ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಶ್ವರ್ ಖಂಡ್ರೆ ನಾಮಪತ್ರ ತಿರಸ್ಕರಿಸುವಂತೆ ಬಿಜೆಪಿ ಅಭ್ಯರ್ಥಿ ದೂರು

|
Google Oneindia Kannada News

ಬೀದರ್, ಏಪ್ರಿಲ್ 05: ಬೀದರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ನಾಮಪತ್ರ ತಿರಸ್ಕೃತವಾಗುವ ಆತಂಕ ಎದುರಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಶ್ವರ್ ಖಂಡ್ರೆ ಅವರು ಸುಳ್ಳು ಮಾಹಿತಿಯನ್ನು ನಾಮಪತ್ರದಲ್ಲಿ ನೀಡಿದ್ದು, ಅವರು ನಾಮಪತ್ರ ತಿರಸ್ಕೃತಗೊಳಿಸಬೇಕು ಎಂದು ಅವರ ಎದುರಾಳಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಆಕಾಶದಿಂದ ಇಂದ್ರ, ಚಂದ್ರ ಚುಕ್ಕಿಯನ್ನು ನರೇಂದ್ರ ಮೋದಿ ತಂದರೇ? ಈಶ್ವರ್ ಖಂಡ್ರೆ ವಾಗ್ದಾಳಿಆಕಾಶದಿಂದ ಇಂದ್ರ, ಚಂದ್ರ ಚುಕ್ಕಿಯನ್ನು ನರೇಂದ್ರ ಮೋದಿ ತಂದರೇ? ಈಶ್ವರ್ ಖಂಡ್ರೆ ವಾಗ್ದಾಳಿ

ಖಂಡ್ರೆ ಅವರು ತಮ್ಮ ನಾಮಪತ್ರದಲ್ಲಿ ತಮ್ಮ ಬಳಿ ಯಾವುದೇ ಕೃಷಿ ಭೂಮಿ ಇಲ್ಲ ಎಂದು ನಮೂದಿಸಿದ್ದಾರೆ, ಆದರೆ ಭಾಲ್ಕಿ ನಗರದಲ್ಲಿ ಅವರ ಪತ್ನಿ ಜೊತೆ ಜಂಟಿಯಾಗಿ 2.12 ಎಕರೆ ಜಮೀನು ಹೊಂದಿದ್ದಾರೆ, ಈ ವಿಷಯವನ್ನು ಆಯೋಗದಿಂದ ಮುಚ್ಚಿಟ್ಟಿದ್ದಾರೆ ಎಂದು ಖೂಬಾ ಅವರು ದೂರಿನಲ್ಲಿ ಹೇಳಿದ್ದಾರೆ.

 BJP cadidate complaint EC against Eshwar Khandre

ಅಷ್ಟೆ ಅಲ್ಲದೆ, ಕೃಷಿ ಭೂಮಿ ಇಲ್ಲವೆಂದು ನಾಮಪತ್ರದಲ್ಲಿ ಹೇಳಿದ್ದರೂ ಸಹ, ಅದೇ ನಾಮಪತ್ರದಲ್ಲಿ ಆದಾಯದ ಮೂಲ ಕೃಷಿ ಎಂದು ನಮೂದಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಲೂಟಿಕೋರರನ್ನು ಜೈಲಿಗಟ್ಟುತ್ತೇವೆ, ಹಾವೇರಿಯಲ್ಲಿ ರಾಹುಲ್ ಕಾವೇರಿದ ಭಾಷಣ ಲೂಟಿಕೋರರನ್ನು ಜೈಲಿಗಟ್ಟುತ್ತೇವೆ, ಹಾವೇರಿಯಲ್ಲಿ ರಾಹುಲ್ ಕಾವೇರಿದ ಭಾಷಣ

ನಾಮಪತ್ರದಲ್ಲಿ ತಪ್ಪು ಮಾಹಿತಿ ನೀಡಿರುವ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಭಗವಂತ ಖೂಬಾ ಅವರು ಆಯೋಗಕ್ಕೆ ಮನವಿ ಮಾಡಿದ್ದಾರೆ.

English summary
BJP candidate Bhagvanth Khuba complaint EC against Eshwar Khandre. He said Eshwar Khandre given wrong information in his nomination so it should be rejected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X