ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ ಚುನಾವಣೆ: ದಳಪತಿಗೆ ಒಲಿಯದ 'ಕಲ್ಯಾಣ' ನಾಡಿನ ಮತದಾರ

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಮೇ 2: ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಬುಟ್ಟಿಗೆ ಕೈ ಹಾಕಲು ಅಲ್ಪಸಂಖ್ಯಾತ ಅಭ್ಯರ್ಥಿಗೆ ಮಣೆ ಹಾಕುವ ಮೂಲಕ ತಂತ್ರಗಾರಿಕೆ ರೂಪಿಸಿದ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರ ತಂತ್ರ ತೀವ್ರ ಹಿನ್ನಡೆ ಅನುಭವಿಸಿದಂತೆ ಕಾಣುತ್ತಿದೆ.

ಬಸವಕಲ್ಯಾಣ ಕ್ಷೇತ್ರದಲ್ಲೇ ಠಿಕಾಣಿ ಹೊಡೆದು ವಾರ ಕಾಲ ಹಳ್ಳಿಹಳ್ಳಿಗೂ ತೆರಳಿ ಪ್ರಚಾರ ನಡೆಸಿದ ದಳಪತಿಗೆ ಮತದಾರ ಕೈಹಿಡಿದ ಹಾಗೇ ಕಾಣುತ್ತಿಲ್ಲ. 7 ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು, ಸೈಯದ್ ಯಾಸ್ರಬ್ ಖಾದ್ರಿಗೆ ಲಭಿಸಿದ್ದು, ಕೇವಲ 1418 ಮತಗಳು.

Karnataka By Elections Results 2021 Live Updates: ಮತ ಎಣಿಕೆ ಆರಂಭ, ಯಾರಿಗೆ ಮುನ್ನಡೆ?Karnataka By Elections Results 2021 Live Updates: ಮತ ಎಣಿಕೆ ಆರಂಭ, ಯಾರಿಗೆ ಮುನ್ನಡೆ?

ಕಾಂಗ್ರೆಸ್ ಈ ವಿಷಯದಲ್ಲಿ ಸಾಕಷ್ಟು ಟೀಕೆಗಳು ಮಾಡಿತ್ತು. ಬಿಜೆಪಿಗೆ ಲಾಭ ಮಾಡುವುದಕ್ಕಾಗಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್ ನೇರವಾಗಿ ಟೀಕಿಸಿದ್ದರು.

Karnataka By Election Results 2021: JDS Candidate Trailing In Basavakalyan By-Polls

ಇದ್ಯಾವುದನ್ನು ಲೆಕ್ಕಿಸದ ಮಾಜಿ ಸಿಎಮ ಎಚ್.ಡಿ ಕುಮಾರಸ್ವಾಮಿ ತಮ್ಮ ಮುಖಂಡರೊಂದಿಗೆ ಪ್ರಚಾರ ನಡೆಸಿದರು. ಮೈತ್ರಿ ಸರ್ಕಾರದಲ್ಲಿ ಬಸವಕಲ್ಯಾಣದಲ್ಲಿ ಜಾರಿಗೆ ತಂದ ಯೋಜನೆಗಳ ಬಗ್ಗೆ ಸಾಕಷ್ಟು ಪ್ರಚಾರ ನಡೆಸಿದರು.

Assembly Election Results 2021 Live Updates: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶAssembly Election Results 2021 Live Updates: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ

ಸಾಲ ಮನ್ನಾ ಬಗ್ಗೆ ಮಾಡಿದ ಭಾಷಣಗಳೂ ಫಲಕೊಟ್ಟ ಹಾಗೇ ಕಾಣುತ್ತಿಲ್ಲ. ಇದೇ ಕ್ಷೇತ್ರದಿಂದ ಹಿಂದೆ ಜನತಾ ಪರಿವಾರದ ೭ ಅಭ್ಯರ್ಥಿಗಳು ಗೆದ್ದು ಬಂದಿದ್ದು ಇತಿಹಾಸ.

English summary
JDS Candidate Trailing In in the Basavakalyan Assembly by-election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X