ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯಕ್ಕೆ ಕಾಲಿಟ್ಟಿದೆ ಮಾರಣಾಂತಿಕ ಗ್ಲ್ಯಾಂಡರ್ಸ್ ಸೋಂಕು; ಬೀದರ್ ನಲ್ಲಿ ಮೊದಲ ಪ್ರಕರಣ ಪತ್ತೆ

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಅಕ್ಟೋಬರ್ 19: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗ್ಲ್ಯಾಂಡರ್ಸ್ ಎಂಬ ಮಾರಕ ಸೋಂಕು ರೋಗ ಕಾಣಿಸಿಕೊಂಡಿದೆ. ಬೀದರ್ ನಲ್ಲಿ ಇದು ಪತ್ತೆಯಾಗಿದ್ದು, ಈ ಸೋಂಕಿನಿಂದಾಗಿ ಈಗಾಗಲೇ ಎರಡು ಕುದುರೆಗಳು ಸಾವನ್ನಪ್ಪಿವೆ.

ಕುದುರೆ ಹಾಗೂ ಹೇಸರಗತ್ತೆಗೆ ಮಾರಣಾಂತಿಕವಾಗಿರುವ ಈ ರೋಗ ಬುರ್ಕೋಲ್ಡೀರಿಯಾ ಮಲ್ಲೈ ಎಂಬ ಬ್ಯಾಕ್ಟೀರಿಯಾದಿಂದ ಹರಡುವಂಥದ್ದು. ಈ ಸೋಂಕು ಕೋತಿ ಹಾಗೂ ಮನುಷ್ಯರಿಗೂ ಹರಡುವ ಸಾಧ್ಯತೆಯಿದೆ.

ಬ್ಯಾಕ್ಟೀರಿಯಾ ಸೋಂಕು; ಶಿಕಾರಿಪುರದಲ್ಲಿ ರಾತ್ರಿ ಕಳೆದು ಬೆಳಗಾಗುವುದರಲ್ಲಿ 60 ಕುರಿಗಳು ಸಾವುಬ್ಯಾಕ್ಟೀರಿಯಾ ಸೋಂಕು; ಶಿಕಾರಿಪುರದಲ್ಲಿ ರಾತ್ರಿ ಕಳೆದು ಬೆಳಗಾಗುವುದರಲ್ಲಿ 60 ಕುರಿಗಳು ಸಾವು

ಇದೀಗ ಬೀದರ್ ನ ಚಿದ್ರಿ ಬಳಿ ರೋಗ ಪತ್ತೆಯಾಗಿದ್ದು, ಸದ್ಯಕ್ಕೆ ಚಿದ್ರಿ ಬಡಾವಣೆಯ ಐದು ಕೀ.ಮಿ ವ್ಯಾಪ್ತಿಯ ಎಲ್ಲಾ ಕುದುರೆ, ಕತ್ತೆಗಳ ರಕ್ತ ಪರೀಕ್ಷೆ ಗೆ‌ ಪಶು ಸಂಗೋಪನಾ ಇಲಾಖೆ ಆದೇಶ ಹೊರಡಿಸಿದೆ. ಸೋಂಕು ಪತ್ತೆಯಾಗಿರುವ ಐದು ಕಿಲೋ ಮೀಟರ್ ಪ್ರದೇಶವನ್ನು ಸಾಂಕ್ರಾಮಿಕ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

First Case Of Glanders Infection Detected In Bidar

ಈ ವ್ಯಾಪ್ತಿಯ ಕುದುರೆಗಳನ್ನು ಹೊರಗೆ ಬಿಡದಂತೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಯನ್ನೂ ಹೊರಡಿಸಲಾಗಿದೆ. ಮನುಷ್ಯರಿಗೂ ಈ ಸೋಂಕು ಹರಡುವ ಭೀತಿ ಇರುವುದರಿಂದ ಬೀದರ್ ನ ಜನ ಕುದುರೆ ಕಂಡರೆ ಭಯ ಪಡುವಂತಾಗಿದೆ.

ಆಘಾತಕಾರಿ ಸುದ್ದಿ, ಬಾಲಕಿಯ ಮೆದುಳನ್ನೇ ತಿಂದ ಅಮಿಬಾಆಘಾತಕಾರಿ ಸುದ್ದಿ, ಬಾಲಕಿಯ ಮೆದುಳನ್ನೇ ತಿಂದ ಅಮಿಬಾ

ಈ ಸೋಂಕು ಮನುಷ್ಯರಿಗೆ ತಗುಲಿದರೆ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಚಳಿ, ಸೆಕೆ ಎರಡರ ಅನುಭವವೂ ಆಗುತ್ತದೆ. ತಲೆ ನೋವು, ಸ್ನಾಯುಗಳಲ್ಲಿ ನೋವು, ಸೆಳೆದ ಅತೀವವಾಗುತ್ತದೆ. ಇನ್ನೂ ಮೀರಿದರೆ ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ರಕ್ತದ ಹರಿವಿನಲ್ಲೂ ಏರುಪೇರಾಗಿ ಮಾರಣಾಂತಿಕವಾಗಬಹುದು.

English summary
For the first time in the state, a deadly infection called glanders has appeared. It was detected in Bidar that two horses have already died from this infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X