ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪಗೆ ಒತ್ತಾಯ!

|
Google Oneindia Kannada News

ಬೆಂಗಳೂರು, ಅ. 14: ಬೀದರ್ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಆಸ್ತಿಪಾಸ್ತಿ, ಬೆಳೆಹಾನಿ, ಸಂಭವಿಸಿದ್ದು ತಕ್ಷಣವೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಕೆ) ಗ್ರಾಮದ ಕಾರಂಜಾ ಜಲಾಶಯಕ್ಕೆ ಗುರುವಾರ ಭೇಟಿ ನೀಡಿ ಜಲಾಶಯದಲ್ಲಿನ ನೀರಿನ ಮಟ್ಟ ವೀಕ್ಷಿಸಿದ ಬಳಿಕ ಮಾತನಾಡಿದರು. ಕಳೆದ ಸೆಪ್ಟೆಂಬರ್ ನಲ್ಲಿಯೂ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದು ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಹೆಕ್ಟೇರ್ ಹೆಸರು, ಉದ್ದು ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದವು. ಮನೆಗಳು ಕುಸಿತ ಕಂಡಿದ್ದವು. ರಸ್ತೆ, ಸೇತುವೆಗಳು ಕೊಚ್ಚಿ ಹೋಗಿದ್ದವು. ಪರಿಹಾರ ನೀಡುವಂತೆ ಸರಕಾರಕ್ಕೆ ಒತ್ತಾಯ ಮಾಡಲಾಗಿತ್ತು ಎಂದು ಈಶ್ವರ್ ಖಂಡ್ರೆ ಅವರು ನೆಪಿಸಿದ್ದಾರೆ.

ನಯಾ ಪೈಸೆ ಬಿಡುಗಡೆ ಮಾಡಿಲ್ಲ

ನಯಾ ಪೈಸೆ ಬಿಡುಗಡೆ ಮಾಡಿಲ್ಲ

ಕಳೆದ ತಿಂಗಳು ಮಳೆಯಿಂದ ಆಗಿರುವ ಬೆಳೆ ಹಾನಿಗೆ ಸರ್ಕಾರ ಈವರೆಗೂ ನಯಾ ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ರೈತರು ಹಾಗೂ ಬೀದರ್ ಜಿಲ್ಲೆ ಕುರಿತಂತೆ ರಾಜ್ಯ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಜ್ಯದೆಲ್ಲೆಡೆ ಮಳೆ ಮುನ್ಸೂಚನೆ, ಅಣೆಕಟ್ಟಿನ ನೀರಿನ ವಿವರರಾಜ್ಯದೆಲ್ಲೆಡೆ ಮಳೆ ಮುನ್ಸೂಚನೆ, ಅಣೆಕಟ್ಟಿನ ನೀರಿನ ವಿವರ

ಇದೀಗ ಮತ್ತೆ ಪ್ರವಾಹ ಬಂದಿದೆ

ಇದೀಗ ಮತ್ತೆ ಪ್ರವಾಹ ಬಂದಿದೆ

ಇದೀಗ ಮತ್ತೆ ಪ್ರವಾಹ ಎದುರಾಗಿದ್ದು, ಜಿಲ್ಲೆಯಲ್ಲಿ ಸೋಯಾಬಿನ್, ತೊಗರಿ ಸೇರಿ ವಿವಿಧ 1.80 ಲಕ್ಷ ಹೆಕ್ಟೇರ್ ಬೆಳೆಗಳು ನೀರಿನಲ್ಲಿ ಮುಳಗಡೆ ಆಗಿವೆ. ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಿರ್ಲಕ್ಷ್ಯ

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಿರ್ಲಕ್ಷ್ಯ

ರಾಜ್ಯ ಬಿಜೆಪಿ ಸರಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಬಗ್ಗೆ ನಿರ್ಲಕ್ಯ ತೋರುತ್ತಿದೆ. ಕೊರೊನಾ ಸೋಂಕು ನಿಯಂತ್ರಿಸುವುದು ಸೇರಿ ವಿಶೇಷ ಅನುದಾನ, ನೇಮಕಾತಿಯಲ್ಲಿಯೂ ಅನ್ಯಾಯ ಮಾಡುತ್ತಿದೆ ಎಂದು ಖಂಡ್ರೆ ಅಸಮಧಾನ ಹೊರಹಾಕಿದರು.

Recommended Video

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕರೋನಾ | Oneindia Kannada
ನಾಲ್ಕು ವರ್ಷಗಳ ಬಳಿಕ ಭರ್ತಿಯಾದ ಕಾರಂಜಾ

ನಾಲ್ಕು ವರ್ಷಗಳ ಬಳಿಕ ಭರ್ತಿಯಾದ ಕಾರಂಜಾ

ನಾಲ್ಕು ವರ್ಷಗಳ ಬಳಿಕ ಕಾರಂಜಾ ಜಲಾಶಯ ಭರ್ತಿಯಾಗಿದೆ. ತಾಲೂಕಿನ ವ್ಯಾಪ್ತಿಯ ಬಲ ಹಾಗೂ ಎಡಬದಿಯ ಕಾಲುವೆಗಳು ಆಧುನೀಕರಣ ಮಾಡಲಾಗಿದೆ ಹಾಗಾಗಿ ಈ ಬಾರಿ ರೈತರ ಸುಮಾರು 70 ಸಾವಿರ ಎಕರೆ ಜಮೀನಿಗೆ ನೀರು ಹರಿಯಲಿದೆ ಎಂದರು.

English summary
KPCC president Eshwar Khandre has urged Chief Minister BS Yediyurappa to visit the flood-affected areas and announce a special package for in Bidar district. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X