ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಯಾಕ್ಟ್ ಚೆಕ್: ನಿಜವಾಗಿಯೂ ಮಾಜಿ ಸಿಎಂ ಪತ್ನಿಗೆ ಬೆಡ್ ಸಿಗಲಿಲ್ವ?

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಮೇ 10: ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡು ಮಾಜಿ ಮುಖ್ಯಮಂತ್ರಿಯ ಪತ್ನಿಗೆ ಬೆಡ್ ಸಿಗಲಿಲ್ಲ ಎನ್ನುವ ಸುದ್ದಿ ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗಿದೆ.

ಮಾಜಿ ಸಿಎಂ ದಿ.ಧರಂ ಸಿಂಗ್ ಅವರ ಪತ್ನಿಗೆ ಬೆಡ್ ಸಿಗದೇ ಪರದಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಬಡವರಿಗಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಪತ್ನಿಗೂ ಬೆಡ್ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು.

ಮಾಜಿ ಸಿಎಂ ದಿ.ಧರಂ ಸಿಂಗ್ ಅವರ ಮಕ್ಕಳಿಬ್ಬರೂ ಪ್ರಭಾವಿಯಾಗಿದ್ದರೂ ತಾಯಿಗೆ ಬೆಡ್ ಸಿಕ್ಕಿರಲಿಲ್ಲವೆಂದು ಹೇಳಲಾಗಿತ್ತು. ಒಬ್ಬ ಮಗ ಅಜಯ್ ಸಿಂಗ್ ಅವರು ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರೆ, ಮತ್ತೊಬ್ಬರು ವಿಜಯ್ ಸಿಂಗ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಆದರೂ ಅವರು ತಾಯಿಗೆ ಬೆಡ್ ಕೊಡಿಸಲು ವಿಫಲರಾಗಿದ್ದಾರೆ ಎಂದು ಹೇಳಲಾಗಿತ್ತು.

 Fact Check: Is Former CM Dharam Singh Wife Didnt Get Bed In Hospital

ಒಂದು ಇಡೀ ದಿನ ಎಷ್ಟೇ ಪ್ರಯತ್ನಪಟ್ಟರೂ ಮಾಜಿ ಸಿಎಂ ಧರಂ ಸಿಂಗ್ ಪತ್ನಿ ಪ್ರಭಾವತಿಗೆ ಬೆಡ್ ಸಿಗಲಿಲ್ಲ. ಕೊನೆಗೆ ಇನ್ನೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಎಂಟ್ರಿಯಿಂದ ಬೆಡ್ ಸಿಕ್ಕಿತು ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

 Fact Check: Is Former CM Dharam Singh Wife Didnt Get Bed In Hospital

Recommended Video

ಮಹಾಯುದ್ದವನ್ನ ಜೈವಿಕ ಶಸ್ತ್ರಾಸ್ತ್ರಗಳೊಂದಿಗೆ ಹೋರಾಟ ಮಾಡಿ ಪ್ಲಾನ್! | Oneindia Kannada

ಆದರೆ, ಒನ್ಇಂಡಿಯಾ ಕನ್ನಡ ಈ ಸುದ್ದಿಯ ಬಗ್ಗೆ ಕ್ರಾಸ್ ಚೆಕ್ ಮಾಡಿದಾಗ, ಅಸಲಿ ಸುದ್ದಿ ಹೊರಬಿದ್ದಿದೆ. ಮಾಜಿ ಸಿಎಂ ಧರಂ ಸಿಂಗ್ ಪತ್ನಿ ಪ್ರಭಾವತಿ ಅವರು ಮನೆಯಲ್ಲಿಯೇ ಆರಾಮವಾಗಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಪ್ರಭಾವತಿ ಅವರಿಗೆ ಬೆಡ್ ಸಿಗದಿರುವುದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

English summary
Fact check: Is Former CM Dharam Singh wife didn't get Bed in hospitals? It was an fake news and she is doing fine at home. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X