ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಿಮ್ಸ್ ಆಸ್ಪತ್ರೆಗೆ ಸರ್ಕಾರದಿಂದ ನೀಡಿದ್ದ ಅನುದಾನ ಬಳಕೆಯಾಗದೇ ವಾಪಸ್

By Lekhaka
|
Google Oneindia Kannada News

ಬೀದರ್, ನವೆಂಬರ್ 2: ಬಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ಆಸ್ಪತ್ರೆಗೆ ಬರುವ ಬಡವರ ಚಿಕಿತ್ಸಾ ವೆಚ್ಚಕ್ಕೆಂದು ಬೀದರ್ ನ ಬ್ರಿಮ್ಸ್ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆಗೆ ಸರ್ಕಾರ ನೀಡಿದ್ದ ಹಣವು ಸೂಕ್ತವಾಗಿ ಬಳಕೆಯಾಗದೇ ಸರ್ಕಾರಕ್ಕೇ ಹಿಂದಿರುಗಿದೆ.

2017ರಿಂದ ಈ ಮೂರು ವರ್ಷಗಳಲ್ಲಿ ಬ್ರಿಮ್ಸ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಬಳಕೆಗೆಂದು ಸರ್ಕಾರವು ಸುಮಾರು ಎರಡು ಕೋಟಿಯಷ್ಟು ಅನುದಾನವನ್ನು ನೀಡಲಾಗಿತ್ತು. ಆದರೆ ಆ ಅನುದಾನ ಸರಿಯಾಗಿ ಬಳಕೆಯಾಗದೇ ವಾಪಸ್ಸಾಗಿದೆ. ಎಸ್ ಸಿಪಿ ಹಾಗೂ ಟಿಎಸ್ ಪಿ ಯೋಜನೆಯಡಿ ಈ ಅನುದಾನವನ್ನು ಆಸ್ಪತ್ರೆಗೆ ನೀಡಲಾಗಿತ್ತು. ಈ ಹಣವನ್ನು ಕಾಲೇಜಿನ ಮುಖ್ಯಸ್ಥರು ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಬಳಸಬೇಕಿತ್ತು.

ಬೀದರ್ : ಬ್ರಿಮ್ಸ್ ಸಿಬ್ಬಂದಿ ವರ್ತನೆಗೆ ಜನರ ಆಕ್ರೋಶಬೀದರ್ : ಬ್ರಿಮ್ಸ್ ಸಿಬ್ಬಂದಿ ವರ್ತನೆಗೆ ಜನರ ಆಕ್ರೋಶ

Bidar: Grant Money Given To Medical College And Hospital Returned To Government

Recommended Video

Sira , JDS ಅಭ್ಯರ್ಥಿ ಆಮ್ಮಾಜಮ್ಮ ಅವರು ಮತ ಚಲಾಯಿಸುವ ಮುನ್ನ ಮಾಡಿದ್ದೇನು | Oneindia Kannada

ಜೊತೆಗೆ ಆಸ್ಪತ್ರೆಗೆ ಬರುವ ಹಿಂದುಳಿದ ವರ್ಗದವರಿಗೆ, ಬಡವರ ಚಿಕಿತ್ಸೆಗೆ ಈ ಮೀಸಲಿಟ್ಟ ಹಣವನ್ನು ಬಳಸಬೇಕಿತ್ತು. ಆದರೆ ಬೀದರ್ ಬ್ರಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿ ಈ ಕೆಲಸಗಳನ್ನು ಸೂಕ್ತವಾಗಿ ನಿರ್ವಹಿಸದೇ ಇಷ್ಟೊಂದು ಅನುದಾನದ ಹಣ ಬಳಕೆಯಾಗಿಲ್ಲ. ಸುಮಾರು 1.40 ಕೋಟಿ ರೂ ಬಳಕೆಯಾಗದೇ ಸರ್ಕಾರಕ್ಕೆ ವಾಪಸ್ ಹೋಗಿದೆ.

English summary
The grant money given to Bidar's Medical College and District Hospital for helping poor medical students and treatment of poor has returned to government without proper use,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X