ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಿಮ್ಸ್‌ ಬಗ್ಗೆ ಕೋವಿಡ್ ರೋಗಿಗಳ ದೂರು, ಡಿಸಿ ದಿಢೀರ್ ಭೇಟಿ

|
Google Oneindia Kannada News

ಬೀದರ್, ಏಪ್ರಿಲ್ 22; ಬೀದರ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬ್ರಿಮ್ಸ್‌ನಲ್ಲಿ ಕೋವಿಡ್ ರೋಗಿಗಳಿಗೆ ಅಗತ್ಯಕ್ಕೆ ತಕ್ಕಂತೆ ಬೆಡ್ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ .ಆರ್ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್‌)ಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಮಾಹಿತಿಯನ್ನು ಪಡೆದರು.

ಬೀದರ್; ಡಿಸಿ ಸ್ಪಂದನೆ, ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆಬೀದರ್; ಡಿಸಿ ಸ್ಪಂದನೆ, ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ

ಬ್ರಿಮ್ಸ್ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲ, ಬೆಡ್‌ಗಳ ಲಭ್ಯತೆ ಇಲ್ಲ ಎಂಬುದು ಸುಳ್ಳು ವದಂತಿಯಾಗಿದೆ. ಬ್ರಿಮ್ಸ್‌ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಕೋವಿಡ್ ಬೆಡ್‌ಗಳು ಲಭ್ಯತೆ ಇದೆ.

ಕೋವಿಡ್ ಕೇಂದ್ರಗಳ ಸೋಂಕಿತರ ಸಮಸ್ಯೆ ಆಲಿಸಿದ ಮಂಡ್ಯ ಡಿಸಿಕೋವಿಡ್ ಕೇಂದ್ರಗಳ ಸೋಂಕಿತರ ಸಮಸ್ಯೆ ಆಲಿಸಿದ ಮಂಡ್ಯ ಡಿಸಿ

DC Ramachandran Visited Bidar Institute Of Medical Sciences

ಆಕ್ಸಿಜನ್ ಸರಬರಾಜು ಇದೆ. ರೆಮ್‌ಡಿಸಿವರ್ ಇಂಜೆಕ್ಷನ್ ಲಭ್ಯತೆ ಇದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ರತಿಕಾಂತ ಸ್ವಾಮಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. "ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು" ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಬಸ್ಸಿನಿಂದ ಕೆಳಗಿಳಿಸಿದ ಉಡುಪಿ ಡಿಸಿ: ವಿದ್ಯಾರ್ಥಿನಿಯ ಆಕ್ರೋಶ; ವಿಡಿಯೋ ವೈರಲ್ಬಸ್ಸಿನಿಂದ ಕೆಳಗಿಳಿಸಿದ ಉಡುಪಿ ಡಿಸಿ: ವಿದ್ಯಾರ್ಥಿನಿಯ ಆಕ್ರೋಶ; ವಿಡಿಯೋ ವೈರಲ್

ಜನರು ಕೋವಿಡ್‌ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಕೋವಿಡ್ ಪಾಸಿಟಿವ್ ವರದಿಯಾದ ಕೂಡಲೇ ನೇರವಾಗಿ ಬ್ರಮ್ಸ್‌ಗೆ ಬರದೇ ತಮ್ಮ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ತಪಾಸಣೆಗೆ ಒಳಗಾಗಿ, ಬಳಿಕ ತಾಲೂಕು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ತಾಲೂಕು ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೀದರ್‌ನ ಬ್ರಿಮ್ಸ್‌ಗೆ ಸೂಚಿಸಿದ್ದಲ್ಲಿ ಮಾತ್ರ ಇಲ್ಲಿ ಬಂದು ದಾಖಲಾತಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಜನರಿಗೆ ಕರೆ ನೀಡಿದರು.

Recommended Video

Vaccination ಮಾಡಿಸಿದರೆ ನಿಮಗಾಗುವ ಉಪಯೋಗವೇನು ಗೊತ್ತಾ | Oneindia Kannada

ಬುಧವಾರದ ವರದಿಯಂತೆ ಬೀದರ್‌ನಲ್ಲಿ 202 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 14,322ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,822.

English summary
Bidar deputy commissioner Ramachandran. R visited Bidar Institute of Medical Sciences and inspect the bed available for COVID patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X