ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ ಮೂಲಕ ಬೀದರ್-ಯಶವಂತಪುರ ರೈಲು ಸಂಚಾರ

|
Google Oneindia Kannada News

ಬೀದರ್, ಮಾರ್ಚ್ 03 : ಬೀದರ್ ಜಿಲ್ಲೆಯ ಜನರ ಬಹು ದಿನದ ಬೇಡಿಕೆ ಈಡೇರಿದೆ. ಬೀದರ್ ಮತ್ತು ಯಶವಂತಪುರ ನಡುವಿನ ರೈಲು ಕಲಬುರಗಿ ಮೂಲಕ ಸಂಚಾರ ನಡೆಸಲು ಒಪ್ಪಿಗೆ ನೀಡಲಾಗಿದೆ.

ಬೀದರ್ ಕ್ಷೇತ್ರದ ಬಿಜೆಪಿ ಸಂಸದ ಭಗವಂತ ಖೂಬಾ ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಭೇಟಿ ಮಾಡಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿರುವುದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಯಶವಂತಪುರ-ವಾಸ್ಕೋ ರೈಲು ಸಂಚಾರಕ್ಕೆ ಮುಹೂರ್ತ ನಿಗದಿ ಯಶವಂತಪುರ-ವಾಸ್ಕೋ ರೈಲು ಸಂಚಾರಕ್ಕೆ ಮುಹೂರ್ತ ನಿಗದಿ

ಬೀದರ್ ಮತ್ತು ಬೆಂಗಳೂರಿನ ಯಶವಂತಪುರ ನಡುವಿನ ರೈಲು ಕಲಬುರಗಿ ಮೂಲಕ ಸಂಚಾರ ನಡೆಸಲು ನೈಋತ್ಯ ರೈಲ್ವೆ ಒಪ್ಪಿಗೆ ಕೊಟ್ಟಿದೆ. ಈ ಮೊದಲು ತೆಲಂಗಾಣದ ಸಿಕಂದರಾಬಾದ್ ಮಾರ್ಗವಾಗಿ ಬೀದರ್-ಯಶವಂತಪುರ ರೈಲು ಸಂಚಾರ ನಡೆಸುತ್ತಿತ್ತು.

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ಮೊದಲ ಹೆಜ್ಜೆ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ಮೊದಲ ಹೆಜ್ಜೆ

Bidar Yesvantpur Train Via Kalaburagi soon

ಬೀದರ್-ಯಶವಂತಪುರ ರೈಲು ಕಲಬುರಗಿ ಮೂಲಕ ಸಂಚಾರ ನಡೆಸಿದರೆ ಸಮಯ ಉಳಿತಾಯವಾಗಲಿದೆ. ಆದ್ದರಿಂದ, ಬೀದರ್ ಜಿಲ್ಲೆಯ ಜನರು ಕಲಬುರಗಿ ಮೂಲಕ ರೈಲು ಸಂಚಾರಕ್ಕೆ ಬೇಡಿಕೆ ಇಟ್ಟಿದ್ದರು.

ವಿಜಯಪುರ-ದೆಹಲಿ ನಡುವೆ ನೇರ ರೈಲು? ವಿಜಯಪುರ-ದೆಹಲಿ ನಡುವೆ ನೇರ ರೈಲು?

ಬೀದರ್-ಯಶವಂತಪುರ ರೈಲು ಕಲಬುರಗಿ ಮೂಲಕ ಸಂಚಾರ ನಡೆಸಲು ಒಪ್ಪಿಗೆ ಸಿಕ್ಕಿದೆ. ಆದರೆ, ದಿನಾಂಕ ಮಾತ್ರ ನಿಗದಿಯಾಗಿಲ್ಲ. ಶೀಘ್ರವೇ ಈ ಕುರಿತು ಅಧಿಕೃತ ಆದೇಶ ಮತ್ತು ರೈಲು ಸಂಚಾರದ ದಿನಾಂಕ ನಿಗದಿಯಾಗುವ ನಿರೀಕ್ಷೆ ಇದೆ.

ಭಗವಂತ ಖೂಬಾ ಮಾಡಿರುವ ಟ್ವೀಟ್

English summary
South Western railway approved for the train between Yesvantpur and Bidar via Kalaburagi. Train service will start soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X