• search
  • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೀದರ್ ನಲ್ಲಿ ಸಿಲುಕಿದ್ದ ನರ್ಸಿಂಗ್ ವಿದ್ಯಾರ್ಥಿನಿಯರು ವಾಪಸ್

|

ಬೀದರ್, ಮೇ 13: ಕೊರೊನಾ ವೈರಸ್ ದೇಶಾದ್ಯಂತ ಹರಡುತ್ತಿದ್ದ ಕಾರಣದಿಂದಾಗಿ ಲಾಕ್‌ಡೌನ್‌ ಘೋಷಿಸಲಾಗಿತ್ತು. ಇದರಿಂದಾಗಿ ಬೀದರ್ ನಗರದಲ್ಲಿ ಸಿಲುಕಿಕೊಂಡಿದ್ದ ಕೇರಳದ ಕೊಟ್ಟಂನ 76 ಹಾಗೂ ಗುಜರಾತ್‌ನ ನೌಸಾರಿಯ 29 ನರ್ಸಿಂಗ್ ವಿದ್ಯಾರ್ಥಿನಿಯರನ್ನು ಅವರ ಊರುಗಳಿಗೆ ವಾಪಸ್ಸು ಕಳಿಸಿಕೊಡಲಾಯಿತು.

ಬೀದರ್ ಕೇಂದ್ರ ಬಸ್ ನಿಲ್ದಾಣದಿಂದ ಮೂರು ಬಸ್ ಗಳ ಮೂಲಕ ವಿದ್ಯಾರ್ಥಿನಿಯರನ್ನು ಅವರವರ ರಾಜ್ಯಗಳಿಗೆ ಕಳಿಸಲಾಯಿತು. ಇವರು ಬೀದರ್ ನ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರು.

5 ದಿನದಲ್ಲಿ 5000 ಕೊರೊನಾ ಪರೀಕ್ಷೆಗೆ ಮುಂದಾದ ಬೀದರ್ ಜಿಲ್ಲಾಡಳಿತ

ಖಾಸಗಿ ನರ್ಸಿಂಗ್ ಕಾಲೇಜಿನ ಮಾಲೀಕರು ಕೆಎಸ್ಆರ್ಟಿಸಿ ಜೊತೆ ಪ್ರತಿ ಕೀ.ಮೀ ಗೆ 14 ರೂ. ನಂತೆ ಒಪ್ಪಂದದ ಮೇರೆಗೆ ಬಸ್ ಸಂಚರಿಸಿತು. ಸಾಮಾಜಿಕ ಅಂತರ ಕಾಪಾಡಿಕೊಂಡು ವಿದ್ಯಾರ್ಥಿನಿಯರನ್ನು ಬಸ್ಸಿನೊಳಗಡೆ ಕೂರಿಸಲಾಯಿತು. ವಿದ್ಯಾರ್ಥಿನಿಯರ ಸ್ಕ್ಯಾನಿಂಗ್ ನಂತರ ಕೇರಳ ಮತ್ತು ಗುಜರಾತ್ ಗೆ ವಿದ್ಯಾರ್ಥಿನಿಯರು ತೆರಳಿದರು.

English summary
The 76 nursing students from Kottayam and 29 nursing students from Gujarat were sent back to their hometowns in the city of Bidar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X