜಮೀರ್ ಅಹ್ಮದ್ ರಾಜ್ಯ ರಾಜಕಾರಣದಲ್ಲಿ ಸೃಷ್ಟಿಸಿದ ಅಚ್ಚರಿಯ ಹಿಂದಿನ ಆ ರಾಜಕೀಯ ಶಕ್ತಿ! ಎಲ್ಲೋ ಇದ್ದ ಜಮೀರ್ ಅಹ್ಮದ್ ರಾಜ್ಯ ರಾಜಕಾರಣದಲ್ಲಿ ಸೃಷ್ಟಿಸಿದ ಅಚ್ಚರಿಯ ಹಿಂದಿನ ಆ ರಾಜಕೀಯ ಶಕ್ತಿ!

"ಹಾಗಾಗಿ ಜಮೀರ್ ಬಗ್ಗೆ ಮಾತಾನಾಡುವಷ್ಟು ಶಕ್ತಿಯನ್ನು ನಾನು ಬೆಳೆಸಿಕೊಂಡಿಲ್ಲ. 2004ರಲ್ಲಿ ಚಾಮರಾಜಪೇಟೆಯಿಂದ ಅವನನ್ನು ಗೆಲ್ಲಿಸಿದ್ದು ಬಿಜೆಪಿಯೋ, ನಾವೋ"ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

"ಚಾಮರಾಜಪೇಟೆಯಲ್ಲಿ ಆತ ದೊಡ್ಡ ಲೀಡರ್ ಎಂದು ನಿಲ್ಲಿಸಿದ್ವಾ, ಆ ಕ್ಷೇತ್ರದ ಎಷ್ಟೋ ಮನೆಗೆ ನನ್ನನ್ನು ಕರೆದುಕೊಂಡು ಹೋಗಿದ್ದರು ಎನ್ನುವುದನ್ನು ಆತ ಅರಿಯಬೇಕು. ಮೂರುಮೂರು ಮಹಡಿ ಹತ್ತಿಕೊಂಡು ನಾನು ಹೋಗಿದ್ದೆ"ಎಂದು ಕುಮಾರಸ್ವಾಮಿ ಹೇಳಿದರು.

"ಅಂತಹ ವ್ಯಕ್ತಿಗಳಿಗೆ ಪಕ್ಷ ಕಟ್ಟಿ ಅಭ್ಯಾಸವಿಲ್ಲ. ಯಾರನ್ನೋ ಹಿಡಿದುಕೊಂಡು ರಾಜಕಾರಣ ಮಾಡುತ್ತವೆ. ನಾನು ಅವರ ಲೆವೆಲ್ ಗೆ ಇಳಿದು ಮಾತನಾಡಲು ಆಗುವುದಿಲ್ಲ"ಎಂದು ಜಮೀರ್ ವಿರುದ್ದ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರ ವಕ್ರದೃಷ್ಟಿ ಕ್ಷೇತ್ರಕ್ಕೆ ಬಿದ್ದಿದೆ; ಎಚ್‌ಡಿಕೆಕಾಂಗ್ರೆಸ್ ಮುಖಂಡರ ವಕ್ರದೃಷ್ಟಿ ಕ್ಷೇತ್ರಕ್ಕೆ ಬಿದ್ದಿದೆ; ಎಚ್‌ಡಿಕೆ

   ವಿರೋಧ ಪಕ್ಷ BSY ಬೆನ್ನಿಗೆ, ನಾನೇ ರಾಜ್ಯದಲ್ಲಿ ವಿರೋಧ ಪಕ್ಷ..! | Oneindia Kannada

   "ಈ ಹಿಂದೆ ನಮ್ಮ ಪಕ್ಷದಲ್ಲಿ ಇದ್ದಾಗ, ಜೆಡಿಎಸ್ ಪಕ್ಷ ನಾಯಕರನ್ನು ಹುಟ್ಟು ಹಾಕುವ ಫ್ಯಾಕ್ಟರಿ ಎಂದು ಹೇಳಿದ್ದರು, ಈಗ ಈ ರೀತಿ ಉಲ್ಟಾ ಹೊಡೆಯುತ್ತವೆ. ಹಾಗಾಗಿ, ಆ ವ್ಯಕ್ತಿಯ ಜೊತೆಗೆ ಯಾವ ಚರ್ಚೆಯ ಅವಶ್ಯಕತೆಯೂ ನನಗಿಲ್ಲ"ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

   English summary
   Why I Should Comment On Congress MLA Zameer Ahmed Khan Statement, Former CM H D Kumaraswamy Reaction.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X