ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದರ್‌ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲು ವಿರೋಧ

|
Google Oneindia Kannada News

ಬೀದರ್, ಜನವರಿ 24 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲಿವೆ. ಆದರೆ, ಸೀಟು ಹಂಚಿಕೆ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಬೀದರ್ ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

'ಬೀದರ್ ಜಿಲ್ಲೆಯಲ್ಲಿ 5 ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಸಭಾ ಸೀಟು ಹಂಚಿಕೆ ಮಾಡಬೇಕಾಗುತ್ತದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ಆ ಮೂಲಕ ತವರು ಜಿಲ್ಲೆಯನ್ನು ಬಿಟ್ಟುಕೊಡುವುದು ಬೇಡ ಎಂಬ ಸಂದೇಶ ರವಾನಿಸಿದ್ದಾರೆ.

ಕರ್ನಾಟಕದ ತುತ್ತತುದಿಯ ಕ್ಷೇತ್ರದಲ್ಲಿ ಗೆಲುವಿನ ಗರಿ ಯಾರ ಮುಡಿಗೆ?ಕರ್ನಾಟಕದ ತುತ್ತತುದಿಯ ಕ್ಷೇತ್ರದಲ್ಲಿ ಗೆಲುವಿನ ಗರಿ ಯಾರ ಮುಡಿಗೆ?

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೀದರ್ ಕ್ಷೇತ್ರವನ್ನು ಬಿಟ್ಟುಕೊಂಡುವಂತೆ ಕಾಂಗ್ರೆಸ್‌ ಮುಂದೆ ಬೇಡಿಕೆ ಇಡುವ ಸಾಧ್ಯತೆ ಇದೆ. ಆದ್ದರಿಂದ, ಈಶ್ವರ ಖಂಡ್ರೆ ಅವರು ಪರೋಕ್ಷವಾಗಿ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಇವಿಎಂ ಹ್ಯಾಕ್ ಸಾಧ್ಯವಿಲ್ಲ , ಮತಪತ್ರ ಬಳಕೆ ಮಾಡಲ್ಲ: ಸಿಇಸಿಇವಿಎಂ ಹ್ಯಾಕ್ ಸಾಧ್ಯವಿಲ್ಲ , ಮತಪತ್ರ ಬಳಕೆ ಮಾಡಲ್ಲ: ಸಿಇಸಿ

ಬೀದರ್ ಕ್ಷೇತ್ರ ಸದ್ಯ ಬಿಜೆಪಿಯ ವಶದಲ್ಲಿದೆ. ಭಗವಂತ ಖೂಬಾ ಅವರು ಹಾಲಿ ಸಂಸದರು. ಕಾಂಗ್ರೆಸ್ ಅಥವ ಜೆಡಿಎಸ್‌ನಿಂದ ಈ ಬಾರಿ ಯಾರು ಅಭ್ಯರ್ಥಿಯಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕ ಚುನಾವಣೆ : ಬೀದರ್‌ನಲ್ಲಿ ಗೆದ್ದವರು, ಸೋತವರುಕರ್ನಾಟಕ ಚುನಾವಣೆ : ಬೀದರ್‌ನಲ್ಲಿ ಗೆದ್ದವರು, ಸೋತವರು

ಈಶ್ವರ ಖಂಡ್ರೆ ಹೇಳಿದ್ದೇನು?

ಈಶ್ವರ ಖಂಡ್ರೆ ಹೇಳಿದ್ದೇನು?

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು, 'ಬೀದರ್ ಜಿಲ್ಲೆಯಲ್ಲಿ ಐದು ಕಾಂಗ್ರೆಸ್‌ ಶಾಸಕರು ಇದ್ದಾರೆ. ಆ ದೃಷ್ಟಿಯಿಂದಲೇ ಬೀದರ್ ಕ್ಷೇತ್ರದ ಟಿಕೆಟ್‌ ಅನ್ನು ಹಂಚಿಕೆ ಮಾಡಬೇಕಾಗುತ್ತದೆ' ಎಂದು ಹೇಳಿದ್ದಾರೆ. ಬೀದರ್ ಈಶ್ವರ ಖಂಡ್ರೆ ಅವರ ತವರು ಕ್ಷೇತ್ರ. ಆದ್ದರಿಂದ, ಅದನ್ನು ಬಿಟ್ಟಕೊಡಲು ಅವರು ಹಿಂದೇಟು ಹಾಕುತ್ತಿದ್ದಾರೆ.

ಎಲ್ಲರೂ ಒಪ್ಪುವ ನಿರ್ಧಾರ

ಎಲ್ಲರೂ ಒಪ್ಪುವ ನಿರ್ಧಾರ

'ಲೋಕಸಭಾ ಚುನಾವಣೆ ಸೀಟು ಹಂಚಿಕೆ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಇದರ ಬಗ್ಗೆ ಯಾರೂ ಗೊಂದಲ ಪಡುವ ಅಗತ್ಯವಿಲ್ಲ. ಎಲ್ಲರೂ ಒಪ್ಪುವಂತಹ ನಿರ್ಧಾರವನ್ನು ಅವರು ಕೈಗೊಳ್ಳಲಿದ್ದಾರೆ' ಎಂದು ಈಶ್ವರ ಖಂಡ್ರೆ ಹೇಳಿದರು.

ಧರಂಸಿಂಗ್ ಸ್ಪರ್ಧೆ ಮಾಡಿದ್ದರು

ಧರಂಸಿಂಗ್ ಸ್ಪರ್ಧೆ ಮಾಡಿದ್ದರು

2014ರ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಸ್ಪರ್ಧೆ ಮಾಡಿದ್ದರು. 367068 ಮತಗಳನ್ನು ಪಡೆದು 2ನೇ ಸ್ಥಾನ ಪಡೆದಿದ್ದರು. ಈ ಬಾರಿ ಯಾರು ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

2014ರ ಫಲಿತಾಂಶ

2014ರ ಫಲಿತಾಂಶ

2014ರ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ಖೂಬಾ ಅವರು ಕ್ಷೇತ್ರದಲ್ಲಿ 459290 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಬಾರಿಯೂ ಅವರು ಸ್ಪರ್ಧೆ ಮಾಡುವುದು ಖಚಿತವಾಗಿದೆ. ಆದರೆ, ಎದುರಾಳಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.

ಜೆಡಿಎಸ್‌ನಿಂದ ಸ್ಪರ್ಧೆ

ಜೆಡಿಎಸ್‌ನಿಂದ ಸ್ಪರ್ಧೆ

2014ರ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಬಂಡೆಪ್ಪ ಕಾಶೆಂಪೂರ ಅವರು ಸ್ಪರ್ಧೆ ಮಾಡಿದ್ದರು. 58,728 ಮತಗಳನ್ನು ಪಡೆದಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಜಯಗಳಿಸಿದ್ದು, ಕಾಂಗ್ರೆಸ್‌-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

English summary
Working President Karnataka Pradesh Congress Committee (KPCC) Eshwar Khandre opposed to share Bidar Lok Sabha seat for JDS. BJP leader Bhagwanth Khuba sitting MP of the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X