ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಹಸುವಿನ ಹಾಲಿನ ಬೆಲೆ ಲೀಟರ್‌ ಗೆ 250 ರೂಪಾಯಿ!

|
Google Oneindia Kannada News

ಬೀದರ್, ಫೆಬ್ರವರಿ 08: ಹಸುವಿನ ಹಾಲಿನ ಬೆಲೆ ಎಷ್ಟು? ಲೀಟರ್‌ ಗೆ 40 ತೀರಾ ಹೆಚ್ಚೆಂದರೆ 50 ರೂ ಅಷ್ಟೆ. ಆದರೆ ಈ ತಳಿಯ ಆಕಳಿನ ಹಾಲಿನ ಬೆಲೆ ಲೀಟರ್‌ ಗೆ ಬರೋಬ್ಬರಿ 250 ರೂಪಾಯಿ.

ಹೌದು, ಪುಂಗನೂರು ಗಿಡ್ಡ ಆಕಳಿನ ಒಂದು ಲೀಟರ್‌ ಹಾಲಿನ ಬೆಲೆ 250 ರೂಪಾಯಿ. ಬಹು ಔಷದೀಯ ಗುಣ ಹೊಂದಿರುವ ಕಾರಣ ಈ ಆಕಳಿನ ಹಾಲಿಗೆ ಇಷ್ಟೋಂದು ಬೆಲೆಯಂತೆ.

ಬೀದರ್‌ನ ಜನವಾಡದಲ್ಲಿ ನಡೆದ ರಾಜ್ಯಮಟ್ಟದ ರಾಸು ಪ್ರದರ್ಶನಕ್ಕೆ ಹೈದರಾಬಾದ್‌ ನ ಕೋಟೇಶ್ವರ್ ರಾವ್ ಮುಕಮಲ್ ಅವರು ಪುಂಗನೂರು ತಳಿಯ ಆಕಳನ್ನು ತಂದಿದ್ದರು. ಈ ಹಸುವಿನ ಹಾಲಿನ ಬೆಲೆ ಕೇಳಿ ರೈತರು ಆಶ್ಚರ್ಯಚಕಿತರಾದರು. ಆಕಳನ್ನು ನೋಡಲು ರೈತರು ಮುಗಿಬಿದ್ದಿದ್ದರು.

Punganuru Breed Cow Milk Price 250 rs Per Litre

ಪುಂಗನೂರು ತಳಿಯ ಆಕಳಿನ ಹಾಲಿನಲ್ಲಿ ಹಲವು ಹೋಮಿಯೋಪತಿ ಔಷಧಿಗಳನ್ನು ಮಾಡಲಾಗುತ್ತದೆಯಂತೆ. ಈ ತಳಿಯ ಆಕಳಿನ ಹಾಲಿನಲ್ಲಿ ಶಕ್ತಿ ಹೆಚ್ಚು ಎನ್ನುತ್ತಾರೆ ಅದರ ಮಾಲೀಕ ಕೋಟೇಶ್ವರ್ ರಾವ್ ಮುಕಮಲ್.

ಪುಂಗನೂರು ತಳಿಯ ಆಕಳು ಗಿಡ್ಡವಾಗಿದ್ದು, ಸುಲಭವಾಗಿ ಮನೆಗಳಲ್ಲಿ ಸಾಕಬಹುದಂತೆ. ಉಳಿಯುವ ತರಕಾರಿ ಇನ್ನಿತರ ಆಹಾರಗಳನ್ನೇ ಆಕಳಿಗೆ ನೀಡಿದರಾಯಿತು ಎಂದು ಮುಕಮಲ್ ವಿವರಿಸಿದರು. ಮುಕಮಲ್ ಬಳಿ ಇರುವ ಆಕಳಿನ ಬೆಲೆ 3 ಲಕ್ಷ ಹಾಗೂ ಎರಡು ಲಕ್ಷ.

ಪುಂಗನೂರು ತಳಿಯ ಆಕಳುಗಳ ಸಂಖ್ಯೆ ಇತ್ತೀಚಿಗೆ ಕಡಿಮೆಯಾಗಿದೆ. ತಿರುಪತಿ ದೇವಾಲಯ ಟ್ರಸ್ಟ್‌ ಈ ತಳಿಗಳ ಬಗ್ಗೆ ಆಸಕ್ತಿವಹಿಸಿ ಸಂರಕ್ಷಿಸುವ ಕಾರ್ಯ ಮಾಡುತ್ತಿದೆ. ಆಂಧ್ರಪ್ರದೇಶದಲ್ಲಿ ಕೆಲವು ಬೆರಳೆಣಿಕೆ ರೈತರು ಪುಂಗನೂರು ತಳಿ ಆಕಳಿನ್ನು ಸಾಕುತ್ತಿದ್ದಾರೆ.

English summary
Punganuru breed Cow milk price very much higher (250/litre) than normal milk. It has medical value in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X