• search
 • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೀದರ್: ನಗರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್, ಖಾತೆ ತೆರೆದ ಆಪ್!

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಏಪ್ರಿಲ್ 30: ಬೀದರ್ ನಗರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಬೀಗಿದರೆ, ಆಮ್ ಆದ್ಮಿ ಪಕ್ಷ ಮೊದಲ ಬಾರಿ ಖಾತೆ ತೆರೆದಿದೆ.

ಆಡಳಿತರೂಢ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಭಾರೀ ಸರ್ಕಸ್ ನಡೆಸಿತ್ತಾದರೂ ಫಲ ನೀಡಿಲ್ಲ. ಲಾಕ್‌ಡೌನ್‌ನಿಂದಾಗಿ ಗೆದ್ದ ಅಭ್ಯರ್ಥಿಗಳಿಗೆ ತಮ್ಮ ಖುಷಿ ಹಂಚಿಕೊಳ್ಳಲೂ ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಮನಗರ ನಗರಸಭೆ 'ಕೈ' ವಶ, ಚನ್ನಪಟ್ಟಣ 'ತೆನೆ' ಪಾಲು: ಬಿಜೆಪಿಗೆ ಮುಖಭಂಗರಾಮನಗರ ನಗರಸಭೆ 'ಕೈ' ವಶ, ಚನ್ನಪಟ್ಟಣ 'ತೆನೆ' ಪಾಲು: ಬಿಜೆಪಿಗೆ ಮುಖಭಂಗ

35 ಸ್ಥಾನಗಳ ಬಲದ ಬೀದರ್ ನಗರಸಭೆಯಲ್ಲಿ ವಾರ್ಡ್ ನಂ.26 ಹಾಗೂ 32 ಸ್ಥಾನಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಇದೆ. ವಾರ್ಡ್ ನಂ.28ರ ಬಿಜೆಪಿ ಅಭ್ಯರ್ಥಿ ರಾಜಾರಾಂ ಅವಿರೋಧ ಆಯ್ಕೆಯಾಗಿದ್ದು, ಉಳಿದ 32 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದರೆ, ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 7 ಸ್ಥಾನಗಳಲ್ಲಿ ಗೆದ್ದಿದ್ದರೆ, ಎಂಐಎಐಎ ಪಕ್ಷ ಎರಡು ಸ್ಥಾನಗಳಲ್ಲಿ ವಿಜಯಿಯಾಗಿದ್ದು, ಆಪ್ ಕೂಡ ತನ್ನ ಚೊಚ್ಚಲ ಸ್ಪರ್ಧೆಯಲ್ಲಿ ಗೆಲುವಿನ ನಗೆ ಬೀರಿದೆ.

ಅಧಿಕಾರ ಹಿಡಿಯಲು 17 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್‌ಗೆ ಇನ್ನೆರಡು ಸ್ಥಾನಗಳ ಅಗತ್ಯವಿದೆ. ಮಿನಿ ಮಹಾಸಮರ ಎಂದೇ ಪರಿಗಣಿಸಲ್ಪಸುವ ನಗರಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು.

ಬೀದರ್ ನಗರದ ನೆಹರು ಕ್ರೀಡಾಂಗಣದ ಹತ್ತಿರವಿರುವ ಗುರುನಾನಕ್ ಪಬ್ಲಿಕ್ ಸ್ಕೂಲ್‌ನಲ್ಲಿ ನಗರಸಭೆ ಚುನಾವಣೆ ಮತ ಏಣಿಕೆ ಕಾರ್ಯ ನಡೆದಿದ್ದು, ಸುತ್ತಮುತ್ತ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವೊಂದು ಪಕ್ಷದ ಕಾರ್ಯಕರ್ತರೂ ಆ ಕಡೆಗೆ ಸುಳಿಯಲು ಅವಕಾಶ ಇರಲಿಲ್ಲ.

   ಆಸ್ಟ್ರೇಲಿಯ ಸರ್ಕಾರ ಕೊಟ್ಟಿದ್ದೆ ಖಡಕ್ ಎಚ್ಚರಿಕೆ !! | Oneindia Kannada

   ಮೊದಲ ಬಾರಿ ಬೀದರ್ ನಗರಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗೆದ್ದಿದ್ದು, ಬೀದರ್ ತಂಡಕ್ಕೆ ಅಭಿನಂದನೆಗಳನ್ನು ಆಮ್ ಆದ್ಮಿ ಪಕ್ಷ ತಿಳಿಸಿದೆ.

   English summary
   The Congress won the largest number of seats in the Bidar Municipal election, the first time the Aam Aadmi Party has opened an account.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X