ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀಕೆಂಡ್ ಕರ್ಪ್ಯೂಗೆ ಗಡಿ ಜಿಲ್ಲೆ ಬೀದರ್ ಫುಲ್ ಲಾಕ್!

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಏಪ್ರಿಲ್ 24: ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ಜಾರಿಗೊಳಿಸಿದ ವಾರಾಂತ್ಯದ ಕರ್ಪ್ಯೂಗೆ ಗಡಿ ಜಿಲ್ಲೆ ಬೀದರ್ ನಗರ ಫುಲ್ ಲಾಕ್ ಆಗಿದೆ.

ಅಚ್ಚರಿ ಏನೆಂದರೆ, ಪೊಲೀಸ್‌ರ ಪ್ರಯಾಸವಿಲ್ಲದೇ ನಗರ ಸ್ಥಬ್ಧವಾಗಿರುವುದು. ಬೆಳಗಿನಿಂದ ಅಗತ್ಯ ಸೇವೆಗಳು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳ ಬೀಗ ತೆಗೆದಿಲ್ಲ. ಜನರೂ ಅಷ್ಟೇ, ಅಲ್ಲೊಂದು ಇಲ್ಲೊಂದು ವಾಹನಗಳು ರಸ್ತೆಗಳಿಯುತ್ತಿದ್ದದ್ದು ಬಿಟ್ಟರೆ ಫುಲ್ ನಗರ ಬಿಕೋ ಎನ್ನುತ್ತಿವೆ.

ಕಳೆದ ಒಂದುವರೆ ತಿಂಗಳಿಂದ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾಗೆ ಸುಮಾರು 5- ಜನ ಬಲಿಯಾಗಿದ್ದು, ಇದು ಜನರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಹಾಗಾಗಿಯೇ ಸರ್ಕಾರ ಕೊರೋನಾ ತಡೆಯಲು ತೆಗೆದುಕೊಳ್ಳುತ್ತಿರುವ ಪ್ರತಿಯೊಂದು ಕಟ್ಟುನಿಟ್ಟಿನ ಕ್ರಮಗಳಿಗೆ ಜನರು ಸಹಕರಿಸುತ್ತಿದ್ದಾರೆ ಎನ್ನಲಾಗಿದೆ.

Covid 19 cases surge, Weekend Curfew full successful in Bidar

ಕಳೆದ ವರ್ಷ ಲಾಕ್ ಡೌನ್ ಹಾಗೂ ಸೀಲ್ ಡೌನ್ ಸಮಯದಲ್ಲಿ ಪ್ರತಿಯೊಂದು ವೃತಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೆ, ಈ ಬಾರಿ ಅಂಥ ಪರಿಸ್ಥಿತಿ ಇಲ್ಲ. ವೀರಳಾತಿವೀರಳ ಕಡೆಗಳಲ್ಲಿ ಮಾತ್ರ ಪೊಲೀಸ್‌ರು ಕಾಣಸಿಗುತ್ತಿದ್ದಾರೆ.

ವಾರಾಂತ್ಯದ ಕರ್ಪ್ಯೂ ಬಗ್ಗೆ ಕಳೆದೆರಡು ದಿನಗಳಿಂದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಾಕಷ್ಟು ಜಾಗೃತಿ ಮೂಡಿಸಿದ್ದು, ಜನ ಮನೆಯಿಂದ ಹೊರಬರದಿರುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಅಗತ್ಯ ಸೇವೆಗಳು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಜನ ಸಂಚಾರ ಕೂಡ ಅಷ್ಟಕಷ್ಟೆ. ಸರ್ಕಾರಿ ಕಚೇರಿಗಳಲ್ಲಿ ಕೂಡ ಸಿಬ್ಬಂದಿಗಳ ಹಾಜರಾತಿ ಕಡಿಮೆ ಇದ್ದು, ನಗರದಲ್ಲಿ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿದೆ.

ಬೆಳಿಗ್ಗೆ6 ಗಂಟೆಯಿಂದ ಬೆಳಿಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು.

ಜಿಲ್ಲೆಯಲ್ಲಿ ಕೋವಿಡ್ ಸಂಖ್ಯೆ ದಿನೆ ದಿನೇ ಹೆಚ್ಚುತ್ತಿದ್ದು, ಇದು ಜನರಲ್ಲೂ ಆತಂಕ ಹೆಚ್ಚಲು ಕಾರಣವಾಗಿದೆ. ಹಾಗಾಗಿಯೇ, ಜನ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಬಸ್ ಸಂಚಾರ ಎಂದಿನಂತೆ ಇದ್ದವಾದರೂ ಪ್ರಯಾಣಿಕರ ಓಡಾಟ ಕಂಡು ಬಂದಿಲ್ಲ.

Recommended Video

IPL ಗೆ ಗುಡ್ ಬೈ ಹೇಳಿದ T Natarajan | Oneindia Kannada

ಶುಕ್ರವಾರದ ವರದಿ ಪ್ರಕಾರ ಕೊರೋನಾ ಸೋಂಕಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 224ಕ್ಕೆ ಏರಿಕೆಯಾಗಿದೆ. 416 ಮಂದಿಗೆ ಸೋಂಕು ದೃಢಪಟ್ಟಿದ್ದು, 15134ಕ್ಕೆ ತಲುಪಿದೆ. 311 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ 3156 ಸಕ್ರಿಯ ಸೋಂಕು ಪ್ರಕರಣಗಳಿವೆ.

English summary
Due to surge in Covid 19 cases, Weekend Curfew imposed and its fully successful in Bidar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X