ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ನಲ್ಲಿ ಜನರನ್ನು ಸೆಳೆದ ಫಲಪುಷ್ಪ ಪ್ರದರ್ಶನ

|
Google Oneindia Kannada News

ಬೀದರ್, ಫೆಬ್ರವರಿ 25 : ಹೂಗಳಲ್ಲಿ ತಯಾರಿಸಿದ ಬೀದರ್ ಜಿಲ್ಲೆಯ ಐತಿಹಾಸಿಕ ಮಹತ್ವ ಸಾರುವ ಅಷ್ಟೂರ್ ಗುಂಬಜ್, ಗವಾನ್ ಮದರಸಾ, ತರಕಾರಿಗಳಲ್ಲಿ ಕೆತ್ತನೆ ಮಾಡಲಾದ ಚಿತ್ರಗಳು, ಗರಿ ಬಿಚ್ಚಿ ನಿಂತಿರುವ ನವಿಲು ಪ್ರತಿರೂಪ, ಬೃಹತ್ ಆಕಾರದ ಅಣಬೆಗಳು ಜನರನ್ನು ಆಕರ್ಷಿಸಿದವು.

ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಬೀದರ್ ಕೃಷಿ ವಿಜ್ಞಾನ ಕೇಂದ್ರದಿಂದ ಜನವಾಡಾ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕಿಸಾನ್ ಮೇಳ ಮತ್ತು ಫಲ ಪುಷ್ಪ ಪ್ರದರ್ಶನ ನಡೆಯಿತು.

ಲಾಲ್ ಬಾಗ್ ಫ್ಲವರ್ ಶೋ ಥೀಮ್ ಗೆ ಹೂವಿನ ಬಳಕೆಯಿಲ್ಲ!ಲಾಲ್ ಬಾಗ್ ಫ್ಲವರ್ ಶೋ ಥೀಮ್ ಗೆ ಹೂವಿನ ಬಳಕೆಯಿಲ್ಲ!

Flower show inaugurated at Bidar

ಕೃಷಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಪ್ರಗತಿಪರ ರೈತರಿಂದ ಮಳಿಗೆಗಳನ್ನು ಹಾಕಲಾಗಿತ್ತು. ವಿನೂತನ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಒಕ್ಕಣೆ ಯಂತ್ರ, ಸಸ್ಯ ಸಂರಕ್ಷಣಾ ಉಪಕರಣಗಳು, ಲೇವಲರ್, ವಿವಿಧ ಆಹಾರ ಪದಾರ್ಥಗಳ ಸುಧಾರಿತ ಬೀಜಗಳು, ಕಬ್ಬಿನ ಬೀಜಗಳ ಪ್ರದರ್ಶನವನ್ನು ರೈತರು ಉತ್ಸಾಹದಿಂದ ನೋಡಿ ಮಾಹಿತಿ ಪಡೆದುಕೊಂಡರು.

ಲಾಲ್ ಬಾಗ್ ಫ್ಲವರ್ ಶೋ ಥೀಮ್ ಗೆ ಹೂವಿನ ಬಳಕೆಯಿಲ್ಲ!ಲಾಲ್ ಬಾಗ್ ಫ್ಲವರ್ ಶೋ ಥೀಮ್ ಗೆ ಹೂವಿನ ಬಳಕೆಯಿಲ್ಲ!

ಮೇಳವನ್ನು ಉದ್ಘಾಟಿಸಿದ ಸಂಸದ ಭಗವಂತ ಖೂಬಾ ಅವರು, 'ರೈತರಿಗಾಗಿ ಸರ್ಕಾರವು ಮಣ್ಣು ಆರೋಗ್ಯ, ಪ್ರಧಾನ ಮಂತ್ರಿ ಫಸಲ ವಿಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಸೇರಿದಂತೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಎಲ್ಲಾ ಯೋಜನೆಗಳ ಲಾಭ ಪಡೆಯಬೇಕು' ಎಂದು ಕರೆ ನೀಡಿದರು.

ಕಬ್ಬನ್ ಪಾರ್ಕ್ ಅಂದ ಹೆಚ್ಚಿಸಲಿವೆ ಬೃಹತ್ ಶಿಲ್ಪ ಕಲಾಕೃತಿಗಳುಕಬ್ಬನ್ ಪಾರ್ಕ್ ಅಂದ ಹೆಚ್ಚಿಸಲಿವೆ ಬೃಹತ್ ಶಿಲ್ಪ ಕಲಾಕೃತಿಗಳು

Flower show inaugurated at Bidar

'ಕೃಷಿ ಲಾಭದಾಯಕ ಅಲ್ಲ ಅನ್ನುವುದು ಸುಳ್ಳು. ಕೇವಲ ಕೃಷಿಯನ್ನು ಅವಲಂಬಿಸಿ ಉತ್ತಮ ಲಾಭ ಗಳಿಸಿದವರು ನಮ್ಮಲ್ಲಿದ್ದಾರೆ. ಇಂತರ ವ್ಯಕ್ತಿಗಳ ಮಾದರಿಯಲ್ಲಿ ಕೃಷಿಯಲ್ಲಿ ಲಾಭ ಕಾಣಲು ಪ್ರಯತ್ನಿಸಬೇಕು' ಎಂದು ಸಲಹೆ ನೀಡಿದರು.

English summary
Flower show inaugurated at Bidar Krishi Vigyan Kendra. Horticulture department organized Flower show in association with district administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X