ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕಲಚೇತನರ ಅಹವಾಲು: ಸ್ಥಳದಲ್ಲೇ ಪರಿಹಾರ ನೀಡಿದ ಕುಮಾರಸ್ವಾಮಿ

|
Google Oneindia Kannada News

ಬೀದರ್, ಜೂನ್ 27: ಸಿಎಂ ಕುಮಾರಸ್ವಾಮಿ ಅವರು ಜೂನ್ 27ರಂದು ಬೀದರ್‌ನಲ್ಲಿ ನಡೆದ ಜನತಾ ದರ್ಶನದಲ್ಲಿ ವಿಕಲಚೇತನರು ಹಾಗೂ ಪೋಷಕರ ಅಹವಾಲುಗಳನ್ನು ಆಲಿಸಿದರು.

ವಿಕಲಚೇತನ ಸಹೋದರನೊಂದಿಗೆ ಆಗಮಿಸಿದ ವಿದ್ಯಾರ್ಥಿನಿಯೊಬ್ಬಳು ತನ್ನ ತಮ್ಮನ ಆರೋಗ್ಯಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಬೇಕು. ನಾನು ಪಿಯುಸಿನಲ್ಲಿ ಶೇ. 94ರಷ್ಟು ಅಂಕಪಡೆದು ತೇರ್ಗಡೆಯಾಗಿದ್ದು, ಕೃಷಿ ಪದವಿಯಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಿ ಎಂದು ಕೋರಿದಳು.

ಬಿಗ್ ನ್ಯೂಸ್‌: ವೃದ್ದಾಪ್ಯ ವೇತನ, ಅಂಗವಿಕಲ ಮಾಸಾಶನ ಹೆಚ್ಚಿಸಿದ ಸಿಎಂಬಿಗ್ ನ್ಯೂಸ್‌: ವೃದ್ದಾಪ್ಯ ವೇತನ, ಅಂಗವಿಕಲ ಮಾಸಾಶನ ಹೆಚ್ಚಿಸಿದ ಸಿಎಂ

ಸೋದರ ಸೋದರಿಯರ ಸಂಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಿಎಸ್ ಸಿ ಪದವಿ ಓದಿಸಲು ಅಗತ್ಯ ನೆರವು ನೀಡುವುದಾಗಿ ಸ್ಥಳದಲ್ಲೇ ಪರಿಹಾರ ಸೂಚಿಸಿದರು.‌ ಜೊತೆಗೆ ಅವರಿಗೆ ಎರಡು ಲಕ್ಷ ರೂ ಬಿಡುಗಡೆ ಮಾಡಿದರು.

ಊರುಗೋಲು ಕೊಡಿಸುವುದಾಗಿ ಭರವಸೆ

ಊರುಗೋಲು ಕೊಡಿಸುವುದಾಗಿ ಭರವಸೆ

ಊರುಗೋಲು ಹಿಡಿದುಕೊಂಡು ಮುಖ್ಯಮಂತ್ರಿ ಅವರ ಬಳಿ‌ಬಂದ ಕೆಲವು ವಿಕಲಚೇತನರಿಗೆ ವಿಕಲಚೇತನರ ಇಲಾಖೆಯ ಮೂಲಕ ಊರುಗೋಲು ಕೊಡಿಸುವುದಾಗಿ ತಿಳಿಸಿದರು.

ಕಿಡ್ನಿ ವೈಫಲ್ಯ, ಹೃದಯ ಕಾಯಿಲೆಯವರಿಗೆ ಚಿಕಿತ್ಸೆ ಭರವಸೆ

ಕಿಡ್ನಿ ವೈಫಲ್ಯ, ಹೃದಯ ಕಾಯಿಲೆಯವರಿಗೆ ಚಿಕಿತ್ಸೆ ಭರವಸೆ

ಕಿಡ್ನಿ ವೈಫಲ್ಯ, ಹೃದಯ ಕಾಯಿಲೆ ಇರುವವರ ಅಹವಾಲು ಆಲಿಸಿದ ಮುಖ್ಯಮಂತ್ರಿಯವರು, ಜಯದೇವ ಮತ್ತು ನೆಪ್ರೋ ಯುರಾಲಜಿ ಇನಸ್ಟಿಟ್ಯೂಟ್ ಗಳ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿ ಅಗತ್ಯ ಚಿಕಿತ್ಸೆ ಕೊಡಲು ಸೂಚಿಸಿದರು.

ರಾಯಚೂರು ಜಿಲ್ಲೆ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಟ್ಟ ಕುಮಾರಸ್ವಾಮಿ ರಾಯಚೂರು ಜಿಲ್ಲೆ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಟ್ಟ ಕುಮಾರಸ್ವಾಮಿ

ಹಲವು ಕಾಮಗಾರಿಗಳಿಗೆ ಉದ್ಘಾಟನೆ

ಹಲವು ಕಾಮಗಾರಿಗಳಿಗೆ ಉದ್ಘಾಟನೆ

ಆರು ಜನರಿಗೆ ಅಂಗವಿಕಲರ ಪರಿಹಾರ ನಿಧಿಯಲ್ಲಿ ಪರಿಹಾರ ಘೋಷಣೆ ಮಾಡಿದರು. ಇದಷ್ಟೆ ಅಲ್ಲದೆ, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಅವರು ಚಾಲನೆ ನೀಡಿದರು.

ಬೀದರ್‌ನ ಉಚಳಂಬದಲ್ಲಿ ಗ್ರಾಮ ವಾಸ್ತವ್ಯ

ಬೀದರ್‌ನ ಉಚಳಂಬದಲ್ಲಿ ಗ್ರಾಮ ವಾಸ್ತವ್ಯ

ನಿನ್ನೆ ರಾಯಚೂರು ಜಿಲ್ಲೆ ಮಾನ್ವಿಯ ಕರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಅವರು ಇಂದು, ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲ್ಲೂಕಿನ ಉಚಳಂಬ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದಲ್ಲಿದ್ದಾರೆ.

ಉ. ಕರ್ನಾಟಕದ ಜನ ಜೆಡಿಎಸ್ ಸ್ವೀಕರಿಸದೇ ಇರುವುದು ಕುಮಾರಸ್ವಾಮಿ ಅಸಹನೆಗೆ ಕಾರಣವೇ? ಉ. ಕರ್ನಾಟಕದ ಜನ ಜೆಡಿಎಸ್ ಸ್ವೀಕರಿಸದೇ ಇರುವುದು ಕುಮಾರಸ್ವಾಮಿ ಅಸಹನೆಗೆ ಕಾರಣವೇ?

English summary
A young girl came with her disabled brother to met Kumaraswamy and ask for help, Kumaraswamy grant money to her brother's treatment, and instructed officers to give her educational support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X