• search
 • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೀದರ್‌ನಲ್ಲಿ ಭಾರಿ ಮಳೆ; ಅನಾಹುತ ವೀಕ್ಷಿಸಿದ ಜಿಲ್ಲಾಧಿಕಾರಿಗಳು

|

ಬೀದರ್, ಸೆಪ್ಟೆಂಬರ್ 22 : ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗಿದೆ. ಸೆಪ್ಟೆಂಬರ್ 20ರ ರಾತ್ರಿಯೂ ಬಿರುಸಿನ ಮಳೆ ಸುರಿದಿತ್ತು. ಇದರಿಂದಾಗಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಅಪಾರ ಹಾನಿಯಾಗಿದೆ

ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಭಾಲ್ಕಿ ಮತ್ತು ಹುಲಸೂರ ತಾಲೂಕುಗಳಿಗೆ ದಿಢೀರ್ ಭೇಟಿ ನೀಡಿ, ತೀವ್ರ ಮಳೆಯಿಂದಾದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದರು. ಅಧಿಕಾರಿಗಳು, ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದರು.

ಬೀದರ್, ಕಲಬುರಗಿಯಲ್ಲಿ ವರುಣನ ಅಬ್ಬರ: ತುಂಬಿ ಹರಿದ ಕಾಗಿಣಾ ನದಿ

ಭಾಲ್ಕಿ-ಮಹಾರಾಷ್ಟ್ರ ನಡುವೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಆಗಿರುವ ಹಾನಿ ವೀಕ್ಷಣೆ ಮಾಡಿದರು. ಜಮಖಂಡಿ ಸೇತುವೆ ಹಾಳಾಗಿರುವುದನ್ನು ಕೂಡ ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿದರು. ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಲಬುರಗಿ, ಬೀದರ್ ಜಿಲ್ಲೆ ಮಳೆ ಅಬ್ಬರ, ಜಲಾಶಯ ವರದಿ

ಬೀದರ್‌ನಲ್ಲಿ ಸುರಿದ ಮಳೆಯಿಂದಾಗಿ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದಲ್ಲಿ 7.316 ಟಿಎಂಸಿ ಅಡಿ ಪೈಕಿ 3.225 ಟಿಎಂಸಿ ನೀರು ಸಂಗ್ರಹವಾಗಿದೆ. ಶಾಸಕ ಈಶ್ವರ ಖಂಡ್ರೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಲೆನಾಡಿನ ಭಾಗಗಳಲ್ಲಿ ಮಳೆ; ಮತ್ತೆ ತುಂಗಾ ನದಿ ಮಂಟಪ ಮುಳುಗಡೆ

ಸೇತುವೆಗಳಿಗೆ ಹಾನಿ

ಸೇತುವೆಗಳಿಗೆ ಹಾನಿ

ಬೀದರ್‌ನಲ್ಲಿ ಸುರಿದ ಮಳೆಗೆ ಸೇತುವೆಗಳಿಗೆ ಹಾನಿಯಾಗಿದೆ. ಭಾಲ್ಕಿ-ಮಹಾರಾಷ್ಟ್ರ ಸಂಪರ್ಕಿಸುವ ಹೆದ್ದಾರಿಯ ಇಂಚೂರ ಬ್ರಿಡ್ಜ್‌ಗೆ ಹಾನಿಯಾಗಿದೆ. ವಾಹನ ಸಂಚಾರಕ್ಕೆ ಅನುಕೂಲವಾಗಲು, ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಮಳೆಯಿಂದಾಗಿ ಹಾನಿ

ಮಳೆಯಿಂದಾಗಿ ಹಾನಿ

ಹುಲುಸೂರ ತಾಲೂಕಿನಲ್ಲಿ ಹುಲಸೂರ ವಾರ್ಡ-1ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮಳೆಯಿಂದಾಗಿ ವಾರ್ಡ್‌ನಲ್ಲಿ ಹಾನಿಯಾಗಿರುವುದನ್ನು ವೀಕ್ಷಣೆ ಮಾಡಿದರು. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಹಾನಿಯಾಗಿರುವುದನ್ನು ಪರಿಶೀಲಿಸಿದರು.

ಬೆಳೆಹಾನಿ ವೀಕ್ಷಿಸಿದ ಡಿಸಿ

ಬೆಳೆಹಾನಿ ವೀಕ್ಷಿಸಿದ ಡಿಸಿ

ಮಳೆಯಿಂದಾಗಿ ಹುಲಸೂರ, ಭಾಲ್ಕಿ ತಾಲೂಕುಗಳ ವ್ಯಾಪ್ತಿಯ ಜಮೀನುಗಳಲ್ಲಿ ಉಂಟಾದ ಬೆಳೆಹಾನಿಯನ್ನು ಜಿಲ್ಲಾಧಿಕಾರಿಗಳು ವೀಕ್ಷಣೆ ನಡೆಸಿದರು. ತೊಗರಿ ಬೆಳೆ ಕೊಚ್ಚಿ ಹೋಗಿರುವುದರ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು. ರೈತರಿಗೆ ಸಮರ್ಪಕ ಪರಿಹಾರ ಸಿಗಬೇಕು, ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದರು.

61,773 ಹೆಕ್ಟೇರ್ ಪ್ರದೇಶದಲ್ಲಿ ಹಾನಿ

61,773 ಹೆಕ್ಟೇರ್ ಪ್ರದೇಶದಲ್ಲಿ ಹಾನಿ

ನಾಲ್ಕು ದಿನ ಸತತವಾಗಿ ಬೀದರ್‌ನಲ್ಲಿ ಮಳೆ ಅಬ್ಬರಿಸಿದೆ. ಇದರಿಂದಾಗಿ 61,773 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಉದ್ದು, ಹುರಳಿ, ಸೋಯಾ ಬೆಳೆಗೆ ಹಾನಿಯಾಗಿದೆ. ಜಿಲ್ಲೆಯ ಭಾಲ್ಕಿ ಮತ್ತು ಹುಮನಾಬಾದ್ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ.

  Namma Metro ಕೊರೊನ ನಂತರ ಕೆಲವು ಮಹತ್ವದ ನಿರ್ಧಾರ ಕೈಗೊಂಡಿದೆ | Oneindia Kannada
  ಕುಡಿಯುವ ನೀರಿನ ಸಮಸ್ಯೆ ಪರಿಹಾರ

  ಕುಡಿಯುವ ನೀರಿನ ಸಮಸ್ಯೆ ಪರಿಹಾರ

  ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಕಾರಂಜಾ ಜಲಾಶಯಕ್ಕೆ ಭೇಟಿ ನೀಡಿದರು. ಜಲಾಶಯ ಭಾಗಶಃ ಭರ್ತಿಯಾಗಿದ್ದು ಇದರಿಂದ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಜೊತೆಗೆ 29 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಸಿಗಲಿದ್ದು, ರೈತರಿಗೆ ವರದಾನವಾಗಲಿದೆ ಎಂದರು.

  English summary
  Bidar deputy commissioner Ramachandran R. inspected rain effected areas in district. Bidar witnessed for heavy rain from September 18 to 20, 2020.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X