• search
 • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನರೇಂದ್ರ ಮೋದಿ, ದೇವರ ಕೃಪೆಯಿಂದ ನಮ್ ಯಜಮಾನ್ರಿಗೆ ಸಚಿವ ಸ್ಥಾನ

|
Google Oneindia Kannada News

ಬೀದರ್, ಜುಲೈ 7: "ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವರ ಕೃಪೆಯಿಂದ ನಮ್ಮ ಯಜಮಾನರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ,'' ಎಂದು ಸಂಸದ ಭಗವಂತ ಖೂಬಾ ಪತ್ನಿ ಶೀಲಾ ಭಗವಂತ ಖೂಬಾ ಹೇಳಿದ್ದಾರೆ.

"ತಮ್ಮ ಪತಿಗೆ ಯಾವುದೇ ಜವಾಬ್ದಾರಿ ನೀಡಿದರೂ ಕೂಡ ತುಂಬಾ ನಿಷ್ಠೆಯಿಂದ ಅವರು ಕೆಲಸ ಮಾಡುತ್ತಾರೆ. ಕಳೆದ ಏಳು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ‌. ಹೀಗಾಗಿಯೇ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ,'' ಎಂದು ಶೀಲಾ ಭಗವಂತ ಖೂಬಾ ತಿಳಿಸಿದರು.

PM Modi Cabinet Reshuffle Updates: ಪ್ರಮಾಣ ವಚನ ಸ್ವೀಕರಿಸಿದ 43 ಸಚಿವರುPM Modi Cabinet Reshuffle Updates: ಪ್ರಮಾಣ ವಚನ ಸ್ವೀಕರಿಸಿದ 43 ಸಚಿವರು

"ಅವರು ಕೇಂದ್ರದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗೆ ಮೊದಲೇ ವಿಶ್ವಾಸ ಇತ್ತು. ದೇವರು, ಬೀದರ್ ಜಿಲ್ಲೆಯ ಜನ ಹಾಗೂ ಪ್ರಧಾನಿಯವರ ಆಶೀರ್ವಾದದಿಂದ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ.''

   ಶ್ರೀಲಂಕಾ ಆಟಗಾರರಿಗೆ ಕಾಡುತಿದೆ ಕೋವಿಡ್ ಚಿಂತೆ | Oneindia Kannada

   "ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶ್ರಮಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಮುಖಂಡರು‌ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ,'' ಎಂದು ನೂತನ ಕೇಂದ್ರ ಸಚಿವ ಭಗವಂತ ಖೂಬಾ ಪತ್ನಿ ಶೀಲಾ ಹೇಳಿದರು.

   English summary
   By the grace of God our husband has got a Union Cabinet position, Bhagwant Khuba wife Sheela Bhagwant Khuba said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X