ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2020ರ ಜನವರಿಯಲ್ಲಿ ಬೀದರ್‌ನಲ್ಲಿ ವಿಮಾನ ಹಾರಾಟ

|
Google Oneindia Kannada News

ಬೀದರ್, ಡಿಸೆಂಬರ್ 17 : "ಬೀದರ್‌ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆ 2020ರ ಜನವರಿ 26ರಂದು ಆರಂಭವಾಗಲಿದೆ" ಎಂದು ಪಶು ಸಂಗೋಪನೆ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು.ಬಿ.ಚವ್ಹಾಣ್ ಹೇಳಿದರು.

ಸೋಮವಾರ ಸಚಿವ ಪ್ರಭು.ಬಿ.ಚವ್ಹಾಣ್ ಹಾಗೂ ಬೀದರ್ ಸಂಸದ ಭಗವಂತ ಖೂಬಾ ಬೀದರ್ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಬೀದರ್‌ ನಗರದ ಚಿದ್ರಿ ಬಳಿಯಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ವೀಕ್ಷಣೆ ಮಾಡಿದರು.

ಶಿವಮೊಗ್ಗದಲ್ಲಿ ಇನ್ನು 6 ತಿಂಗಳಲ್ಲಿ ವಿಮಾನ ಹಾರಾಟಕ್ಕೆ ಸಿಎಂ ಸೂಚನೆಶಿವಮೊಗ್ಗದಲ್ಲಿ ಇನ್ನು 6 ತಿಂಗಳಲ್ಲಿ ವಿಮಾನ ಹಾರಾಟಕ್ಕೆ ಸಿಎಂ ಸೂಚನೆ

ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿಗಳು, ಕೆಎಸ್‍ಐಐಡಿಸಿ ತಜ್ಞರ ತಂಡ ಮತ್ತು ಎಂಜಿಆರ್ ಕಂಪನಿಯ ಅಧಿಕಾರಿಗಳು ವಿಮಾನ ನಿಲ್ದಾಣ ಕಾಮಗಾರಿ ಕುರಿತು ವಿವರಣೆಯನ್ನು ನೀಡಿದರು. ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

 ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ; ಎರಡನೇ ರನ್ ವೇ ಆರಂಭ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ; ಎರಡನೇ ರನ್ ವೇ ಆರಂಭ

Bidar Airport

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಭು.ಬಿ.ಚವ್ಹಾಣ್, "ಬೀದರ್‌ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಯು 2020ರ ಜನವರಿ 26ರಂದು ಆರಂಭವಾಗಲಿದೆ. ಮೊದಲು ಬೀದರ್-ಬೆಂಗಳೂರು ನಡುವೆ ಸಂಚಾರ ಆರಂಭವಾಗಲಿದೆ" ಎಂದು ಹೇಳಿದರು.

ಕಲಬುರಗಿ-ಬೆಂಗಳೂರು ಅಲಯನ್ಸ್‌ ಏರ್ ವೇಳಾಪಟ್ಟಿ ಕಲಬುರಗಿ-ಬೆಂಗಳೂರು ಅಲಯನ್ಸ್‌ ಏರ್ ವೇಳಾಪಟ್ಟಿ

"ಬೀದರ್‌ನಿಂದ ವಿಮಾನಯಾನ ಸೇವೆ ಆರಂಭವಾಗಬೇಕು ಎಂಬುದು ಜಿಲ್ಲೆಯ ಜನರ ಆಶಯವಾಗಿತ್ತು. ಹತ್ತಾರು ವರ್ಷಗಳಿಂದ ಇದಕ್ಕೆ ಪ್ರಯತ್ನ ನಡೆದಿತ್ತು. ಈಗ ಆ ದಿನಗಳು ಹತ್ತಿರವಾಗುತ್ತಿವೆ" ಎಂದು ಸಚಿವರು ತಿಳಿಸಿದರು.

ಭಗವಂತ ಖೂಬಾ ಮಾತನಾಡಿ, "ವಿಮಾನಯಾನ ಆರಂಭಕ್ಕೆ ಸಂಬಂಧಿಸಿದ ಕಾರ್ಯವು ಯುದ್ದೋಪಾದಿಯಲ್ಲಿ ಆರಂಭವಾಗಿದೆ. ಈ ಕಾರ್ಯಕ್ಕೆ ವೇಗ ಹೆಚ್ಚಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವೀಕ್ಷಣೆ ನಡೆಸಲಾಗುತ್ತಿದೆ" ಎಂದು ಹೇಳಿದರು.

"ಜನವರಿ 26ಕ್ಕೆ ವಿಮಾನಯಾನ ಸೇವೆ ಆರಂಭವಾಗಿ 10 ವರ್ಷಗಳ ಕನಸು ನನಸಾಗಲಿದೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಕಾಮಗಾರಿ ಆರಂಭವಾಗಿತ್ತು. ಈಗ ಅವರಿಂದಲೇ ವಿಮಾನ ಸೇವೆಗೆ ಚಾಲನೆ ಸಿಗಲಿದೆ" ಎಂದರು.

English summary
Bidar district in-charge minister Prabhu Chauhan said that flight service from Bidar airport will began in the month of January 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X