ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ ಚುನಾವಣೆ; ಒಂದು ವಾರ ಸಿದ್ದರಾಮಯ್ಯ ಪ್ರಚಾರ

|
Google Oneindia Kannada News

ಬೀದರ್, ಏಪ್ರಿಲ್ 5; ಮೂರು ಕ್ಷೇತ್ರಗಳ ಉಪ ಚುನಾವಣೆ ಕಣ ರಂಗೇರಿದೆ. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ವಾರಗಳ ಕಾಲ ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.

ಏಪ್ರಿಲ್ 17ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ, ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಏಪ್ರಿಲ್ 5ರಿಂದ ಒಂದು ವಾರಗಳ ಕಾಲ ಸಿದ್ದರಾಮಯ್ಯ ಪ್ರಚಾರವನ್ನು ಕೈಗೊಳ್ಳಲಿದ್ದಾರೆ.

ಮಸ್ಕಿ ಉಪ ಚುನಾವಣೆ; ಜನರು ತಕ್ಕಪಾಠ ಕಲಿಸುವುದು ಯಾರಿಗೆ? ಮಸ್ಕಿ ಉಪ ಚುನಾವಣೆ; ಜನರು ತಕ್ಕಪಾಠ ಕಲಿಸುವುದು ಯಾರಿಗೆ?

ಏಪ್ರಿಲ್ 5 ಮತ್ತು 6ರಂದು ಸಿದ್ದರಾಮಯ್ಯ ಮಸ್ಕಿ ಕ್ಷೇತ್ರದ ವಿವಿಧ ಕಡೆ ಪ್ರಚಾರವನ್ನು ನಡೆಸಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಆರ್‌. ​ಬಸನಗೌಡ ತುರ್ವಿಹಾಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಬಸವಕಲ್ಯಾಣ; 10 ಕೋಟಿ ಆರೋಪಕ್ಕೆ ಎಚ್‌ಡಿಕೆ ಟ್ವೀಟ್ ಬಾಣ! ಬಸವಕಲ್ಯಾಣ; 10 ಕೋಟಿ ಆರೋಪಕ್ಕೆ ಎಚ್‌ಡಿಕೆ ಟ್ವೀಟ್ ಬಾಣ!

By Election Campaign By Siddaramaiah From April 5

2018ರ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಜಯಗಳಿಸಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಅವರು ಬಿಜೆಪಿ ಅಭ್ಯರ್ಥಿ.

ಬೆಳಗಾವಿ ಉಪ ಚುನಾವಣೆ; ಕಾಂಗ್ರೆಸ್ ಗೆಲುವಿಗೆ 60 ನಾಯಕರ ತಂಡ! ಬೆಳಗಾವಿ ಉಪ ಚುನಾವಣೆ; ಕಾಂಗ್ರೆಸ್ ಗೆಲುವಿಗೆ 60 ನಾಯಕರ ತಂಡ!

ಏಪ್ರಿಲ್ 7 ಮತ್ತು 8ರಂದು ಬಸವಕಲ್ಯಾಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ಪರವಾಗಿ ಪ್ರಚಾರವನ್ನು ನಡೆಸಲಿದ್ದಾರೆ. 2018ರ ಚುನಾವಣೆಯಲ್ಲಿ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.

ಏಪ್ರಿಲ್ 9 ಮತ್ತು 10ರಂದು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರವಾಗಿ ಮತಯಾಚನೆ ಮಾಡಲಿದ್ದಾರೆ.

Recommended Video

5 ಅಂಶಗಳ ಕಡೆ ಗಮನ ಹರಿಸದೇ ಇದ್ರೆ ಬೆಳಗಾವಿಯಲ್ಲಿ BJP ಕಥೆ ಅಷ್ಟೆ | Oneindia Kannada

ಸಿದ್ದರಾಮಯ್ಯ ಅವರು ಪುನಃ ಏಪ್ರಿಲ್ 11ರಂದು ಮಸ್ಕಿ, ಏಪ್ರಿಲ್ 12ರಂದು ಬಸವಕಲ್ಯಾಣ ಕ್ಷೇತ್ರದಲ್ಲಿ ಉಪ ಚುನಾವಣೆ ಪ್ರಚಾರವನ್ನು ಮಾಡಲಿದ್ದಾರೆ.

English summary
Opposition leader of Karnataka Siddaramaiah will campaign for Basavakalyan, Maski and Belagavi lok sabha seat by election from April 5, 2021. By elections will be held on April 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X